No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Wednesday, February 4, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಲ್ಪ ನ್ಯೂಸ್ ವಿನೂತನ ಪ್ರಯತ್ನ: ಚುನಾವಣಾ ಸಮೀಕ್ಷೆ ವರದಿ-1

ಕಲ್ಪ ನ್ಯೂಸ್ ‘ಲೋಕಾ’ ಯಾತ್ರೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹ : ವಾಸ್ತವ ಸಮೀಕ್ಷಾ ವರದಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 7, 2019
in Special Articles
0
ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಲ್ಪ ನ್ಯೂಸ್ ವಿನೂತನ ಪ್ರಯತ್ನ: ಚುನಾವಣಾ ಸಮೀಕ್ಷೆ ವರದಿ-1
Share on FacebookShare on TwitterShare on WhatsApp

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ.

ವಿವಿಧ ಬಡಾವಣೆ, ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ವರ್ಗದ ಮತದಾರರ ಅಭಿಪ್ರಾಯಗಳನ್ನು ನಾವು ಸಂಗ್ರಹಿಸಿದ್ದೇವೆ. ಅಲ್ಲದೇ ಅಭ್ಯರ್ಥಿಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನೂ ಸಹ ಹಲವರು ವ್ಯಕ್ತಪಡಿಸಿದ್ದಾರೆ.

ಈ ಸಮೀಕ್ಷೆಗೂ ಯಾವುದೇ ರಾಜಕೀಯ ಪಕ್ಷಗಳಿಗೂ ಸಂಬಂಧವಿರುವುದಿಲ್ಲ ಹಾಗೂ ಯಾವ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ಇದು ಮತದಾರನ ಮನದಾಳದ ಅಭಿಪ್ರಾಯ ಸಂಗ್ರಹವಷ್ಟೇ ಆಗಿದ್ದು, ನಮ್ಮ ಡಿಜಿಟಲ್ ಮೀಡಿಯಾದ ಪ್ರಾಮಾಣಿಕ ಪ್ರಯತ್ನವಾಗಿದೆ. ಈ ಅನಿಸಿಕೆಗಳನ್ನು ನಿಯಮಿತವಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ಪ್ರಕಟಿಸಲಾಗುತ್ತದೆ. ಇಲ್ಲಿ ಕೆಲವು ಅನಿಸಿಕೆಗಳನ್ನು ಪ್ರಕಟಿಸಿ, ಕೊನೆಯಲ್ಲಿ ಒಟ್ಟಾರೆ ಸಮೀಕ್ಷೆಯ ಕುರಿತಾಗಿ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇವೆ.

ಸಾಗರ ಭಾಗದ ಉಳ್ಳೂರು, ಹೆಗ್ಗೋಡು, ಗೆಣಸಿನಕುಣಿ ಆವಿನಹಳ್ಳಿ, ಅತ್ತಿಸರಗಳಲ್ಲಿ ಮತದಾರರ ಒಲವು-ನಿಲುವು ಹೀಗಿದೆ:

ಉಳ್ಳೂರು ಗ್ರಾಮ ಪಂಚಾಯತ್ ಸುಮಾರು ನಾಕುಸಾವಿರ ಮತಗಳುಳ್ಳ ಪ್ರದೇಶ. ಹಿಂದೆ ಬೇಳೂರು ಗೋಪಾಲಕೃಷ್ಣ ಅವರ ಶಾಸಕತ್ವ ಅವಧಿಯಲ್ಲಿ ಉಳ್ಳೂರು ಕೆರೆಗೆ 12 ರೂ. ಮಂಜೂರಾಗಿತ್ತು. ಆದರೆ 2 ಲಕ್ಷ ರೂ.ನಷ್ಟು ಸಹ ಕೆಲಸ ಆಗಿರಲಿಲ್ಲ. ಕಾಗೋಡು ಅವರ ಅವಧಿಯಲ್ಲಿ ಕೆರೆಯ ಕಲಸ ಶುರುವಾಗಲೇ ಇಲ್ಲ.ಆದರೆ ಅವರು ಕೂಲಿ ಕಾರ್ಮಿಕರ ಬಗ್ಗೆ ಮನೆ, ಶೆಡ್ಡುಗಳ ನಿರ್ಮಾಣ ಮಾಡಿ ಸ್ಪಂದಿಸಿದ್ದರು. ವೈಯಕ್ತಿಕ ಕಾರಣಗಳಿಂದ ಸೋತರು.

-ಗಿರೀಶ್ ಮತ್ತು ರಾಘವೆಂದ್ರ, ಯುವಕೃಷಿಕರು, ಉಳ್ಳೂರು

““““““““““““`
ಆವಿನಹಳ್ಳಿ ಗ್ರಾಮ ಪಂಚಾಯತ್’ನಲ್ಲಿ ಸುಮಾರು ಏಳುಸಾವಿರ ಮತದಾರರಿದ್ದಾರೆ. ನಮ್ಮ ಆತ್ಮದಲ್ಲಿ ಹೇಳತ್ತೆ ಯಡ್ಯೂರಪ್ಪನ ಮಗ ರಾಘವೇಂದ್ರ ಬರ್ಬೇಕು. ನೋಡ್ರೀ ನೀವು ಏನೇ ಹೇಳ್ರೀ ಜಾತೀನೇ ನಡೆಯೋದು. ಇಲ್ಲಿ ಬಿಜೆಪಿಗೇ ಲಿಂಗಾಯತರ ಮತ. ಅಲ್ಲದೇ ಮೋದಿ ಹವಾ ಇದೆ.

-ಶಂಕರಪ್ಪ, ಹಿರಿಯ ಕೃಷಿಕ, ಮತ್ತಿಕೊಪ್ಪ

““““““““““““`
ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್’ಗೆ ಸಮ ಸಮ ಇದೆ.
-ಪುಟ್ಟ ಅಂಗಡಿ ನಡೆಸುವ ಮಹಿಳೆ,
ಗೆಣಸಿನಕುಣಿ

““““““““““““`
ನಮ್ಮೂರಿಗೆ ಇವತ್ತಿಗೂ ಸರಿಯಾದ ರಸ್ತೆ ಇಲ್ಲ. ಜನರಿಗೆಲ್ಲ ತೊಂದರೆಯಾಗಿದೆ. ಶಾಸಕರು ಬಗೆಹರಿಸುತ್ತಾರೆಂಬ ಭರವಸೆಯಿದೆ. ಆದರೂ ಮೋದಿ ಹವಾ ಇದೆ. ಬಿಜೆಪಿಗೆ ನಮ್ಮ ಒಲವು.

-ಹೋಟೆಲ್’ನಲ್ಲಿ ಊಟ ಮಾಡುತ್ತಿದ್ದ ಹೆಗ್ಗೋಡು ಸನಿಹದ ಸುತ್ತಿಗದೆಲೆ ಗ್ರಾಮದ ಅಪ್ಪಮಗ ತಾರಕೇಶ್ ಮತ್ತು ಸಿದ್ದಪ್ಪಗೌಡರು ನಮ್ಮೊಂದಿಗೆ ಮಾತನಾಡುತ್ತಾ….

““““““““““““`
ಮೋದೀನೇ ಸರ್ ನಮ್ಮ ದೇಶಾನ ಸರಿಯಾಗಿ ನಡೆಸೋರು. ರಕ್ಷಣೆ ಮಾಡೋವ್ರು. ಅವರಿಗೇ ನಮ್ಮ ಮತ(ಹರ್ಷಚಿತ್ತರಾಗಿ)

ರಾಜು, ಪಾನ್’ಬೀಡಾ ಅಂಗಡಿ ಮಾಲಿಕ, ಗೆಣಸಿನಕುಣಿ

““““““““““““`
ಹಾಲಿ ಸಂಸದರ ಜನಸಂಪರ್ಕ ಕಡಿಮೆ. ಅವರು ಸರಿಯಾಗಿ ಜನರಿಗೆ ರೀಚ್ ಆಗಿಲ್ಲ. ಕೇವಲ ರೈಲು ತಂದ್ರು, ಸೇತುವೆ ಕೆಲಸ ..ಅಂತಾನೇ ಗುರುತು ಮಾಡಿ ಹೇಳೋಹಂಗಿಲ್ಲ. ಏನೋ ಒಂದು ಬಾರಿ ಸಂಸದನ ಅವಧಿಯಲ್ಲಿದ್ದೆ. ಮತ್ತೆ ಚುನಾಯಿತನಾಗಿದ್ದೆ ಅನ್ನೋ ಓವರ್ ಕಾನ್ಫಿಡೆನ್ಸ್‌ ಅಷ್ಟೆ. ಆದರೆ ಈ ನಮ್ಮ ಯುವ ಜನ ಇದ್ದಾರಲ್ಲ ಅವಕ್ಕೆ ಯಾವ ಜಾತಿ ಇಲ್ಲ. ಅವರಿಗೆ ಮೋದೀನೇ ಬೇಕು. ಹಾಗಾಗಿ ಬಿಜೆಪಿಗೆ ಇಲ್ಲಿ ಭರವಸೆಯಿದೆ. ಇಲ್ಲಿ ಜನ ದೇಶ, ಮೋದಿ ಅವರತ್ತ ನೋಡ್ತಾರೆ.

-ರವೀಂದ್ರ, ಅತ್ತಿಸರದ ಕೃಷಿಕ, ಹೆಗ್ಗೋಡು ಗ್ರಾಮ ಪಂಚಾಯತ್
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:

ಈಗ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಗ್ರಾಮ ಪಂಚಾಯತ್’ನಲ್ಲಿನ ಮತದಾರನ ಒಲವೇ ಬೇರೆಯದಾಗಿದೆ. ಮೈತ್ರಿ ಪಕ್ಷದ ಅಭ್ಯರ್ಥಿಯ ಜಾತಿಯವರೇ ಸಾಗರದ ಶಾಸಕರಾಗಿದ್ದಾರೆ. ಆದರೆ ಹಾಲಪ್ಪನವರು ಶ್ರಮ ಹಾಕಿದರೆ ಇಡೀ ಪಂಚಾಯತ್ ಪೂರ್ಣಮತಗಳನ್ನು ಬಿಜೆಪಿ ಕೊಳ್ಳೆ ಹೊಡೆಯಲು ಸಾಧ್ಯವಿದೆ. ಈಡಿಗರೇ ಅಧಿಕವಿದ್ದರೂ ವಿನ್ನಿಂಗ್ ವೋಟ್ಸ್‌ ಇರುವುದು ಲಿಂಗಾಯತ ಮತ್ತು ಬ್ರಾಹ್ಮಣರ ಮತಗಳಲ್ಲಿ. ಹೀಗಾಗಿ ಬಿಜೆಪಿ ಈ ಎರಡೂ ಪಂಗಡಗಳ ಒಲವು ಪಡೆದಿದೆ. ಜೊತೆಗೆ ಮೋದಿಯನ್ನು ಮೆಚ್ಚುವ ಯುವ ಜನರಿದ್ದಾರೆ. ಅವರೆಲ್ಲರ ಮತ ಪೂರ್ಣ ಬಿಜೆಪಿಗೆ.

ಹಾಲಿ ಸಂಸದ ಬಿವೈಆರ್ ಅವರು ತುಮರಿ ಸೇತುವೆ ಕಾಮಗಾರಿಯನ್ನು ಸಚಿವ ಗಡ್ಕರಿಯವರ ಕೈಯಲ್ಲಿ ಉದ್ಘಾಟನೆ ಮಾಡಿದ್ದು ಇನ್ನೂ ಹಸಿರಾಗಿದೆ. ಮತ್ತೂ ಒಂದು ಪ್ಲಸ್ ಪಾಯಿಂಟ್ ಅಂದರೆ ಹಾಲಿ ಶಾಸಕರು ಮತ್ತು ಸಂಸದರು ಜನಕ್ಕೆ ಸುಲಭ ಸಿಗುತ್ತಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಒಟ್ಟಾರೆಯಾಗಿ ನೋಡುವುದಾರೆ, ಈ ಭಾಗದಲ್ಲಿ ಮಿಶ್ರ ಅಭಿಪ್ರಾಯವಿದ್ದು, ಜನಮತ ತೆರೆದು ಪುಸ್ತಕದಂತಿದೆ ಎಂದಷ್ಟೇ ನಾವು ಹೇಳಬಹುದು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ

ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Tags: BJPcongressElection Survey in KannadaKalpa News Digital MediaKannada NewsLoksabha election 2019Malnad Newssagara assembly constituencyShivamoggaSpecial Articleಕಲ್ಪ ನ್ಯೂಸ್ ಲೋಕಾ ಯಾತ್ರೆಚುನಾವಣಾ ಸಮೀಕ್ಷೆಲೋಕಸಭಾ ಚುನಾವಣೆ-2019ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ
Share196Tweet123Send
Previous Post

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ: ಎಸ್’ಪಿಗೆ ದೂರು

Next Post

ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ಹಣದ ಬೇಡಿಕೆಯಿಟ್ಟ ಮಾದೇಗೌಡ! ಆಡಿಯೋ ಬಹಿರಂಗ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ಹಣದ ಬೇಡಿಕೆಯಿಟ್ಟ ಮಾದೇಗೌಡ! ಆಡಿಯೋ ಬಹಿರಂಗ

ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ಹಣದ ಬೇಡಿಕೆಯಿಟ್ಟ ಮಾದೇಗೌಡ! ಆಡಿಯೋ ಬಹಿರಂಗ

Leave a Reply Cancel reply

Your email address will not be published. Required fields are marked *

  • Trending
  • Latest
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
25 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸೂಡಾ ಅಧ್ಯಕ್ಷ ಸುಂದರೇಶ್ ಗುದ್ದಲಿಪೂಜೆ

25 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸೂಡಾ ಅಧ್ಯಕ್ಷ ಸುಂದರೇಶ್ ಗುದ್ದಲಿಪೂಜೆ

February 4, 2026
ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಮಾರಿಕಾಂಬಾ ಜಾತ್ರೆ ಆಚರಿಸಿ: ಪರ್ಯಾವರಣ ಟ್ರಸ್ಟ್ ಕರೆ

ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಮಾರಿಕಾಂಬಾ ಜಾತ್ರೆ ಆಚರಿಸಿ: ಪರ್ಯಾವರಣ ಟ್ರಸ್ಟ್ ಕರೆ

February 4, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

February 4, 2026
ನಟ ಅರ್ಜುನ್ ಕಪೂರ್ ಅವರ ‘ಸ್ಪೀಡ್ ಡೆಮನ್ಸ್ ದೆಹಲಿ’ ತಂಡದಲ್ಲಿ ಅಂತರಾಷ್ಟ್ರೀಯ ಸ್ಟಾರ್‌ಗಳ ಅಬ್ಬರ!

ನಟ ಅರ್ಜುನ್ ಕಪೂರ್ ಅವರ ‘ಸ್ಪೀಡ್ ಡೆಮನ್ಸ್ ದೆಹಲಿ’ ತಂಡದಲ್ಲಿ ಅಂತರಾಷ್ಟ್ರೀಯ ಸ್ಟಾರ್‌ಗಳ ಅಬ್ಬರ!

February 4, 2026
ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

February 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL