ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಭಿಜಾತ ಭಾಷೆ ಸ್ಥಾನಮಾನ ಹೊಂದಿರುವ ಕನ್ನಡ #Kannada ಭಾಷೆಯನ್ನು ಪ್ರತಿ ಹಂತದಲ್ಲಿ ಬಳಸಿದಾಗ ಮಾತ್ರ ಭಾಷೆ ಉತ್ಕೃಷ್ಟವಾಗಿ ಬೆಳೆಯಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ #NES ಕಾರ್ಯದರ್ಶಿ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ #KannadaRajyotsava ಕಾರ್ಯಕ್ರಮ ಹಾಗೂ ಅಂತರ ಕಾಲೇಜು ವಿದ್ಯಾರ್ಥಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನದೊಂದಿಗೆ ಶ್ರೀಮಂತ ಭಾಷೆಯಾಗಿದೆ. ಭಾಷಾ ಶುದ್ಧತೆಯನ್ನು ಕಾಪಾಡಲು ಕೇಂದ್ರಿಕರಿಸಿದ ಹಿನ್ನಲೆಯಲ್ಲಿ ಇಂದು ಅನೇಕ ಭಾಷೆಗಳು ಅಳಿವಿನ ಅಂಚಿಗೆ ಬಂದಿದೆ. ಅದರೇ ಕನ್ನಡ ಜನ ಸಾಮಾನ್ಯರ ಭಾಷೆಯಾಗಿದ್ದು, ಅಂತಹ ಯಾವುದೇ ಅಳಿವಿನ ಆತಂಕಗಳಿಲ್ಲ ಎಂದು ಹೇಳಿದರು.
ಸಹ ಪ್ರಾಧ್ಯಾಪಕರಾದ ಆರಡಿ ಮಲ್ಲಯ್ಯ ಮಾತನಾಡಿ, ಇಂಗ್ಲೀಷ್ ತನದಲ್ಲಿ ವೃತ್ತಿಯನ್ನು ಮಾಡಿ ಕನ್ನಡತನದಲ್ಲಿ ಬದುಕಿದ ಅನೇಕ ಚೇತನಗಳು, ಕನ್ನಡಕ್ಕೆ ವಿಶಿಷ್ಟ ಘನತೆಯನ್ನು ತಂದು ಕೊಟ್ಟಿದ್ದಾರೆ. ಕನ್ನಡವು #Kannada ಅನ್ನ ಕೊಡುವ ಭಾಷೆಯಾಗಿದ್ದು ನಾವು ಹೇಗೆ ದುಡಿಸಿಕೊಳ್ಳುತ್ತೇವೆ ಎಂಬ ಆಧಾರದ ಮೇಲೆ ನಿಂತಿದೆ. ಯುವ ಜನತೆ ಕನ್ನಡ ಭಾಷೆಯನ್ನು ಹೇಗೆ ಅವಲೋಕಿಸುತ್ತಿದ್ದಾರೆ ಎಂಬ ಪ್ರಯೋಗಗಳು ನಡೆಯಬೇಕಿದೆ ಎಂದು ಹೇಳಿದರು.
ಡಿವಿಎಸ್ ಕಾಲೇಜಿನ ವಿದ್ಯಾರ್ಥಿ ರಂಜಿತಾ.ಎಸ್.ವಿ ಕನ್ನಡದ ಇತ್ತೀಚಿನ ಸಿನಿಮಾ ಮತ್ತು ಯುವಜನತೆ ಕುರಿತಾಗಿ ಮಾತನಾಡಿ, ಕನ್ನಡ ಚಲನಚಿತ್ರವೆಂಬುದು ಶ್ರೀಗಂಧದಂತೆ. ಕನ್ನಡ ಸಾಹಿತ್ಯ ಯುವಸಮೂಹದಲ್ಲಿ ರಸಾನುಭವ ನೀಡಿದಂತೆ, ಸಿನಿಮಾಗಳು ಅನೇಕ ಪ್ರೇರಣೆಗಳನ್ನು ನೀಡುತ್ತಿದೆ. ಭಾಷಾಭಿಮಾನವನ್ನು ವೃದ್ದಿಸುವಲ್ಲಿ ಹಾಗೂ ಯುವ ಶಕ್ತಿಯನ್ನು ಸಂಘಟಿಸುವಲ್ಲಿ ಚಲನಚಿತ್ರ ರಂಗದ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಸ್.ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಅಣ್ಣಪ್ಪ ಮಳೀಮಠ ವಿದ್ಯಾರ್ಥಿಗಳ ಪ್ರಬಂಧ ಮಂಡನಾ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಎಜ್ಯುರೈಟ್ ಕಾಲೇಜಿನ ವಿದ್ಯಾರ್ಥಿ ಹರ್ಷಾ ರಮಣಿ, ಎ.ಟಿ.ಎನ್.ಸಿ.ಸಿ ಕಾಲೇಜಿನ ನಂದೀಶ.ಕೆ.ಆರ್ ಕನ್ನಡ ಕಟ್ಟುವ ಬಗೆ ಕುರಿತು ಮಾತನಾಡಿದರು.
ಎಸ್.ಆರ್.ಎನ್.ಎಂ ಕಾಲೇಜಿನ ವಿದ್ಯಾರ್ಥಿ ಐಶ್ವರ್ಯ, ಸಹ್ಯಾದ್ರಿ ಕಲಾ ಕಾಲೇಜಿನ ಏಕಾಂತ. ಎಸ್ ಕನ್ನಡದ ಅಸ್ಮಿತೆ ಕುರಿತಾಗಿ, ಹೊಯ್ಸಳ ಕಾಲೇಜಿನ ಲಕ್ಷ್ಮೀ.ಆರ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರವಿ ಮಲ್ಲಿಕಾರ್ಜುನ, ನಿಖಿತಾ.ಎಚ್.ಎನ್ ತಾಂತ್ರಿಕ ಶಿಕ್ಷಣ ಮತ್ತು ಕನ್ನಡ ಕುರಿತಾಗಿ ಮಾತನಾಡಿದರು. ಕಟೀಲ್ ಅಶೋಕ್ ಪೈ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಭಾಗವತ್ ಎನ್.ಇ.ಪಿ ಮತ್ತು ಕನ್ನಡ ಪಠ್ಯಗಳು ಕುರಿತಾಗಿ, ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿ ದಿವ್ಯ.ಎಂ ಸಮೂಹ ಮಾಧ್ಯಮಗಳ ಕುರಿತಾಗಿ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post