ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಕಾಂತಾರಾ: ಚಾಪ್ಟರ್ 1 #KantaraChapter1 ಸಿನಿಮಾ ಬಿಡುಗಡೆಯಾದ ಮೂರೇ ವಾರದಲ್ಲಿ ಹೊಸ ದಾಖಲೆ ಬರೆದಿದ್ದು, ಹಲವು ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿದೆ.
ಚಿತ್ರದ ಕುರಿತು ಹೊಂಬಾಳೆ ಫಿಲ್ಮ್ಸ್ #HombaleFilms ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದಲ್ಲಿ 600 ಕೋಟಿ ರೂಪಾಯಿ ಗಳಿಕೆಯ ಸನಿಹದಲ್ಲಿರುವ ವೇಳೆಯೇ, ವಿಶ್ವದ ಬಾಕ್ಸ್ ಆಫೀಸ್ ಲೆಕ್ಕದ ವಿಚಾರವನ್ನು ಹಂಚಿಕೊಂಡಿದೆ.

ಅ.2ರಂದು ಬಿಡುಗಡೆಯಾದ ಕಾಂತಾರಾ: ಚಾಪ್ಟರ್ 1 ಚಿತ್ರ ಮೂರು ವಾರಗಳಲ್ಲಿ 818 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಕಳೆದ ವಾರವೂ ಹೊಂಬಾಳೆ ಫಿಲ್ಮ್ಸ್ ಗಳಿಕೆ ಲೆಕ್ಕ ನೀಡಿತ್ತು. ಈ ಸಂದರ್ಭದಲ್ಲಿ 700+ ಕೋಟಿ ರೂಪಾಯಿ ಗಳಿಕೆ ಆಗಿದ್ದಾಗಿ ಹೇಳಿತ್ತು. ಅಂದರೆ ಕಳೆದ ಒಂದು ವಾರದಲ್ಲಿ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದಂತೆ ಆಗಿದೆ. ಕೆಜಿಎಫ್ 2′ ಬಳಿಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆ ಈ ಸಿನಿಮಾಗೆ ಸಿಕ್ಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post