ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಪ್ರಶ್ನೆ: ನನ್ನ ಹೆಸರು ಪ್ರತಾಪ್. ನಾನು ಶಿವಮೊಗ್ಗ ನಗರದ ನಿವಾಸಿ. ನಮ್ಮ ತಂದೆಗೆ ನಾವು ನಾಲ್ಕು ಮಂದಿ ಮಕ್ಕಳು. 40 ವರ್ಷದ ಹಿಂದೆ ನಮ್ಮ ಅಜ್ಜನವರು ದಾನ ಪತ್ರದ ಮೂಲಕ ನನಗೆ ಶಿವಮೊಗ್ಗ ನಗರದಲ್ಲಿ 1,645 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಿಸಿದ ಮನೆಯೊಂದನ್ನು ನೀಡಿದ್ದರು. ಈ ದಾನ ಪಾತ್ರ ನೋಂದಣಿ ಕೂಡ ಆಗಿದೆ. ನನ್ನ ಅಣ್ಣ ಹಾಗು ಇಬ್ಬರು ತಂಗಿಯರು ಈಗ ಈ ಆಸ್ತಿಯಲ್ಲಿ ನಮಗೂ ಪಾಲು ಬೇಕು ಎಂದು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳುತ್ತಿದ್ದಾರೆ. ನನ್ನ ಸಹೋದರ ಹಾಗು ತಂಗಿಯರಿಗೆ ಈ ಆಸ್ತಿಯಲ್ಲಿ ಪಾಲು ಸಿಗುವುದೇ?
ಉತ್ತರ: ನೋಂದಾಯಿತ ದಾನ ಪಾತ್ರದ ಮೂಲಕ ನಿಮಗೆ ಸಿಕ್ಕಿರುವ ಆಸ್ತಿಯು ನಿಮ್ಮ ಸ್ವಯಾರ್ಜಿತ ಸ್ವತ್ತು ಎಂದೇ ಪರಿಗಣಿಸಲ್ಪಡುತ್ತದೆ. ಇದು ಅವಿಭಜಿತ ಕುಟುಂಬದ ಆಸ್ತಿಯಲ್ಲ. ಈ ಆಸ್ತಿಗೆ ನೀವೇ ಮಾಲೀಕರು. ನಿಮ್ಮ ಸಹೋದರ ಹಾಗು ಸಹೋದರಿಯರು ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ದಾವೆ ಹೂಡಿದರೂ, ಅವರಿಗೆ ಈ ಆಸ್ತಿಯಲ್ಲಿ ಅವರಿಗೆ ಪಾಲು ಸಿಗುವುದಿಲ್ಲ.
ಪ್ರಶ್ನೆ: ನನ್ನ ಹೆಸರು ರಂಗನಾಥ. ನಾನು ಶಿವಮೊಗ್ಗ ನಗರದ ನಿವಾಸಿ. ಮೂರು ವರ್ಷದ ಹಿಂದೆ ನನಗೆ ಮದುವೆಯಾಯಿತು. ವಿವಾಹವಾದ ಆರಂಭದಲ್ಲಿ ನಮ್ಮ ನಡುವೆ ಉತ್ತಮ ಸಾಮರಸ್ಯವಿತ್ತು. ಮಾರ್ಕೆಟಿಂಗ್ ಕೆಲಸ ನನ್ನದು. ಹಾಗಾಗಿ ಮನೆ ಸೇರುವುದು ತಡವಾಗುತ್ತದೆ. ಇತ್ತೀಚಿಗೆ ನನ್ನ ಹೆಂಡತಿ ಈ ವಿಚಾರವಾಗಿ ನನ್ನ ಜೊತೆ ನಿತ್ಯ ವಾಗ್ವಾದ ನಡೆಸುತ್ತಿದ್ದಳು. ನಾಲ್ಕು ತಿಂಗಳ ಕೆಳಗೆ ನನ್ನೊಂದಿಗೆ ಇದೇ ವಿಚಾರವಾಗಿ ಜಗಳ ತೆಗೆದು ತವರು ಮನೆ ಸೇರಿದ್ದಾಳೆ. ಗಂಡನ ಮನೆಗೆ ಮರಳಿ ಬಾ ಎಂದು ಕರೆಯಲು ಹೋದ ನನ್ನ ಅಣ್ಣನಿಗೂ ಕೂಡ ಅವಳು ಸರಿಯಾಗಿ ಸ್ಪಂದಿಸದೆ ಡೈವೋರ್ಸ್ ನೀಡುವ ಮಾತನ್ನಾಡಿದ್ದಾಳೆ. ನನಗೆ ಹೆಂಡತಿಯ ಮೇಲೆ ಅಪಾರ ಪ್ರೀತಿ. ಈ ಸಮಸ್ಯೆಗೆ ಪರಿಹಾರ ಸೂಚಿಸಿ.
ಉತ್ತರ: ಎರಡು ಕುಟುಂಬದ ಹಿತೈಷಿಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ವೃತ್ತಿಗೆ ಸಂಬಂಧಿಸಿದ ನಿಮ್ಮ ಅನಿವಾರ್ಯತೆಗಳನ್ನು ನಿಮ್ಮ ಪತ್ನಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿ. ಆಪ್ತ ಸಮಾಲೋಚಕರ ಸಹಾಯವನ್ನು ನೀವಿಬ್ಬರು ಪಡೆಯಬಹುದು. ಈ ಪ್ರಯತ್ನಗಳು ಫಲ ನೀಡದಿದ್ದರೆ, Restituion of Conjugal Rights ಅಂದರೆ ದಾಂಪತ್ಯದ ಹಕ್ಕುಗಳ ಪುನರ್ ಸ್ಥಾಪನೆಗೆ ನೀವು ನ್ಯಾಯಾಲಯದ ಮೊರೆ ಹೋಗಬಹುದು.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post