ಕಲ್ಪ ಮೀಡಿಯಾ ಹೌಸ್ | ಕಾರವಾರ |
ಪೋಷಕರ ನಿರ್ಲಕ್ಷದಿಂದಾಗಿ ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿದ 8 ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ಘಟನೆ ನಡೆದಿದ್ದು, ಮೃತ ಕೂಸನ್ನು 8 ತಿಂಗಳ ಸಾನ್ನಿಧ್ಯ ಎಂದು ಗುರುತಿಸಲಾಗಿದೆ.
ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಯ ನಿವಾಸದಲ್ಲಿ ಮೊಬೈಲ್ ಚಾರ್ಜ್’ಗೆ ಹಾಕಿ ಅದನ್ನು ಅನ್ ಪ್ಲಗ್ ಮಾಡದೇ ನಿರ್ಲಕ್ಷಿಸಿ ಹಾಗೆಯೇ ಬಿಡಲಾಗಿತ್ತು. ಚಾರ್ಜ್’ಗೆ ಹಾಕಿದ್ದ ಚಾರ್ಜರನ್ನು ಮಗು ಬಾಯಿಗೆ ಹಾಕಿದ್ದು, ಇದರಿಂದ ಕರೆಂಟ್ ಶಾಕ್’ಗೆ ಒಳಗಾದ ಕೂಸು ಸಾವನ್ನಪ್ಪಿದೆ.
ಕೂಸನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಮಗುವಿನ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















