ಕಲ್ಪ ಮೀಡಿಯಾ ಹೌಸ್ | ಕಾರ್ಗಲ್ |
ಸತತ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯ ಭರ್ತಿಗೆ 13 ಅಡಿ ಬಾಕಿಯಿದ್ದು, ನೀರನ್ನು ಹೊರ ಬಿಡುವ 2ನೆಯ ಎಚ್ಚರಿಕೆ ನೋಟೀಸ್ ಬಿಡುಗಡೆಯಾಗಿದೆ.
ಗರಿಷ್ಠ 1819 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇಂದು 1806.95 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು, 67 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಹೀಗಾಗಿ, ನೀರನ್ನು ಹೊರಬಿಡುವ 2ನೆಯ ಎಚ್ಚರಿಕೆ ನೋಟೀಸನ್ನು ಕೆಪಿಟಿಸಿಎಲ್ ಬಿಡುಗಡೆ ಮಾಡಿದೆ.
ಮೊದಲಿಗೆ ನಿಧಾನವಾಗಿ ಸಂಗ್ರಹವಾಗುತ್ತಿದ್ದ ನೀರು ಕೇವಲ ಎರಡೇ ದಿನದಲ್ಲಿ ಐದು ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೋಟೀಸ್ ಬಿಡುಗಡೆ ಮಾಡಿರುವ ಕೆಪಿಟಿಸಿಎಲ್ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಜನ-ಜಾನುವಾರುಗಳು ನೀರಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಈ ಭಾಗದ ಎಡಹಳ್ಳಿ, ಜೋಗಿ ಮಟ್ಟಿ, ಗೇರುಸೊಪ್ಪ ಭಾಗದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post