ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಕೆ ಇಡಿಯ ಕರಾವಳಿಯ ಕಲಾ ಸಾಮ್ರಾಜ್ಯಕ್ಕೆ ತನ್ನದೇ ಆದ ರೀತಿಯ ಅಮೋಘ ಕೊಡುಗೆ ನೀಡುತ್ತಿರುವ ಬಾಲ ಪ್ರತಿಭೆ. ಆಕೆಯೇ, ಕಾರ್ಕಳದ ಸೃಷ್ಠಿ ಆರ್. ಶೆಟ್ಟಿ.
ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ರಮೇಶ್ ಶೆಟ್ಟಿ ಮತ್ತು ಶರ್ಮಿಳಾ ಶೆಟ್ಟಿ ಇವರ ಮಗಳಾದ ಈಕೆ ಪ್ರತಿಷ್ಠಿತ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೆಯ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ.
ತನ್ನ ಈ ಚಿಕ್ಕ ವಯಸ್ಸಿನಲ್ಲಿಯೇ ಅಭಿನಯದ ಕಡೆ ಒಲವು ತೋರಿಸುತ್ತಿರುವ ಈ ಪ್ರತಿಭೆ ನಿಜಕ್ಕೂ ಅಭಿನಯ ಶಾರದೆ.
ತನ್ನ ಚಿಕ್ಕ ವಯಸ್ಸಿನಲ್ಲಿಯೇ ಕರಾವಳಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೂನಿಯರ್ ಡ್ರಾಮಾ ಫಂಟರ್ಸ್‌ಗೆ ಆಯ್ಕೆಯಾಗಿ ಮೊದಲ ಬಾರಿ ಅಭಿನಯದ ಹೆಜ್ಜೆಯನ್ನು ಇಟ್ಟವರು. ಅನಂತರದ ದಿನಗಳಲ್ಲಿ ಸುಮಾರು ಸ್ಥಳೀಯ ವಾಹಿನಿಗಳಾದ ಡೈಜಿ ವಲ್ಡರ್, ವಿ4 ಚಾನೆಲ್, ಅಭಿಮತ ಚಾನೆಲ್, ರೆಡ್ ಎಫ್’ಎಂ ಮೊದಲಾದವುಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದ್ದು. ಕಲರ್ಸ್ ಸೂಪರ್ ವಾಹಿನಿಯ ಮಜಾಭಾರತ ಕಾರ್ಯಕ್ರಮದಲ್ಲಿ ಎಸ್. ನಾರಾಯಣ್ ಹಾಗೂ ಶೃತಿ ಇವರಿಂದ ಪ್ರಶಂಸೆಗೆ ಪಾತ್ರರಾಗಿರುವುದಲ್ಲದೇ 4 ಬಾರಿ ಕಿರೀಟ ಪ್ರಶಸ್ತಿ ಪಡೆದಿದ್ದಾರೆ.
ಪಟ ಪಟನೇ ಮಾತನ್ನಾಡುವ ಇವರ ನಟನೆ, ಡೈಲಾಗ್, ಮುಖಭಾವಗಳಲ್ಲಿ ಈಕೆಯನ್ನು ಮೀರಿಸಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ, ಶೈನಿಂಗ್ ಸ್ಟಾರ್ ಆದ ಇವರಿಗೆ ಯಾವುದೇ ಪಾತ್ರ ಕೊಟ್ಟರು ಆ ಕ್ಷಣಕ್ಕೆ ನಟನೆ ಮಾಡಿ ತೋರಿಸಬಲ್ಲ ಜಾಣ್ಮೆ ಇವರಲ್ಲಿದೆ.
ಮಗಳು ಸೃಷ್ಠಿಯ ಅನನ್ಯ ಸಾಧನೆಯ ಹಿಂದೆ ಹೆತ್ತವರ ಅಪಾರ ಶ್ರಮ, ಸಾಧನೆ, ಬೆಂಬಲವಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಇವರ ತಂದೆ ಕೂಡ ಒರ್ವ ಕಲಾವಿದರಾಗಿದ್ದು ಯಕ್ಷಗಾನ, ನಾಟಕಗಳಲ್ಲಿ ಸಕ್ರಿಯರಾಗಿದ್ದವರು. ತಂದೆಯ ಕಲಾನೈಪುಣ್ಯತೆಯ ಫಲವೇ ಮಗಳಲ್ಲಿಯೂ ರಕ್ತಗತವಾಗಿ ಹರಿದು ಬಂದಿದೆ ಎಂದರೆ ತಪ್ಪಾಗಲಾರದು.
ಝೀ ಕನ್ನಡದ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಒಂದಾದ ಡ್ರಾಮಾ ಜ್ಯೂನಿಯರ್ಸ್ ಸೀಸನ್ 3ರಲ್ಲಿ ಭಾಗವಹಿಸುವ ಮೂಲಕ ರಾಜ್ಯದ 29 ಜಿಲ್ಲೆಗಳ ಸುಮಾರು 15000 ಸ್ಪರ್ಧಿಗಳಲ್ಲಿ ಮೂರನೆಯ ಸುತ್ತಿನ ಮೆಗಾ ಆಡಿಷನ್’ಗೆ ಆಯ್ಕೆಯಾದ 16 ಮಕ್ಕಳಲ್ಲಿ ಇವರು ಕೂಡ ಒಬ್ಬರಾಗಿದ್ದು ತನ್ನ ಅಭಿನಯದ ಮೂಲಕ ಕರ್ನಾಟಕದಾದ್ಯಂತ ಜನಮನ್ನಣೆ ಗಳಿಸಿರುವ ನಮ್ಮ ತುಳುನಾಡಿನ ಅಪ್ಪಟ ಪ್ರತಿಭೆ. ಇವರು ಡ್ರಾಮಾ ಜೂನಿಯರ್ಸ್ ಗ್ರಾಡ್ ಫಿನಾಲೆಯಲ್ಲಿ ಸೆಕೆಂಡ್ ರನ್ನರ್ ಅಪ್ ಪಡೆದಿರುವುದು ನಿಜಕ್ಕೂ ಶ್ಲಾಘನೀಯ.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿರುವ ಈಕೆ, ಅಭಿನಯದ ಜೊತೆ ಜೊತೆಗೆ ಕಾರ್ಯಕ್ರಮ ನಿರೂಪಣೆ, ಕರಾಟೆ, ಯೋಗ, ಸಂಗೀತ, ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಚೆಸ್, ಪಾಶ್ಚಾತ್ಯ ನೃತ್ಯ, ಭರತನಾಟ್ಯ, ಯಕ್ಷಗಾನ ಹೀಗೆ ಎಲ್ಲದರಲ್ಲೂ ಆಶಕ್ತಿ ಬೆಳೆಸಿಕೊಂಡಿದ್ದಾರೆ. ಈಕೆಯ ಬಹುಮುಖ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.
ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ, ರಾಜ್ಯ ಮಟ್ಟದ ಕರಾಟೆ ಸ್ವರ್ಧೆಯಲ್ಲಿ ಚಿನ್ನದ ಪದಕ, ಕಾಸರಗೋಡು ಮಕ್ಕಳ ದಸರಾ ಪ್ರಶಸ್ತಿ, ಶ್ರೀ ಸೀತಾರಾಮಾಂಜನೇಯ ಭಾರತಿ ಭಜನ ಮಂದಿರ ಎಣ್ಮೂರು ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಸುವರ್ಣತಾರೆ ಬಿರುದು ಪ್ರಧಾನ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕುವೆಂಪು ಉತ್ಸವ ಪ್ರಶಸ್ತಿ. ಪಡೆದಿರುವುದು. ಇವಳ ನಟನಾ ಕೌಶಲ್ಯವನ್ನು ಕಂಡು ಅನೇಕ ಚಲನಚಿತ್ರಗಳಲ್ಲೂ ಈಕೆಗೆ ಅವಕಾಶ ದೊರೆತಿದೆ.
ಈಗಾಗಲೇ ಉತ್ತರ ಕರ್ನಾಟಕ ಭಾಷೆಯ ಖೊಟ್ಟಿ ಪೈಸೆ ಎಂಬ ಚಲನಚಿತ್ರ ಬಿಡುಗಡೆಯಾಗಿದೆ.
ಇವಳು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕೂಗಿ ಕರೆದೆನಲೋ ಮಾದೇವ ಎಂಬ ಭಕ್ತಿ ಪ್ರಧಾನ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ವಾತ್ಸಲ್ಯ ಕಿರುಚಿತ್ರದಲ್ಲಿ ಹಾಗೂ ಯಾತ್ರೆ ಎಂಬ ಭಕ್ತಿ ಪ್ರಧಾನ ವೀಡಿಯೋ ಹಾಡಿನಲ್ಲಿಯೂ ಅಭಿನಯಿಸಿದ್ದಾಳೆ.
ತನ್ನ ಕಿರಿಯ ವಯಸ್ಸಿನಲ್ಲಿಯೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಈ ಮುದ್ದಾದ ಪ್ರತಿಭೆಗೆ ನಾವೆಲ್ಲರೂ ಉಜ್ವಲ ಭವಿಷ್ಯಕ್ಕಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಸುತ್ತದೆ.
Get in Touch With Us info@kalpa.news Whatsapp: 9481252093
Discussion about this post