ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕಾರ್ಕಳದ #Karkala ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ 100 ಶೇಖಡಾ ಫಲಿತಾಂಶ ಪಡೆದುಕೊಂಡಿದ್ದು, ಈ ಮೂಲಕ ಮತ್ತೊಮ್ಮೆ ತಾಲೂಕಿಗೆ ಅತ್ಯುತ್ತಮ ಫಲಿತಾಂಶದೊಂದಿಗೆ ಐತಿಹಾಸಿಕ ಮೈಲಿಗಲ್ಲು ನೆಟ್ಟಿದೆ.
ಒಟ್ಟು 118 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಸತತ 11ನೇ ಬಾರಿಗೆ 100 ಶೇಖಡಾ ಫಲಿತಾಂಶ ದಾಖಲಿಸಿದೆ.
ಸಂಸ್ಥೆಯ ವಿದ್ಯಾರ್ಥಿ ಅನಂತ್ ಎನ್.ಕೆ. 625 ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ಒಟ್ಟು 13 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. 71 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಉಳಿದ 47 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಪರೀಕ್ಷೆ ಬರೆದ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಾಗಿದೆ.
ಒಟ್ಟು 42 ವಿದ್ಯಾರ್ಥಿಗಳು 90 ಶೇಖಡಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. 600ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಕಂಡAತಿದೆ. ಅನಂತ್ ಎನ್.ಕೆ. 623, ಅನಘ ವಿ 621, ಸ್ನೇಹಲ್ ಪಿಂಟೊ 609, ಸುಧೀಕ್ಷಾ ಶೆಟ್ಟಿ 609, ಅಲ್ವಿನಿಯಾ ಡೆಸ 606, ಲಿಯಾನಾ ನತಾಲ್ ರೋಡ್ರಿಗಸ್ 606, ನವೀದ್ ಝಾಹೀದ್ ಹುಸೇನ್ 605, ಶಮಿತ್ ಕ್ಯಾಸ್ತಲಿನೋ 604, ಸಮೃದ್ಧ್ 603, ಸಲೋಮಿ ಡಿಸೋಜ 603, ಆರ್ಘ್ಯ ಪಿ. ಜೈನ್ 602, ನಾರಾಯಣಿ ಜಿ. ಕಿಣಿ 601, ಸಾನಿಯಾ ಮೆಹರ್ 600. ಅದೇ ರೀತಿ ಶಾಶ್ವತ್ ಸುರೇಶ್ ಶೆಟ್ಟಿ 598, ರಕ್ಷಿತಾ ಶೆಟ್ಟಿ 597, ಧನುಷ್ ಗಣೇಶ್ ಶೆಟ್ಟಿ 594 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಒಟ್ಟು 16 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.
Discussion about this post