ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಸ್ವಾತಂತ್ರ್ಯ ಎಂದರೆ ಕೇವಲ ಬೇಡಿಗಳಿಂದ ಮುಕ್ತವಾಗುವುದು ಮಾತ್ರವಲ್ಲ, ಅದು ಜವಾಬ್ಧಾರಿಯ ಪ್ರತೀಕವಾಗಿದೆ. ನಾವು ಪ್ರತಿಯೊಬ್ಬರೂ ದೇಶವನ್ನು ಪ್ರಗತಿಯ ಮಾರ್ಗದಲ್ಲಿ ಕೊಂಡೊಯ್ಯುವ ಸೇನಾನಿಗಳಾಗಬೇಕು ಎಂದು ಭಾರತೀಯ ವಾಯುಸೇನೆಯ ಮಾಜಿ ಯೋಧ ಡಾ. ನವೀನ್ ಅಮಾನ್ನ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ #Christ King ಶಿಕ್ಷಣ ಸಂಸ್ಥೆಗಳಲ್ಲಿ 79ನೇ ಸ್ಯಾತಂತ್ರ್ಯ ದಿನಾಚರಣೆ #Independence Day ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹತ್ತನೇ ತರಗತಿಯ ಶೆಹ್ನುಮ್ ಫಾತಿಮಾ, ಪ್ರಥಮ ವಿಜ್ಞಾನ ವಿಭಾಗದ ಬ್ರೋವಿನ್ ಅಗೇರ ಸ್ವಾತಂತ್ರ್ಯ ದಿನಾಚರಣೆಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳು ದೇಶಭಕ್ತಿಗೀತೆ ಗಾಯನ ಮಾಡಿದರು.
ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರೌಢಶಾಲಾ ಶಿಕ್ಷಕಿ ಸ್ವಾತಿ ಶೆಟ್ಟಿ ಸ್ವಾಗತಿಸಿ ಪದವಿಪೂರ್ವ ವಿಭಾಗದ ಆಂಗ್ಲಭಾಷಾ ಉಪನ್ಯಾಸಕಿ ಶಿಜಿ.ಸಿ.ಕೆ ವಂದಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಕು.ಜೆಸ್ಲಿನ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post