ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಇಲ್ಲಿನ ಕ್ರೈಸ್ಟ್‌ಕಿಂಗ್ Christ King ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಹದಿಹರೆಯದ ಮಕ್ಕಳಲ್ಲಿರುವ ಸಮಸ್ಯಗಳಿಗೆ ಹೆತ್ತವರು ಯಾವ ರೀತಿ ಸ್ಪಂದಿಸಬೇಕೆಂಬುದನ್ನು ಉಡುಪಿಯ ಡಾ.ಎಂ.ವಿ. ಬಾಳಿಗ ಆಸ್ಪತ್ರೆಯ ಮುಖ್ಯ ಸಲಹೆಗಾರರಾಧ ಮನೋಶಾಸ್ತ್ರಜ್ಞೆ ಪದ್ಮಾ ರಾಘವೇಂದ್ರ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರವರು ಆಗಮಿಸಿದ್ದ ಅವರು ವಿದ್ಯಾರ್ಥಿಗಳಿಗೆ ವೇಳಾಪಟ್ಟಿಯನ್ನು ರಚಿಸುವುದರೊಂದಿಗೆ ಯಾವ ರೀತಿ ನಿರ್ಭಯದಿಂದ ಪರೀಕ್ಷೆಗೆ ತಯಾರಿ ನಡೆಸಬಹುದೆಂಬುದರ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಡೊ ಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಮೇರಿಯನ್ ಡಿಸೋಜ ಹಾಗೂ ಸಂಸ್ಥೆಯಲ್ಲಿ ಆಪ್ತ ಸಮಾಲೋಚಕರಾದ ಕಾರ್ಯನಿರ್ವಹಿಸುತ್ತಿರುವ ಸಿಸ್ಟರ್ ಶಾಲೆಟ್‌ರವರು ಉಪಸ್ಥಿತರಿದ್ದರು. ಶಿಕ್ಷಕಿ ಜೋಸ್ನರವರು ಅಥಿತಿಗಳನ್ನು ಸಭೆಗೆ ಪರಿಚಯಿಸಿದರು. ಕನ್ನಡ ಶಿಕ್ಷಕಿ ರೇಖಾ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post