ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಸೋಷಿಯಸ್-2023ನಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ Christ King ಪದವಿಪೂರ್ವ ಕಾಲೇಜು ಸಮಗ್ರ ಛಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಜೋಸಿಯಾ ಫೇಸ್ ಪೇಂಟಿಂಗ್‌ನಲ್ಲಿ ಪ್ರಥಮ ಸ್ಥಾನ, ಪ್ರೇರಣಾ ಜಿ ರಾವ್ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸ್ಲ್ಯಾಮ್ ಪೋಯೆಟ್ರಿಯಲ್ಲಿ ಪೃಥ್ವಿ ಶೆಟ್ಟಿ, ದ್ವಿತೀಯ ಸ್ಥಾನ, ಶ್ರೇಯಾ, ಶ್ರೇಯಾ ಎಸ್, ಶ್ರಾವ್ಯ, ಸೃಷ್ಟಿ, ವಿಜೇತಾ, ತ್ರಿಶಾ, ಸುಶಾ, ಪ್ರಿನ್ಸಿಯಾ, ಸೋನಿ ಅವರ ತಂಡಕ್ಕೆ ಥೀಮ್ ಡ್ಯಾನ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಸಂಸ್ಥೆ ಸಮಗ್ರ ಛಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
Also read: ಮೈಸೂರಿನ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಮತ್ತೊಂದು ಅರ್ಥಪೂರ್ಣ ಸೇವಾಕಾರ್ಯ











Discussion about this post