ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ನಮ್ಮ ಸಣ್ಣ ಸೇವೆಗಳಿಂದ ದೊಡ್ಡ ಬದಲಾವಣೆ ತರಬಹುದು, ವಿದ್ಯಾರ್ಥಿಗಳು ಕೂಡಾ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು, ಅದಕ್ಕಾಗಿ ಇಂಟರ್‍ಯಾಕ್ಟ್ ಕ್ಲಬ್‌ನಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾರ್ಕಳ ರೋಟರಿ ಕ್ಲಬ್‌ನ ಅಧ್ಯಕ್ಷ ರೋ. ನವೀನ್‌ಚಂದ್ರ ಶೆಟ್ಟಿ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದ್ದ ನೂತನ ಇಂಟರ್‍ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಕಳದ ಇಂಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾದ ರೋ. ಬಾಲಕೃಷ್ಣ ದೇವಾಡಿಗ ಅವರು ಇಂಟರ್‍ಯಾಕ್ಟ್ ಕ್ಲಬ್‌ನ ಸ್ಥಾಪನೆ, ಅದರ ಬೇರೆ ಬೇರೆ ವಿಭಾಗಗಳು ಮತ್ತು ಸಂಘದ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು.
ರೋ. ಇಕ್ಬಾಲ್ ಅಹಮದ್ ಅವರು ಮಾತನಾಡಿ, ಇಂಟರ್‍ಯಾಕ್ಟ್ ಕ್ಲಬ್ ಮಕ್ಕಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಒಂದು ಅದ್ಭುತ ವೇದಿಕೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಕ್ರೀಯಾಶೀಲತೆ, ತಂಡದ ಕೆಲಸ ಹಾಗೂ ಸಮಾಜದ ಕಡೆಗೆ ಒಲವು ಬೆಳೆಸಿಕೊಳ್ಳಲು ಸಹಕಾರಿ. ಇಂತಹ ಕ್ಲಬ್‌ಗಳಲ್ಲಿ ಭಾಗವಹಿಸುವುದು ಅವರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಇಂಟರ್‍ಯಾಕ್ಟ್ ಕ್ಲಬ್‌ನ ನೂತನ ಸದಸ್ಯರಿಗೆ ಶುಭ ಹಾರೈಸಿದರು. ರೋಟರಿ ಕ್ಲಬ್‌ನ ಕಾರ್ಯದರ್ಶಿಗಳಾದ ರೋ. ಚೇತನ್ ಕುಮಾರ್, ಸಂಸ್ಥೆಯ ಇಂಟರ್‍ಯಾಕ್ಟ್ ಕ್ಲಬ್‌ನ ಸಂಯೋಜಕಿ ಶೈಲಿ ಹೆಗ್ಡೆ ಹಾಗೂ ಕಾರ್ಕಳ ರೋಟರಿ ಕ್ಲಬ್‌ನ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಇಂಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಹತ್ತನೇ ತರಗತಿಯ ಜುಬೇದ ಕ್ಲಬ್ ಕಾರ್ಯಯೋಜನೆಯ ಬಗ್ಗೆ ತಿಳಿಸಿದರು. ಸಂಸ್ಥೆಯ ಇಂಟರ್‍ಯಾಕ್ಟ್ ಕ್ಲಬ್‌ನ ಕಾರ್ಯದರ್ಶಿಯಾದ ಕು. ಲಕ್ಷಣ್ಯ ಸ್ವಾಗತಿಸಿ, ವಿಶೋನ್ ಶೆಲ್ಟನ್ ಸಲ್ಡಾನ್ಹ ವಂದಿಸಿದರು. ಶಿಕ್ಷಕಿ ಶ್ರೀಮತಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post