ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಪ್ರಸಕ್ತ ಸಾಲಿನ SSLC ಫಲಿತಾಂಶ #SSLC Result ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆಯ ಕಾರ್ಕಳದ ಪ್ರತಿಷ್ಠಿತ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಗೆ ಹಲವು ರ‍್ಯಾಂಕ್ ಸಂದಿದೆ.
ಫಲಿತಾಂಶದಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಅಕ್ಷಿತ್ ವಿ ಹೆಗ್ಡೆ 625 ಕ್ಕೆ 620 ಅಂಕಗಳನ್ನು ಪಡೆದು ರಾಜ್ಯಕ್ಕೆ ಆರನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ.
ಈತ ಕಾಬೆಟ್ಟು ನಿವಾಸಿ ವಸಂತ ಹೆಗ್ಡೆ ಹಾಗೂ ಸವಿತಾ ವಿ ಹೆಗ್ಡೆ ದಂಪತಿಗಳ ಪುತ್ರನಾಗಿದ್ದಾನೆ. ಜೊತೆಗೆ ಇದೇ ಸಂಸ್ಥೆಯ ದಿಶಾ ಹೆಚ್ ಶೆಟ್ಟಿ 616 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಹತ್ತನೇ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾಳೆ. ಈಕೆ ಬೆಳುವಾಯಿಯ ಹರೀಶ್ ಎಸ್ ಶೆಟ್ಟಿ ಹಾಗೂ ಶ್ರೀಮತಿ ಶ್ರೀದೇವಿ ಯು ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ.
Also read: ಸೊರಬ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ
ಸಾಧಕರನ್ನು ಸಂಸ್ಥೆಯ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post