ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಎಸ್‌ವಿಟಿ ಪ್ರೌಢಶಾಲೆ, ಕಾರ್ಕಳ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಟ್ಟು ಹನ್ನೆರಡು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದಿಂದ ಆರನೇ ತರಗತಿಯ ಮೊಹಮ್ಮದ್ ಅಯಾನ್, ಮೊಹಮ್ಮದ್ ಹಿಶಾಮ್ ಖಾನ್, ಶೇಖ್ ಮೊಹಮ್ಮದ್ ಶಿಫಾನ್, ಸೈಯದ್ ಫಾಹಿಕ್, ಏಳನೇ ತರಗತಿಯ ಸಾಕ್ಷಿತ್ ಪಿ. ಜೈನ್, ದೃವೀತ್, ಐಶ್ವರ್ಯ ಪೂಜಾರಿ, ಫಿಯೋನಾ ರಿಯಾ ಪಿಂಟೋ ಹಾಗೂ ಪ್ರೌಢಶಾಲಾ ವಿಭಾಗದಿಂದ ಎಂಟನೇ ತರಗತಿಯ ಆಯುಶ್ರೀ ಎಂ ಆಚಾರ್ಯ, ರಿತು ಫ್ರಾನ್ಸಿಸ್, ಸಾನ್ವಿ ಎಂ ನಾಯಕ್, ಒಂಬತ್ತನೇ ತರಗತಿಯ ರೇಚಲ್ ಡಿಸೋಜ ಚಿನ್ನದ ಪದಕಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.
ಉಳಿದಂತೆ ಆರನೇ ತರಗತಿಯ ತನಿಷ್ ಟಿ ಶೆಟ್ಟಿ, ಸಾಧ್ವಿ ಎಂ ನಾಯಕ್, ಏಳನೇ ತರಗತಿಯ ಸಾನ್ವಿ ಶೆಟ್ಟಿ, ಒಂಬತ್ತನೇ ತರಗತಿಯ ಲೆನಿಷಾ ಲಿಯಾನ್ನ ಮೆಂಡೊನ್ಸಾ ದ್ವಿತೀಯ ಸ್ಥಾನ ಪಡೆದುಕೊಂಡರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಕು.ಲಾವಣ್ಯ ಶೆಟ್ಟಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ಹಾಗೂ ಕೃಷ್ಣಪ್ರಸಾದ್ ತಂಡಗಳ ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















