ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಭಾರತೀಯ ಕಂಪೆನಿ ಸೆಕ್ರೆಟರಿ ಮಂಡಳಿಯವರು ನಡೆಸಿದ ರಾಷ್ಟ್ರಮಟ್ಟದ ಕಂಪೆನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ-2025(ಸಿಎಸ್‌ಇಇಟಿ)ಯಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ.
ಸಂಸ್ಥೆಯಿಂದ ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಏಳು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಅಭೂತಪೂರ್ವ ಸಾಧನೆಗೈದಿದೆ.

ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ತರಬೇತಿ ನೀಡಿದ ಉಪನ್ಯಾಸಕ ತಂಡ ಹಾಗೂ ಸಂಸ್ಥೆಯ ಬೋಧಕವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post