ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹತ್ತಾರು ವರ್ಷಗಳಿಂದ ಬಡ ಪರಿಶಿಷ್ಟರು ಸಾಗು ಮಾಡುತ್ತಿದ್ದ ಭೂಮಿಯನ್ನು ತೆರವುಗೊಳಿಸಿದ್ದ ಅಕ್ಷಮ್ಯ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ತಾಲೂಕಿನ ಬಿಆರ್‌ಪಿ ಸಮೀಪದ ತಾವರಘಟ್ಟ ಗ್ರಾಮದಲ್ಲಿ ರುದ್ರಭೂಮಿ ಒತ್ತುವರಿ ಮಾಡಲಾಗಿದೆ ಎಂದು ರಾಜಕೀಯ ಪಿತೂರಿ ಹೂಡಿ ಗುರುವಾರ ಗ್ರಾಮದಲ್ಲಿ 144 ನೇ ಸೆಕ್ಷನ್ ಜಾರಿಗೊಳಿಸಿ ಜನರಿಗೆ ಭೀತಿ ಹುಟ್ಟಿಸಲಾಗಿದೆ. ಬಡ ಪರಿಶಿಷ್ಟರಿಬ್ಬರು ಹತ್ತಾರು ವರ್ಷಗಳಿಂದ ಸಾಗು ಮಾಡುತ್ತಿದ್ದ ಭೂಮಿಯನ್ನು ತೆರವುಗೊಳಿಸಿರುವ ಕ್ರಮ ವಿರೋಧಿಸಿ ಶಾಸಕರ ಮತ್ತು ತಾಹಸೀಲ್ದಾರರ ವಿರುದ್ದ ಖಂಡಿಸಿ ಸೋಮವಾರ ತಾಲೂಕು ಕಛೇರಿ ಮುತ್ತಿಗೆ ಹಾಕಲಾಗುವುದು ಎಂದರು.
ತಾವರಘಟ್ಟ ಸರ್ವೇ ನಂ.14 ರಲ್ಲಿ ಬಡವರಿಗೆ 1999-2000 ನೆಯ ಸಾಲಿನಲ್ಲಿ ನಮ್ಮ 2 ನೆಯ ಶಾಸಕರ ಅಧಿಕಾರದ ಅವಧಿಯಲ್ಲಿ ಸಾಗು ಮಾಡುತ್ತಿದ್ದ ಸುಮಾರು 30 ಬಡ ಕುಟುಂಬಗಳಿಗೆ ತಲಾ 2 ಏಕರೆಯಂತೆ ಹಕ್ಕು ಪತ್ರವನ್ನು ನೀಡಿದ್ದೇವೆ. ಅದೇ ಸಂದರ್ಭದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ರುದ್ರಭೂಮಿಗಾಗಿ 1.20 ಎಕರೆ ಭೂಮಿಯನ್ನೂ ನೀಡಿದ್ದೇವೆ. ಇತ್ತೀಚೆಗೆ ಜನರ ದುರಾದೃಷ್ಟ ಎಂಬಂತೆ ನಮ್ಮೂರಿನ ಶಾಸಕ ಬಿ.ಕೆ. ಸಂಗಮೇಶ್ವರ್ ಪಟಾಲಂ ಕಟ್ಟಿಕೊಂಡು ಜೊತೆಗೆ ತಹಸೀಲ್ದಾರ್ ಅವರನ್ನು ಅಡ್ಡ ದಾರಿ ಹಿಡಿಸಿ ಸ್ಥಳಕ್ಕೆ ಕರೆದೊಯ್ದು ರುದ್ರಭೂಮಿಗೆ ಸಂಬಂಧವಿಲ್ಲದ ಬಡವರು ಸಾಗು ಮಾಡುತ್ತಿರುವ ಬೇರೆ ಭೂಮಿಯನ್ನು ತೋರಿಸಿ ತೆರವುಗೊಳಿಸಲು ಪಿತೂರಿ ನಡೆಸಿದ್ದರು. ಕೆಲವಾರು ಮಂದಿ ಗ್ರಾಮಸ್ಥರಿಗೆ ಒತ್ತುವರಿ ಭೂಮಿ ತೆರವುಗೊಳಿಸಿ ನಿವೇಶನ ಮಾಡಿ ವಿತರಿಸುವುದಾಗಿ ಸುಳ್ಳು ಭರವಸೆ ನೀಡಿದ್ದ ವಿಷಯವು ತಿಳಿಯಿತು ಎಂದರು.
ಗ್ರಾಮಸ್ಥರು ಈ ಅನ್ಯಾಯವನ್ನು ತಿಳಿಸಿದ ಮೇರೆಗೆ ಸ್ಥಳಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿದ ನಾವು ಇದು ರುದ್ರಭೂಮಿಗೆ ಸೇರಿದ ಭೂಮಿಯಲ್ಲ. ರುದ್ರಭೂಮಿಗೆ ನಮ್ಮ ಅಧಿಕಾರದ ಅವಧಿಯಲ್ಲಿ 1.20 ಏಕರೆ ನೀಡಿದ್ದೇವೆ. ಅದನ್ನು ಯಾರಾದರು ಒತ್ತುವರಿ ಮಾಡಿದ್ದರೆ ತೆರವುಗೊಳಿಸಿ. ಶಾಸಕರು ತೋರುತ್ತಿರುವ ಭೂಮಿ ಹಕ್ಕು ಪತ್ರ ಪಡೆದು ಸಾಗು ಮಾಡುತ್ತಿರುವ ಬಡವರ ಭೂಮಿಯಾಗಿದೆ ಇವರೆಲ್ಲ ಅಪ್ಪಾಜಿ ಕಡೆಯವರೆಂದು ಭಾವಿಸಿ ತೆರವಿಗೆ ಕೈ ಹಾಕಿದ್ದಾರೆ ಎಂದು ತಿಳಿಸಿದ ಮೇರೆಗೆ ಕೆಲಕಾಲ ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ಅವಾಚ್ಯ ಪದಗಳ ಸುರಿಮಳೆ ನಡೆದು ಪರಿಸ್ತಿತಿ ಬಿಗಡಾಯಿಸುವ ಹಂತ ತಲುಪಿ ಪೋಲಿಸರು ಲಾಠಿ ಪ್ರಹಾಹ ನಡೆಸುವಂತಹ ಘಟ್ಟ ತಲುಪಿತ್ತು. ತದ ನಂತರ ಅಧಿಕಾರಿಗಳು ಸರ್ವೇ ಮಾಡಿದ ನಂತರ ಕ್ರಮಕೈಗೊಳ್ಳುವುದಾಗಿ ಪ್ರಕರಣ ನೆನೆಗುದಿಗೆ ಬಿದ್ದಿತ್ತು ಎಂದರು.
Sri Huccharaya Swamy Temple, Shikaripura | ಶ್ರೀ ಹುಚ್ಚರಾಯ ಸ್ವಾಮಿ ದೇವಾಲಯ, ಶಿಕಾರಿಪುರ
ದೇವಾಲಯ ಪರಿಚಯ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಆದರೆ ತಹಸೀಲ್ದಾರ್ ಶಿವಕುಮಾರ್ ಶಾಸಕ ಸಂಗಮೇಶ್ವರ್ ಒತ್ತಡಕ್ಕೆ ಮಣಿದು ಗುರುವಾರ ಗ್ರಾಮಕ್ಕೆ ತೆರಳಿ ಜನರಲ್ಲಿ ಭೀತಿ ಹುಟ್ಟಿಸಿ 144 ನೇ ಸೆಕ್ಷನ್ ಜಾರಿ ಮಾಡಿ ದಿನೇಶ್ ನಾಯ್ಕ, ಗಂಗಾಧರ, ಮಂಜನ್ ಎಂಬುವರು ಹತ್ತಾರು ವರ್ಷಗಳಿಂದ ಸಾಗು ಮಾಡಿ ಶುಂಠಿ, ಭತ್ತ, ತೆಂಗು, ಅಡಿಕೆ ಮುಂತಾದ ಬೆಳೆ ಬೆಳೆದಿದ್ದ ಫಸಲನ್ನು ನಾಶ ಮಾಡಿ ಜೆಸಿಬಿಯಿಂದ ಟ್ರೆಂಚ್ ಹೊಡೆದು ತೆರವುಗೊಳಿಸಿ ಹರಾಜಕಥೆ ಮೆರೆದಿದ್ದಾರೆ. ವಿಪರ್ಯಾಸವೆಂದರೆ ತೆರವು ಮಾಡಿರುವ ಭೂಮಿಯ ಕೆಳಭಾಗ ಮತ್ತು ಮೇಲ್ಭಾಗದಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳವರ ಭೂಮಿ ತೆರವುಗೊಳಿಸಿ ಮದ್ಯಭಾಗದಲ್ಲಿರುವ ಸ್ವಜಾತಿಯವರನ್ನು ಮುಟ್ಟದೆ ಬಿಟ್ಟಿದ್ದಾರೆ. ಶಾಸಕರಿಗೆ ಬಡವರೆಂದರೆ ತಾತ್ಸಾರವಾಗಿದೆ. ಸ್ವಜಾತಿ ಜನರೆಂದರೆ ರಕ್ಷಿಸುವ ಹುನ್ನಾರವಾಗಿದೆ. ಶಾಸಕ ರಾಜಕಾರಣಿಯಾಗಿ ಜಾತೀಯತೆ ಮಾಡಿದರೆ ನಡೆಯುತ್ತದೆ. ಆದರೆ ತಾಹಸೀಲ್ದಾರ್ ಜಾತೀಯತೆ ಮೆರೆಯುವುದೆಂದರೆ ಏನರ್ಥ…? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸೋಮವಾರ ಉತ್ತರಿಸುವುದಾಗಿ ಹೇಳಿದರು.
ಇದೇ ರೀತಿ ಎಂಪಿಎಂ ಮತ್ತು ವಿಐಎಸ್‌ಎಲ್ ಅವಳಿ ಕಾರ್ಖಾನೆಗಳನ್ನು ಹಾಳುಗೆಡವಿದ್ದಾರೆ. ವಿಐಎಸ್‌ಎಲ್ ನಗರಾಡಳಿವು ಕುಡಿಯಲು ನೀರು ಸಹ ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ರಾಜ್ಯ ಸರಕಾರ ಮದ್ಯ ಪ್ರವೇಶ ಮಾಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರಸಭೆಗೆ ಹಸ್ತಾಂತರಿಸುವಂತೆ ಮಾಡಬೇಕು. ಜನರಿಗೆ ತೊಂದರೆಯಾದರೆ ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಆಡಳಿತದ ವಿರುದ್ದ ಎದ್ದು ನಿಂತು ಸಮಸ್ಯೆ ಬಗೆಹರಿಸುವಂತಾಗಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಪಂ ಅಧ್ಯಕ್ಷೆ ಲಕ್ಷೀದೇವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜೆ.ಪಿ. ಯೋಗೇಶ್, ಮಣಿಶೇಖರ್, ಮುಖಂಡರಾದ ಕರಿಯಪ್ಪ, ಮಾಜಿ ನಗರಸಭಾಧ್ಯಕ್ಷರಾದ ಸುಧಾಮಣಿ, ವಿಶಾಲಾಕ್ಷಿ, ಕಾರ್ಮಿಕ ಮುಖಂಡ ಜೆ.ಎನ್. ಚಂದ್ರಹಾಸ, ಲೋಕೇಶ್ವರ ರಾವ್, ಮೈಲಾರಪ್ಪ, ಶಿವರಾಜ್, ಆನಂದ್, ನಟರಾಜ್, ಬದರಿನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post