ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಗಾಂಜಾ ಮಾರುತ್ತಿರುವ ಕುರಿತಾಗಿ ಖಚಿತ ಮಾಹಿತಿ ಆಧರಿಸಿ ಹಳೇನಗರ ಠಾಣೆ ಪೊಲೀಸರು ನಡೆಸಿದ ದಾಳಿಯಲ್ಲಿ 8 ಮಂದಿಯನ್ನು ಬಂಧಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಬಿಎಚ್ ರಸ್ತೆಯ ನ್ಯೂ ಸ್ಟಾರ್ ಇಂಜಿನೀಯರಿಂಗ್ ವರ್ಕ್ಸ್ ಬಳಿಯಲ್ಲಿ ಓಮಿನಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತಾಗಿ ಖಚಿತ ಮಾಹಿತಿ ಆಧರಿಸಿ ಹಳೇ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 8 ಜನ ಆರೋಪಿತರ ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಅವರಿಂದ 6 ಕೆಜಿ 400 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಹಾಗೂ ಓಮಿನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸ ಸಿದ್ದಾಪುರದ ವಿಜಯ್ ಕುಮಾರ್, ಚಂದನ್, ಲಿಖಿತ್ ಕುಮಾರ್, ಸಂಕ್ಲೀಪುರದ ಕಿರಣ್ ಹಾಗೂ ಚಲುವ ಕುಮಾರ್, ಜಟ್ ಪಟ್ ನಗರದ ಕಿರಣ್, ಹಳೇ ನಗರದ ಮಂಜುನಾಥ್, ಸಿದ್ದಾಪುರ ತಂಡಾದ ಪವನ್ ನಾಯಕ್ ಬಂಧಿತ ಆರೋಪಿಗಳು. ಎಲ್ಲರ ವಿರುದ್ಧ ಎನ್’ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡಿವೈಎಸ್’ಪಿ ಸುಧಾಕರ್ ನಾಯಕ್ ಮಾರ್ಗದರ್ಶನದಲ್ಲಿ ಭದ್ರಾವತಿ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಹಳೇನಗರ ಪಿಎಸ್’ಐ ಶ್ರೀನಿವಾಸ್ ಅವರನ್ನೊಳಗೊಂಡ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತ್ತು.
Get In Touch With Us info@kalpa.news Whatsapp: 9481252093

















