ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಿನ್ನೆಯಿಂದ ರಭಸವಾಗಿ ಉಕ್ಕಿ ಹರಿಯುತ್ತಿದ್ದ ಭದ್ರಾ ನದಿಯಲ್ಲಿ ಇಂದು ನೀರು ಇಳಿಕೆಯಾಗಿದ್ದು, ಇಂದು ಸೇತುವೆ ಮಟ್ಟಕ್ಕೆ ಹರಿಯುತ್ತಿದೆ.
ಇಂದು 11 ಗಂಟೆ ವೇಳೆಗೆ ಸೇತುವೆಗೆ ತಾಕಿಕೊಂಡೇ ನೀರು ಹರಿಯುತ್ತಿದ್ದರೂ, ಸೇತುವೆ ಮೇಲೆ ನೀರು ಇರಲಿಲ್ಲ.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
ಜಲಾಶಯದಿಂದ ಭಾರೀ ಪ್ರಮಾಣದ ನೀರು ಹರಿಸಿದ್ದು ಹಾಗೂ ನಿರಂತರವಾಗಿ ಮಳೆ ಸುರಿದ ಪರಿಣಾಮವಾಗಿ ನದಿ ಉಕ್ಕಿ ಹರಿದಿತ್ತು. ಹೀಗಾಗಿ, ನೀರಿನ ಅಬ್ಬರಕ್ಕೆ ಬೃಹತ್ ಗಾತ್ರದ ಮರದ ದಿಮ್ಮಿಗಳು, ಗಿಡಗಂಟೆಗಳು ಕೊಚ್ಚಿ ಬಂದು ಸೇತುವೆಗೆ ಸಿಲುಕಿಕೊಂಡಿವೆ. ಸೇತುವೆ ಮೇಲ್ಬಾಗದಲ್ಲಿ ಅಳವಡಿಸಲಾಗಿರುವ ನೀರು ಪೂರೈಕೆ ಪೈಪುಗಳು ಹಾಗೂ ಇತರೆ ಅಗತ್ಯ ಸೇವೆಗಳ ಪೈಪುಗಳು ನೀರಿನ ರಭಸಕ್ಕೆ ಕಿತ್ತು ಹೋಗಿವೆ.
ಸೇತುವೆ ಮಧ್ಯಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಗಿಡಗಂಟೆಗಳು ಸಿಲುಕಿದ್ದ, ಕೆಸರುಮಯವಾಗಿದೆ.
https://www.facebook.com/KalpaNews/posts/1229185684093418
ನೀರಿನ ಮಟ್ಟ ಇಳಿಕೆಯಾದರೂ ಸಹ ರಭಸ ಮಾತ್ರ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ನಿಶ್ಯಬ್ದವಾಗಿ ಹರಿಯುವ ಭದ್ರಾ ನದಿ ಈಗ ಭಾರೀ ಪ್ರಮಾಣದಲ್ಲಿ ಶಬ್ದ ಮಾಡುತ್ತಾ ಹರಿಯುತ್ತಿದೆ.
Get In Touch With Us info@kalpa.news Whatsapp: 9481252093







Discussion about this post