ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪರಿಸರದ ನಡುವೆ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಕಲಮರಹಳ್ಳಿ ಸಹಿಪ್ರಾ ಶಾಲೆಯ ಮುಖ್ಯಶಿಕ್ಷಕ ಸುಂದರೇಶ್ ಅಭಿಪ್ರಾಯಪಟ್ಟರು.
ಕಲಮರಹಳ್ಳಿ ಗ್ರಾಮದ ಗ್ರಾಮದ ಅರಳೀಕಟ್ಟೆ, ವೀರಭದ್ರಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧ ಸಮುದಾಯ ಭವನಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಭಾರತ ದೇಶದ ಪರಂಪರೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ಶಿಕ್ಷಣ ಮೊದಲು ಪ್ರಾರಂಭವಾಗುತ್ತಿದ್ದುದೇ ಗುರುಕುಲ ಶಿಕ್ಷಣ ಪಧ್ದತಿಯಲ್ಲಿ ಗುಡಿ, ಧಾರ್ಮಿಕ ಕೇಂದ್ರಗಳು, ಪರಿಸರದ ನಡುವೆ ಮಕ್ಕಳಿಗೆ ಪಾಠ-ಪ್ರವಚನ ನೀಡುತ್ತಿದ್ದರು ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಉತ್ತಮವಾದ ಪರಿಸರದ ನಡುವೆ ಕಲಿಯುತ್ತಿದ್ದರು ಎಂದರು.
ಈಗ ಕೊರೋನಾ ವೈರಸ್ ಹರಡಬಾರದು ಎಂಬ ಕಾರಣದಿಂದ ಸೀಮಿತ ಕಾಲಾವಧಿಯಲ್ಲಿ ಶಾಲೆಯನ್ನು ಹೊರತುಪಡಿಸಿ ಗ್ರಾಮದ ದೇವಸ್ಥಾನಗಳು, ಸಮುದಾಯ ಭವನಗಳು, ಧಾರ್ಮಿಕ ಕೇಂದ್ರಗಳಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯ-ಸಹಪಠ್ಯವನ್ನು ಬೋಧಿಸುತ್ತಿದ್ದೇವೆ ಎಂದರು.
ಶಿಕ್ಷಕ ಜಗದೀಶ ಮಕ್ಕಳಿಗೆ ವಿವಿಧ ಚಟುವಟಿಕೆ ನೀಡಿದರು ಗ್ರಾಮಸ್ಥರಾದ ಸುರೇಶ, ಮಂಜುನಾಥ, ತಿಪ್ಪೇಸ್ವಾಮಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post