ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕರೆ: ಹಂದಿ ಕದಿಯಲು ಬಂದ ಕಳ್ಳರ ಗುಂಪೊಂದು ಮೂವರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ನಾಯಕನಹಟ್ಟಿ ಬಳಿ ನಡೆದಿದೆ.
ನಾಯಕನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರದ ಬಳಿ ಈ ಭೀಕರ ಭಾನುವಾರ ರಾತ್ರಿ ಘಟನೆ ನಡೆದಿದೆ.
ಸಮುದಾಯದ ಆರೋಗ್ಯ ಕೇಂದ್ರದ ಬಳಿ ನಾಲ್ಕು ಹಂದಿ ಶೆಡ್’ಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಹಂದಿಗಳಿದ್ದವು. ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಹಂದಿ ಕಳ್ಳತನ ಮಾಡುಲು ಬಂದ ಕಳ್ಳರ ಗುಂಪೊಂದು ಶೆಡ್’ನಲ್ಲಿ ಇದ್ದವರ ಮೇಲೆ ಏಕಾಏಕಿ ದಾಳಿ ಮಾಡಿ ಮಾಡಿದೆ.
ಏನು ನಡೆಯುತ್ತಿದೆ ಎಂದು ಗೊತ್ತಾಗುವ ಮೊದಲೇ ಶೆಡ್’ನಲ್ಲಿ ಮಲಗಿದ್ದವರ ಮೇಲೆ ಖಾರದ ಪುಡಿ ಎರಚಿದ ಕಳ್ಳಲು, ಅಲ್ಲಿ ಇಲ್ಲಿ ಏನ್ ನಡೆಯುತ್ತಿದೆ ಎನ್ನುವುದು ಗೊತ್ತಾಗುವ ಮೊದಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸೀನಪ್ಪ ಎನ್ನುವವರ ತಲೆ ಕತ್ತರಿಸಿದ್ದು, ಯಲ್ಲೇಶ್ ಹಾಗೂ ಮಾರೇಶ್ ಎನ್ನುವವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಎಮ್. ರಾಧಿಕಾ, ಎಸಿಪಿ ಮಹಲಿಂಗ ನಂದಗಾವಿ, ಡಿವೈಎಸ್ ಪಿ. ಶ್ರೀಧರ್, ಪಿಸ್‌ಐ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗಾರಿಗಾಗಿ ಬಲೆ ಬೀಸಲಾಗಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post