ಬೆಂಗಳೂರು: ಆಪರೇಶನ್ ಕಮಲದ ಹಿನ್ನೆಲೆಯಲ್ಲಿ ಜೆಡಿಎಸ್ ಎಂಎಲ್’ಎ ನಾಗನಗೌಡ ಕುಂದಕರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ 25 ಲಕ್ಷ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿದ್ದಾರೆ ಎಂಬ ಆಡಿಯೋ ಕ್ಲಿಪ್’ವೊಂದನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಆಡಿಯೋ ಬಿಡುಗಡೆ ಮಾಡಿದ ಕುಮಾರಸ್ವಾಮಿ, ಆಪರೇಶನ್ ಕಮಲಕ್ಕಾಗಿ ಬಿಜೆಪಿ ಜೆಡಿಎಸ್ ಶಾಸಕರಿಗೆ ಆಮಿಷವೊಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನಮ್ಮ ರಾಜ್ಯದ ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ, ಅದೆಷ್ಟೋ ಭಾಷಣಗಳನ್ನು ಮಾಡುತ್ತಾರೆ, ಸಂಸತ್ ನಲ್ಲಿ ನಿನ್ನೆ ಭ್ರಷ್ಟಾಚಾರ ತಡೆ ಹಾಗೂ ಕಪ್ಪು ಹಣದ ಬಗ್ಗೆ ಮಾತನಾಡುತ್ತಾರೆ,ಅವರಿಗೆ ಈಗ ಅಂಬೇಡ್ಕರ್ ನೆನಪಾಗಿದೆ ಎಂದು ವ್ಯಂಗ್ಯ ವಾಡಿದ್ದಾರೆ.
ಭ್ರಷ್ಟಾಚಾರ ನಿಲ್ಲಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ, ದೇಗುಲ ಎಂದು ಸಂಸತ್ ನ ಮೆಟ್ಟಿಲುಗಳಿಗೆ ನಮಿಸುತ್ತಾರೆ ಆದರೆ ಸಂಸತ್ತಿನಲ್ಲಿ ತಪ್ಪು ಮಾಹಿತಿ ನೀಡುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸಾಲಮನ್ನಾ ಬಗ್ಗೆ ತಪ್ಪು ಸಂಸತ್ ನಲ್ಲಿ ಪ್ರಧಾನ ತಪ್ಪು ಮಾಹಿತಿ ನೀಡಿದ್ದನ್ನು ವಿರೋಧಿಸಿ ಹಕ್ಕು ಚ್ಯುತಿ ಮಂಡಿಸಲು ಖರ್ಗೆ ಅವರಿಗೂ ಮನವಿ ಮಾಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಹೇಳಿದರು.
ಒಂದು ಕಡೆ ಭ್ರಷ್ಟಾಚಾರ ಕಪ್ಪು ಹಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ಮತ್ತೊಂದೆಡೆ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮೋದಿ ತಮ್ಮ ಸಹಾಯ ನೀಡುತ್ತಿದ್ದಾರೆ, ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಆದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ನಾನು ಸುದ್ದಿಗೋಷ್ಠಿ ನಡೆಯುವಂತೆ ಮಾಡಿವೆ ಎಂದು ಬೇಸರ ವ್ಯಕ್ತ ಪಡಿಸಿದರಲ್ಲದೆ, ಕೇಂದ್ರ ಸಚಿವ ಸದಾನಂದ ಗೌಡ, ದಿ ಗ್ರೇಟ್ ಅಶೋಕ್ ಎನೆಲ್ಲಾ ಮಾತನಾಡಿದ್ದಾರೆ, ನಾವು ವಿಪಕ್ಷದಲ್ಲಿದ್ದೇವೆ, ನಾವು ಸನ್ಯಾಸಿಗಳಲ್ಲ, ನಾವು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಹೊರಟಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ, ಜನರಿಗೆ ಏನು ಹೇಳಲು ಹೊರಟಿದ್ದಾರೆ. ನಾವು ಅವರಿಗೆ ಸನ್ಯಾಸಿಗಳಾಗಿರಿ ಎಂದು ಹೇಳಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ.
Discussion about this post