ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಸೋಂಕು ಹೊಂದಿದ್ದ ಅಪ್ಪಾಜಿ ಗೌಡರಿಗೆ ಸರಿಯಾದ ಸಮಯಕ್ಕೆ ವೆಂಟಿಲೇಟರ್ ದೊರಕಿದ್ದರೆ ಬದುಕುತ್ತಿದ್ದರು ಎಂದು ಜೆಡಿಎಸ್ ಮಾಜಿ ಶಾಸಕ ವೈಎಸ್’ವಿ ದತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಕನಿಷ್ಠ ಏಳು ದಿನ ಇರಿಸಿ ದಿನಕ್ಕೆ ಹದಿನೈದು ಸಾವಿರ ದಿನಕ್ಕೆ ಹಣ ಪಡೆದುಕೊಳ್ಳುತ್ತಾರೆ. ಇದೇ ವೇಳೆ ಸರಿಯಾದ ಸಮಯಕ್ಕೆ ಆಕ್ಸಿಜನ್ ವೆಂಟೀಲೇಟರ್ ಸಿಕ್ಕಿದ್ದರೆ ಅಪ್ಪಾಜಿಗೌಡರು ಬದುಕುತ್ತಿದ್ದರು. ಒಬ್ಬ ಮಾಜಿ ಶಾಸಕನಿಗೆ ವೆಂಟೀಲೇಟರ್ ಸಿಗದೇ ಸಾವನ್ನಪ್ಪುತ್ತಾರೆ ಅಂದರೆ, ಬಡವರ ಗತಿ ಏನು ಎಂದು ಜನಸಾಮಾನ್ಯರು ಮಾತಾನಾಡುತ್ತಿದ್ದಾರೆ ಎಂದರು.
ನಮ್ಮ ನೆಚ್ಚಿನ ಕಾರ್ಮಿಕ ವರ್ಗದ ನಾಯಕರಾದ ಅಪ್ಪಾಜಿಗೌಡರ ನಿಧನ ನಮಗೆ ಬರಸಿಡಿಲು ಬಂಡಿದಂತಾಯಿತು ಎಂದರು.
ಮೊದಲು ಮೆಡಿಕಲ್ ಸೀಟ್ ಕೊಡಿಸಿ ಎನ್ನುತ್ತಿದ್ದರು. ಆದರೆ ಈಗ ಬೆಡ್ ಕೊಡಿಸಿ ಅನ್ನುವ ಪರಿಸ್ಥಿತಿ ಬಂದಿದೆ ಎಂದರು.
ಅಪ್ಪಾಜಿ ಗೌಡರ ಸಾವಿನ ಹೊಣೆಯನ್ನು ಜಿಲ್ಲಾಡಳಿತವೋ, ತಾಲೂಕು ಆಡಳಿತವೋ ಹೊತ್ತುಕೊಳ್ಳಬೇಕು. ಸರ್ಕಾರಿ ವ್ಯವಸ್ಥೆಯ ಲೋಪ ಅಪ್ಪಾಜಿಗೌಡರ ಸಾವು ಬಡವರ ಸಾವು. ಆತ ಬಡವರಿಗಾಗಿ ಆಸ್ಪತ್ರೆಯ ಮುಂದೆ ಧರಣಿ ಕೂತವರು. ಅವರಿಗೇ ಹೀಗಾಯಿತು ಎಂಬುದನ್ನು ಹೇಗೆ ಜೀರ್ಣಿಸಿಕೊಳ್ಳುವುದು ಎಂದರು.
ಸೆ.13 ಕ್ಕೆ ಅವರ ಪುಣ್ಯರಾಧನೆ ಕಾರ್ಯ ಮಾಡುತ್ತಿದ್ದೇವೆ. ಕೌಟುಂಬಿಕ ಕಾರ್ಯಕ್ರಮಕ್ಕೆ ತಾವೂ ಸಹ ಬರುವುದಾಗಿ ಎಚ್.ಡಿ. ಕುಮಾರಸ್ವಾಮಿಯವರು ಹೇಳಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ಪುಣ್ಯಾರಾಧನೆಯನ್ನು ಭದ್ರಾವತಿ ಚರ್ಚ್ ಮೈದಾನದಲ್ಲಿ ಮಾಡಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.
ರಾಜ್ಯ ಕಾರ್ಯದರ್ಶಿ ಶ್ರೀಕಾಂತ್, ಭದ್ರಾವತಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್, ಕರುಣಾಮೂರ್ತಿ, ಮಾಜಿ ಸದಸ್ಯ ಕೆಂಚೇನಹಳ್ಳಿ ಕುಮಾರ ಇದ್ದರು.
Get In Touch With Us info@kalpa.news Whatsapp: 9481252093
Discussion about this post