ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸತತ ಮಳೆಯಿಂದಾಗಿ ಅಣೆಕಟ್ಟೆ ತುಂಬಿದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ಇಂದು ಮುಂಜಾನೆ 10.30ಕ್ಕೆ * ಗೇಟ್ ತೆರೆದು ಒಟ್ಟು 2288 ಕ್ಯೂಸೆಕ್ಸ್ ನೀರು ಹರಿಸಲಾಗಿದೆ.
ಇದರೊಂದಿಗೆ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಿಗೂ ಸಹ ನೀರು ಹರಿಸಲಾಗಿದ್ದು, ನದಿ ಹಾಗೂ ನಾಲೆಗಳು ಈ ಮಳೆಗಾಲದಲ್ಲಿ ಮೊದಲ ಬಾರಿಗೆ ಮೈದುಂಬಿವೆ.
ವಾರ ಭವಿಷ್ಯ ನಿಖರ, ವೈಜ್ಞಾನಿಕ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 13.09.2020 ರಿಂದ 19.09.2020
186 ಅಡಿ ಪೂರ್ಣ ಮಟ್ಟದ ಅಣೆಕಟ್ಟೆಯಲ್ಲಿ ಇಂದು ಮುಂಜಾನೆಯ ಮಾಹಿತಿಯಂತೆ 185.7 ಅಡಿ ನೀರು ಸಂಗ್ರಹವಾಗಿದೆ. 71,116 ಟಿಎಂಸಿ ನೀರು ಪೂರ್ಣ ಸಂಗ್ರಹ ಸಾಮರ್ಥ್ಯವಿದ್ದು, ಇಂದು ಮುಂಜಾನೆಗೆ 70,012 ಟಿಎಂಸಿ ನೀರು ಸಂಗ್ರಹವಾಗಿದೆ.
ನದಿಗೆ 400 ಕ್ಯೂಸೆಕ್ಸ್, ಎಡದಂಡೆ ನಾಲೆಗೆ 100 ಕ್ಯೂಸೆಕ್ಸ್ ಹಾಗೂ ಬಲದಂಡೆ ನಾಲೆಗೆ 917 ಕ್ಯೂಸೆಕ್ಸ್ ಸೇರಿದಂತೆ ಒಟ್ಟು 2288 ಕ್ಯೂಸೆಕ್ಸ್ ನೀರು ಹರಿಸಲಾಗಿದೆ.
Water released from Bhadra Reservoir 2020#Shivamogga #Shimoga #Bhadra_Dam #Bhadravathi #Bhadra_River pic.twitter.com/SoLKeN9Tdz
— Kalpa News (@KalpaNews) September 14, 2020
ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಅಣೆಕಟ್ಟೆ ತುಂಬಿ, ಗೇಟ್ ಮೂಲಕ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಇದನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ನೆರೆದಿದ್ದರು.
Get In Touch With Us info@kalpa.news Whatsapp: 9481252093
Discussion about this post