ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಮುಖ್ಯಾಧಿಕಾರಿ ಸೇರಿದಂತೆ ಬಹುತೇಕ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪುರಸಭೆಗೆ 14 ದಿನಗಳ ಕಾಲ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಿ ಜನಸಾಮಾನ್ಯರ ಶುಚಿತ್ವ ಕಾಪಾಡುತ್ತಿದ್ದ ಪುರಸಭೆ ಕಚೇರಿಯ ಮುಖ್ಯಾಧಿಕಾರಿ ಹಾಗೂ ಬಹುತೇಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ಹದಿನಾಲ್ಕು ದಿನಗಳ ಕಾಲ ಪುರಸಭೆಯನ್ನು ಸೀಲ್’ಡೌನ್ ಮಾಡಲಾಗಿದ್ದು ಸಾರ್ವಜನಿಕರಿಗೆ ಸೇವೆಗಳು ದೊರಕುವುದಿಲ್ಲವೆಂದು ಪುರಸಭೆ ಮೂಲಗಳು ತಿಳಿಸಿವೆ.
ಊರಿನ ತಂದೆ ತಾಯಿಯೆಂದು ಬಿಂಬಿತವಾಗಿರುವ ಪೌರಸೇನಾನಿಗಳು ಈ ಸೋಂಕಿನಿಂದ ದೂರವಿದ್ದು ಔಷಧಿ ಸಿಂಪಡಿಸುವ ಕೆಲವರನ್ನು ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳಿಗೆ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದ್ದು, ಈ ಮುಗಿದ ಮೇಲೆ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಬರಬಹುದು. ಅಲ್ಲಿಯವರೆಗೆ ಜನಸಾಮಾನ್ಯರು ಸಹಕರಿಸಬೇಕು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೋರಲಾಗಿದೆ.
ಇನ್ನು, ನೀರು ಸರಬರಾಜು, ಸ್ವಚ್ಛತೆ ಹಾಗೂ ತುರ್ತು ಕೆಲಸಗಳು ಯಥಾಸ್ಥಿತಿಯಲ್ಲಿ ನಡೆಯಲಿವೆ ಎಂದು ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕರಾದ ರಂಜಿತ್ ತಿಳಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post