ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಸೋಂಕಿಗೆ ಬಲಿಯಾದವರ ಶವ ಸುಡಲು ವಿದ್ಯಾನಗರದಲ್ಲಿರುವ ಚಿತಾಗಾರಕ್ಕೆ ನಿಯೋಜನೆಗೊಂಡಿದ್ದ ಪಾಪನಾಯಕ್ ಎಂಬ ವ್ಯಕ್ತಿಯೇ ಕೊರೋನಾಗೆ ಬಲಿಯಾದ ದುರಂತ ಘಟನೆ ನಡೆದಿದೆ.
ವಿದ್ಯಾನಗರದಲ್ಲಿರುವ ಚಿತಾಗಾರದಲ್ಲಿ ಇವರನ್ನು ಪಾಲಿಕೆ ವತಿಯಿಂದ ನಿಯೋಜಿಸಲಾಗಿತ್ತು. ಇವರು ಕೋವಿಡ್ ಸೋಂಕಿತ ಶವವನ್ನು ಪ್ರತಿನಿತ್ಯ ಸುಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು.
ಮಹಾನಗರ ಪಾಲಿಕೆಯಿಂದ ಗ್ಯಾಸ್ ಕ್ರಿಮಿಟೋರಿಯಂ ಶುರುವಾದಾಗಿನಿಂದ ಕೋವಿಡ್ ಶವಗಳನ್ನು ಸುಡುತ್ತಾ ಬಂದಿದ್ದಾರೆ. ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕೆಲಸ ಮಾಡುತ್ತಿದ್ದ ಅವರು ಮೂರು ನಾಲ್ಕು ದಿನದ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅವರ ಕೊನೆಯುಸಿರೆಳೆದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ. ಯೋಗೇಶ್, ಪಾಪನಾಯಕ್ ಅವರ ಹೆಸರು ಶಾಶ್ವತವಾಗಿ ಉಳಿಯಲಿ, ನಿಮ್ಮಂತಹ ಜನ ಮತ್ತೆ ಹುಟ್ಟಿ ಬರಲಿ, ಭಗವಂತ ನಿಮ್ಮ ಕುಟುಂಬಕ್ಕೆ ಧೈರ್ಯವನ್ನು ತುಂಬಲಿ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post