ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆ ಪ್ರಾಕೃತಿಕ ಸೊಬಗಿನ ತಾಣ. ಪ್ರವಾಸೋದ್ಯಮಕ್ಕೆ ತೆರೆದ ಅವಕಾಶಗಳಿವೆ. ಕೋಟೆ, ಕೊತ್ತಲಗಳು ಶಿಲ್ಪಕಲಾ ದೇಗುಲಗಳು, ರಮಣೀಯ ನಿಸರ್ಗಕ್ಕೆ ಹೆಸರುವಾಸಿ.
ಜಗತ್ಪ್ರಸಿದ್ಧ ಜೋಗ ಜಲಪಾತ ಹೃನ್ಮನಗಳನ್ನು ತಣಿಸುವ ಸಮೃದ್ಧ ಪರಿಸರ. ಜೋಗದ ಅಭಿವೃದ್ಧಿ ಬಗ್ಗೆ ಪ್ರಾಧಿಕಾರ ಕಾರ್ಯಶೀಲವಾಗಿದೆ. ಜೋಗ, ಇಷ್ಟು ಕಾಲ ಪ್ರವಾಸಿ ಆಕರ್ಷಣೆ ಹೊಂದಲು ಕಾಯುತ್ತಿತ್ತು. ಅನೇಕ ಯೋಜನೆಗಳು ಅಗತ್ಯವಿದ್ದವು. ಅಂತಹ ಹಲವು ಯೋಜನೆಗಳನ್ನು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು ರೂಪಿಸಿದ್ದರು. ಅವರ ಕನಸನ್ನ ನನಸು ಮಾಡುವಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದ, ಯುವ ಕಣ್ಮಣಿ ಶ್ರೀ ಬಿ.ವೈ. ರಾಘವೇಂದ್ರ ಅವರ ಕ್ರಿಯಾಶೀಲರಾದರು. ಯೋಜನೆಗಳ ಮಂಜೂರಾತಿಗೆ ರಾಜ್ಯ ಮತ್ತು ಕೇಂದ್ರದ ನಡುವೆ ಸಮರ್ಥವಾಗಿ ಸಮನ್ವಯತೆ ಸಾಧಿಸಿದರು. ಸಂಸದ ಶ್ರೀ ರಾಘವೇಂದ್ರ ಅವರು ಪಟ್ಟು ಬಿಡದೆ ಇಲಾಖೆಗಳನ್ನು ಸಂಪರ್ಕಿಸಿ ಜೋಗದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದಾರೆ. ಅದರ ಫಲವಾಗಿ ಈಗ ಜೋಗವನ್ನು ಆಕರ್ಷಣೀಯಗೊಳಿಸಲು 120 ಕೋಟಿ ರೂ.ಗಳ ಮಂಜೂರಾತಿ ದೊರೆತಿದೆ.
ಸಂಸದರ ಪ್ರಯತ್ನದ ಫಲವಾಗಿ ಜೋಗ ಸರ್ವಋತು ಜಲಪಾತವಾಗಲಿದೆ. ದೀಪಾಲಂಕಾರ ಸೌಲಭ್ಯ ಸಹಿತ ಅನುಪಮ ಪ್ರೇಕ್ಷಣೀಯ ಸ್ಥಳವಾಗಲಿದೆ. ವಿಶೇಷವೆಂದರೆ ಬೇಸಿಗೆಯಲ್ಲೂ ಶನಿವಾರ- ಭಾನುವಾರ ಜಲಪಾತದಲ್ಲಿ ನೀರು ಧುಮ್ಮಿಕ್ಕಲಿದೆ. ಕೆಪಿಸಿ ಅವರ ಸಹಭಾಗಿತ್ವದಿಂದ ಇದು ಸಾಧ್ಯವಾಗಿದೆ.
ಅಷ್ಟೇ ಅಲ್ಲ ಜಿಪ್ ಲೈನ್ ಅಳವಡಿಕೆಯಿಂದಾಗಿ ಜೋಗ ಸಾಹಸಿ ತಾಣವಾಗಿ ಕಂಗೊಳಿಸಲಿದೆ. ಸುಸಜ್ಜಿತ ವಾಹನ ನಿಲ್ದಾಣ, ನೋಡುಗರಿಗೆ ವೀಕ್ಷಣಾ ಗೋಪುರ, ಅತ್ಯಾಧುನಿಕ ಹೊಟೇಲ್, ಹೂದೋಟ, ಸೂಕ್ತವಾಗಿ ವಾಹನಗಳ ಪಾರ್ಕಿಂಗ್, ಜಲಸಾಹಸ, ದೋಣಿ ವಿಹಾರಗಳಿಗೆ ಜಲಮೂಲಗಳ ರಕ್ಷಣೆ, ಈಜುಕೊಳ, ಪ್ರವಾಸಿಗಳಿಗೆ ತಂಗುವುದಕ್ಕೆ ಕಾಟೇಜುಗಳು ಇತ್ಯಾದಿ ಉತ್ತಮ ವಸತಿ ಸೌಕರ್ಯಗಳ ಬಗ್ಗೆ ಮಂಜೂರಾತಿ ದೊರೆತಿದೆ.
ಪ್ರವಾಸಿಗಳಿಗೆ ಎಬಿ ಸೈಟ್ ವೀಕ್ಷಣೆ ಮಾಡಲು ರೋಪ್ ಲೈನ್ ವಿಶಾಲ ರಸ್ತೆಗಳು ನಿರ್ಮಾಣವಾಗಲಿವೆ. ಇಲ್ಲಿ ಉಲ್ಲೇಖಿಸಬೇಕಾದ ಪ್ರಮುಖ ಸಂಗತಿಯೆಂದರೆ ಗ್ರಾಮಭಾರತ ಸಾಕಾರಕ್ಕೆ ಸಂಸದರ ಮುಂದಾಲೋಚನೆ. ಮಲೆನಾಡಿನಲ್ಲಿ ತಯಾರಾದ ಕರಕುಶಲ, ಗೃಹಾಧಾರಿತ ಉತ್ಪನ್ನಗಳ ಮಾರಾಟ ಮಳಿಗೆ ಇರುತ್ತದೆ. ಮತ್ತಿತರ ನವೀನ ವಸ್ತುಗಳ ಅಂಗಡಿ ಮುಂಗಟ್ಟುಗಳ ಸೌಲಭ್ಯ ಒದಗಿಸಲಾಗಿದೆ.
ಒಟ್ಟಿನಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಕ್ಷೇತ್ರವನ್ನು ರಾಜ್ಯವೊಂದೇ ಅಲ್ಲ ರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಮಿನುಗುವಂತೆ ಮಾಡುವ ಪಣತೊಟ್ಟಿದ್ದಾರೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ ಸದಸ್ಯ ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಕಾಶಿ, ನಮ್ಮ ಕನಸಿನ ಶಿವಮೊಗ್ಗದ ಶ್ರೀ ಗೋಪೀನಾಥ್ ಮತ್ತು ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಉಪಾಧ್ಯಕ್ಷ ಶ್ರೀಶಂಕರಪ್ಪ, ಸಹ ಕಾರ್ಯದರ್ಶಿ ಅ.ನಾ. ವಿಜಯೇಂದ್ರ, ನಿರ್ದೇಶಕರಾದ ಡಾ.ಸುಧೀಂದ್ರ, ಕೆ.ಜಿ. ಮಂಜುನಾಥ ಶರ್ಮ, ಸುಕುಮಾರ್, ಶ್ರೀಮತಿ ನಿರ್ಮಲಾ ಕಾಶಿ ಹಾಗೂ ಸದಸ್ಯರು, ಸಂಸದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post