ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯ ಹೆಮ್ಮೆಯ ಕಾರ್ಖಾನೆಗಳಾದ ಭದ್ರಾವತಿಯ ವಿಐಎಸ್’ಎಲ್ ಹಾಗೂ ಎಂಪಿಎಂ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ 2000 ಉದ್ಯೋಗ ಸೃಷ್ಠಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೈಸೂರು ಕಾಗದ ಕಾರ್ಖಾನೆ ಹಾಗೂ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ 1000ಜನರಿಗೆ ಉದ್ಯೋಗಾವಕಾಶ ಒದಗಿಸುವ ಹಾಗೂ ಪರೋಕ್ಷವಾಗಿ 1000ಜನರಿಗೆ ಉದ್ಯೋಗ ಒದಗಿಸುವ ಷರತ್ತಿಗೊಳಪಟ್ಟು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಉಳಿದಂತೆ ಕಾರ್ಖಾನೆಯ 1 ಲಕ್ಷ ಎಕರೆ ಅರಣ್ಯಭೂಮಿಯನ್ನು ಕಾರ್ಖಾನೆಗೆ ಉಳಿಸಿಕೊಳ್ಳಲಾಗುವುದು ಎಂದರು.
Get In Touch With Us info@kalpa.news Whatsapp: 9481252093







Discussion about this post