ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಅಣೆಕಟ್ಟೆ ತುಂಬಲು ಇನ್ನು 5.6 ಅಡಿಗಳ ನೀರು ಬೇಕಿದೆ.
ಇಂದು ಮುಂಜಾನೆಯ ಮಾಹಿತಿಯಂತೆ, 186 ಅಡಿಗಳ ಪೂರ್ಣ ಮಟ್ಟದ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 180.4 ಅಡಿಗಳಷ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 15326 ಕ್ಯೂಸೆಕ್ಸ್ ಒಳಹರಿವಿದ್ದು, 64.578 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷದ ಇದೇ ದಿನ 185’2 ಅಡಿ ನೀರು ಸಂಗ್ರಹವಾಗಿತ್ತು. ಹಿಂದಿನ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಇಂದಿನ ನೀರಿನ ಮಟ್ಟ ಕಡಿಮೆಯೇ ಆಗಿದೆ.
ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆಯಾಯ್ತು?
ಜಿಲ್ಲೆಯಲ್ಲಿ ನಿನ್ನೆ ಒಟ್ಟು ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 250.64 ಮಿಮಿ ಮಳೆಯಾಗಿದ್ದು, ಸರಾಸರಿ 35.81 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 417.87 ಮಿಮಿ ಇದ್ದು, ಇದುವರೆಗೆ ಸರಾಸರಿ 675.35 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 42.80 ಮಿಮಿ., ಭದ್ರಾವತಿ 17.60 ಮಿಮಿ., ತೀರ್ಥಹಳ್ಳಿ 76.40 ಮಿಮಿ., ಸಾಗರ 16.04 ಮಿಮಿ., ಶಿಕಾರಿಪುರ 6.60 ಮಿಮಿ., ಸೊರಬ 24.00 ಮಿಮಿ. ಹಾಗೂ ಹೊಸನಗರ 67.20 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ(ಅಡಿಗಳಲ್ಲಿ)
ಲಿಂಗನಮಕ್ಕಿ: 1819 (ಗರಿಷ್ಠ), 1800.80 (ಇಂದಿನ ಮಟ್ಟ), 42773.00 (ಒಳಹರಿವು), 0.00 (ಹೊರಹರಿವು).
ಭದ್ರಾ: 186 (ಗರಿಷ್ಠ), 179.50 (ಇಂದಿನ ಮಟ್ಟ), 15085.00 (ಒಳಹರಿವು), 2593.00 (ಹೊರಹರಿವು).
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 40256.00 (ಒಳಹರಿವು), 40256.00 (ಹೊರಹರಿವು).
ಮಾಣಿ: 595 (ಎಂಎಸ್‌ಎಲ್‌ಗಳಲ್ಲಿ), 584.20 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 6426 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ).
ಪಿಕ್‌ಅಪ್: 563.88 (ಎಂಎಸ್‌ಎಲ್‌ಗಳಲ್ಲಿ), 563.10 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 2622 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್‌ಗಳಲ್ಲಿ), 574.98 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 1977.00 (ಒಳಹರಿವು), 855 (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), 580.26(ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 2468.00 (ಒಳಹರಿವು), 1755.00 (ಹೊರಹರಿವು ಕ್ಯೂಸೆಕ್ಸ್‌ಗಳಲ್ಲಿ).
Get In Touch With Us info@kalpa.news Whatsapp: 9481252093
Discussion about this post