ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಸಾಗರ ತಾಲೂಕು:
ಅರ್ಕಳ, ಬಳ್ಳಿಬೈಲು, ಶ್ರೀಧರಪುರ, ಕಪ್ಪದೂರು ಮತ್ತು ಸರಗುಂದ ಗ್ರಾಮದ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಗಿಳಾಲಗುಂಡಿ, ಲಕ್ಕವಳ್ಳಿ, ಕಂಬಳಿಕೊಪ್ಪ, ಹೊಂಕೇರಿ, ಕಾರ್ಗಲ್-1, ಬೆಳ್ಳೆಣ್ಣೆ, ಇಡುವಾಣಿ, ಕುಡಿಗೆರೆ ಮತ್ತು ಕಾರೆಹೊಂಡ ಅಂಗನವಾಡಿ ಕೇಂದ್ರಗಳಲ್ಲಿನ ಅಂಗನವಾಡಿ ಸಹಾಯಕಿಯರ ಹುದ್ದೆ.
ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ ಅರ್ಹ ಮಹಿಳಾ ಅಭ್ಯರ್ಥಿಗಳು ಸೆಪ್ಟಂಬರ್ 23ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಹೊಂದಿರುವ ವಿದ್ಯಾರ್ಹತೆ ಹಾಗೂ ಮೀಸಲಾತಿಯನ್ವಯ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08183-226804ನ್ನು ಸಂಪರ್ಕಿಸಬಹುದಾಗಿದೆ.
ಹೊಸನಗರ ತಾಲೂಕು:
ಕೋರನಕೋಟೆ, ಗಿಣಿಕಲ್ ಮತ್ತು ಕೆ.ಕುನ್ನೂರು ಗ್ರಾಮದ ಅಂಗನವಾಡಿ ಮತ್ತು ದೊಡ್ಡಿನಮನೆ, ಕಾಳೇಶ್ವರ, ನೆವಟೂರು-2, ನೇರ್ಲಿಗೆ, ಮೈಥಳ್ಳಿ, ಮುಡುಬ, ಸಾವಂತೂರು, ಕಲ್ಲುಘಟ್ಟ ಮತ್ತು ಜಕ್ಕನಗದ್ದೆ ಗ್ರಾಮಗಳ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಕೋಣನಜೆಡ್ಡು, ಬುಕ್ಕಿವರೆ, ಮತ್ತಿಮನೆ, ಮೂಡುಕೊಪ್ಪ, ಎಂ. ಗುಡ್ಡೇಕೊಪ್ಪ, ಚಂದಾಳದಿಂಬ, ಬೆಳ್ಳೂರು, ಮೇಕೇರಿ ಮತ್ತು ಮಳೂರು ಅಂಗನವಾಡಿ ಕೇಂದ್ರಗಳಲ್ಲಿನ ಅಂಗನವಾಡಿ ಸಹಾಯಕಿಯರ 09ಹುದ್ದೆ.
ನಿಗದಿಪಡಿಸಿದ ವಿದ್ಯಾರ್ಹತೆ ಹಾಗೂ ವಯೋಮಿತಿಯೊಳಗಿನ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳು ಸೆಪ್ಟಂಬರ್ 23ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಅರ್ಭರ್ಥಿಗಳು ಹೊಂದಿರುವ ವಿದ್ಯಾರ್ಹತೆ ಹಾಗೂ ಮೀಸಲಾತಿಯನ್ವಯ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗಾಗಿ ಜಾಲತಾಣ www.anganavadirecruit.kar.nic.in ನ್ನು ಸಂಪರ್ಕಿಸಬಹುದಾಗಿದೆ.
ಸೊರಬ ತಾಲೂಕು:
ದ್ಯಾವನಹಳ್ಳಿ, ಎಣ್ಣೆಕೊಪ್ಪ (ಮಿನಿ), ಸೀಗೆಹಳ್ಳಿ (ಮಿನಿ), ಮಾಳೆಕೊಪ್ಪ, ಹೊರಬೈಲುಕೊಪ್ಪ (ಮಿನಿ), ಕಾನುಗೋಡು (ಮಿನಿ) ಮತ್ತು ಸಾಬರ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಚಿಟ್ಟೂರು-2, ಕಲ್ಲಂಬಿ, ಹೊರಬೈಲು, ಹುಲ್ತಿಕೊಪ್ಪ, ಚಿಕ್ಕಚೌಟಿ, ನಿಸರಾಣಿ-1, ಚಿಕ್ಕಬ್ಬೂರು ಅಂಗನವಾಡಿ ಕೇಂದ್ರಗಳಲ್ಲಿನ ಸಹಾಯಕಿಯರ ಹುದ್ದೆ.
ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ಹಾಗೂ ಸಹಾಯಕಿಯರ ಹುದ್ದೆಗೆ 4 ರಿಂದ 9ನೇ ತರಗತಿ ಉತ್ತೀರ್ಣ ಹೊಂದಿರುವ 18 ರಿಂದ 35 ವಯೋಮಿತಿಯಲ್ಲಿರುವ ಸ್ಥಳೀಯ ಅಭ್ಯರ್ಥಿಗಳು ಇಲಾಖೆ ವೆಬ್‌ಸೈಟ್ www.anganwadirecruit.kar.nic.in ಮುಖಾಂತರ ಸೆಪ್ಟಂಬರ್ 23 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08184-295896ನ್ನು ಸಂಪರ್ಕಿಸುವುದು.
ತೀರ್ಥಹಳ್ಳಿ ತಾಲೂಕು:
ಅರೆನಲ್ಲಿ (ಮಿನಿ), ಮುಡುಬ (ಮಿನಿ), ಮಲ್ಲಂದೂರು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಶೇಡ್ಗಾರ್, ಕಾಸರವಳ್ಳಿ, ತಲ್ಲೂರುಮಳಲಿ, ಆರಗ, ಬಳಗೋಡು, ಸರಳ, ಮಕ್ಕಿಬೈಲು, ಜಿಗಳಗೋಡು, ಸಾಲೂರು (ಮಾರಿಗುಣಿ) ಅಂಗನವಾಡಿ ಕೇಂದ್ರಗಳಲ್ಲಿನ ಸಹಾಯಕಿಯರ ಹುದ್ದೆ.
ಸ್ಥಳೀಯ ಅಭ್ಯರ್ಥಿಗಳು ಇಲಾಖೆ ವೆಬ್‌ಸೈಟ್ www.anganwadirecruit.kar.nic.in ಮುಖಾಂತರ ಸೆಪ್ಟಂಬರ್-23 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08181-295940ನ್ನು ಸಂಪರ್ಕಿಸುವುದು.
Get In Touch With Us info@kalpa.news Whatsapp: 9481252093
Discussion about this post