ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಪಟ್ಟಣದ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಭಾರೀ ಪ್ರಮಾಣದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎಎಸ್’ಪಿ ಶ್ರೀನಿವಾಸಲು, ಸಿಪಿಐ ಗುರುರಾಜ್ ಮೈಲಾರಿ ಹಾಗೂ ಪಿಎಸ್’ಐ ರವಿಕುಮಾರ್ ಅವರುಗಳ ಸಾರಥ್ಯ/ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಚಾಮರಾಜ್ ಹಾಗೂ ಅವರ ತಂಡ ವೇಷ ಮರೆಸಿಕೊಂಡು ರೈತರಂತೆ ನಟಿಸಿ, ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಮಾಲು ಸಹಿತ ಅಪರಾಧಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.
ತಾಲೂಕು ಮಾಸ್ತಿಬೈಲು ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಹಿಂಭಾಗದ ಕಲ್ಮನೆ ಹನುಮಂತಪ್ಪ ಎನ್ನುವವರ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು 1,50,000 ಮೌಲ್ಯದ 32 ಕೆಜಿ 120 ಗ್ರಾಂ ಎಲೆ ಮೊಗ್ಗು ಕಾಂಡ ಸಹಿತ ಹಸಿ ಗಾಂಜಾ ಗಿಡಗಳನ್ನು ಹಾಗೂ ದೇವರಹಳ್ಳಿ ಗ್ರಾಮದ ವಾಸಿ ಕಲ್ಮನೆ ಕನ್ನಪ್ಪ ಗುಂಡ ಎನ್ನುವವರ ಶುಂಠಿ ಹೊಲದಲ್ಲಿ ಸುಮಾರು 35.000 ರೂ. ಮೌಲ್ಯದ 6ಕೆಜಿ 340 ಗ್ರಾಂ ಎಲೆ ಮೊಗ್ಗು ಕಾಂಡ ಇರುವ ಹಸಿ ಗಾಂಜಾ ಗಿಡಗಳನ್ನು ಮಾಲು ಸಹಿತ ಹಿಡಿದು, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post