ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹಿರಿಯ ವೈದ್ಯ ದುರ್ಗಿಗುಡಿ ನಿವಾಸಿ ಡಾ.ಬಿ.ಕೆ. ವೆಂಕಟೇಶಯ್ಯ(84) ಇಂದು ವಿಧವಶರಾಗಿದ್ದಾರೆ.
ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ಯೂತ್ ಹಾಸ್ಟೆಲ್ ಸದಸ್ಯರಾಗಿದ್ದ ಅವರು, ದುರ್ಗಿಗುಡಿಯಲ್ಲಿ ಬಾಪೂಜಿ ಚೆಸ್ಟ್ ಎಕ್ಷರೆ ಅಸ್ಪತ್ರೆ ನಡೆಸುತ್ತಿದ್ದರು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಹಳ ಜನ ಇವರ ಬಳಿ ಚಿಕಿತ್ಸೆಗೆ ಬರುತ್ತಿದ್ದರು. ಹಣಕ್ಕಾಗಿ ಎಂದೂ ಯಾರಿಗೂ ಪೀಡಿಸಿದವರಲ್ಲ. ಇವರು ಹೆಂಡತಿ, ಮಗಳು, ಮಗ, ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಪದಾಧಿಕಾರಿಗಳು ಹಾಗೂ ಕ್ರಾಂತಿದೀಪ ಮಂಜುನಾಥ್, ಬಾ.ರಾ.ಮಧುಸೂದನ್, ಎಂ. ಶಂಕರ್, ಮಾಧವಚಾರ್, ನಾಗರಾಜ್, ವಿಜಯಕುಮಾರ್ ವಾಗೀಶ್, ಅ.ನಾ. ವಿಜಯೇಂದ್ರ ರಾವ್, ಭಗವಂತನಲ್ಲಿ ಪ್ರಾರ್ಥಿಸಿ ಸಂತಾಪ ಸೂಚಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post