ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಜಿಲ್ಲಾ ಡಿಸಿಬಿಐ ಹಾಗೂ ಶಿಕಾರಿಪುರ ಗ್ರಾಮಾಂತರ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ಸುಮಾರು 70 ಸಾವಿರ ರೂ. ಮೌಲ್ಯದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿಗೆಹಳ್ಳ ಗ್ರಾಮದ ವಾಸಿಗಳಾದ ಸ್ವಾಮಿರಾವ್ ಮತ್ತು ನಾಗರಾಜ್ ಎನ್ನುವವರು ತಮ್ಮ ಜಮೀನಿನಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ.
ಪಕ್ಷ ಮಾಸ: ಪಿತೃ ಶ್ರಾದ್ಧಾ ಮಾಡಲು ಶಕ್ತಿಯಿಲ್ಲದವರು ಏನು ಮಾಡಬಹುದು? ಅಮಾವಾಸ್ಯೆಯಂದು ಪಿಂಡದಾನದ ವೈಜ್ಞಾನಿಕ ಹಿನ್ನೆಲೆಯೇನು?
ಜ್ಯೋತಿಷ್ಯ ಹಾಗೂ ಆಧ್ಯಾತ್ಮ ಕುರಿತಾಗಿನ ಎಲ್ಲ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಈ ವೇಳೆ ಒಟ್ಟು 27 ಕೆ.ಜಿ. 500 ಗ್ರಾಂ ತೂಕದ ಅಂದಾಜು ಮೌಲ್ಯ 70,000 ರೂ. ಮೌಲ್ಯದ ಹಸಿ ಗಾಂಜಾ ಗಿಡಗಳು ಪಡಿಸಿಕೊಂಡು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 02 ಪ್ರಕರಣಗಳನ್ನು ದಾಖಲಿಸಿದೆ.
ಶಿಕಾರಿಪುರ ಪಿಎಸ್’ಐ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಜಿಲ್ಲಾ ಡಿಸಿಬಿಐ ಪೊಲೀಸ್ ನಿರೀಕ್ಷಕ ಕುಮಾರಸ್ವಾಮಿ, ಶಿಕಾರಿಪುರ ಗ್ರಾಮಾಂತರ ಪಿಎಸ್’ಐ ರವಿಕುಮಾರ್ ನೇತೃತ್ವದ ಜಂಟಿ ತಂಡ ಕಾರ್ಯಾಚರಣೆ ನಡೆಸಿದೆ.
Get In Touch With Us info@kalpa.news Whatsapp: 9481252093
Discussion about this post