ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್’ಎಸ್’ಎಲ್’ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂನ್ 14ರಿಂದ 25ರವರೆಗೂ ನಡೆಯಲಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದ ಮಾಹಿತಿ ಪ್ರಕಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್19 ಮಾರ್ಗಸೂಚಿ ಅನ್ವಯ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಜೂನ್ 14ರಂದು ಪ್ರಥಮ ಭಾಷೆ, ಜೂನ್ 16ರಂದು ಗಣಿತ-ಸಮಾಜ ಶಾಸ್ತ್ರ, ಜೂನ್ 18ರಂದು ದ್ವಿತೀಯ ಭಾಷೆ, ಜೂನ್ 21ರಂದು ವಿಜ್ಞಾನ, ಜೂನ್ 23ರಂದು ತೃತೀಯ ಭಾಷೆ, ಜೂನ್ 25ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದರು.
ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಯಾವುದೇ ವಿದ್ಯಾರ್ಥಿ ಅಥವಾ ಪೋಷಕರಿಗೆ ಆಕ್ಷೇಪಣೆಗಳಿದ್ದರೆ 15 ದಿನದ ಒಳಗಾಗಿ ಅಹವಾಲು ಸಲ್ಲಿಸಬಹುದು ಎಂದರು.
ಇನ್ನು, 6 ರಿಂದ 8ನೆಯ ತರಗತಿಗಳಿಗೆ ವಿದ್ಯಾಗಮವನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post