ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದಲ್ಲಿ ಅನ್ ಲಾಕ್ 2.0 ಜಾರಿಗೆ ಬಂದಿದ್ದು, ಇದರಂತೆ ಸೋಮವಾರದಿಂದ ಕೆಎಸ್’ಆರ್’ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆ.
ಈ ಕುರಿತಂತೆ ಮಹತ್ವದ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಾಸಿಟಿವಿಟಿ ದರ ಶೇ.5ಕ್ಕಿರಂತಲೂ ಕಡಿಮೆಯಿರುವ ರಾಜ್ಯದ 16 ಜಿಲ್ಲೆಗಳನ್ನು ಬಹುತೇಕ ಅನ್ ಲಾಕ್ ಮಾಡಲಾಗಿದ್ದು, ಕೆಲವೊಂದು ಷರತ್ತು ಹಾಗೂ ನಿಯಮಾವಳಿಗಳ ಪಾಲನೆ ಕಡ್ಡಾಯವಾಗಿದೆ ಎಂದಿದ್ದಾರೆ.

ಶೇ.10ಕ್ಕಿಂತ ಹೆಚ್ಚಿರುವಂತ ಮೈಸೂರು ಜಿಲ್ಲೆಯಲ್ಲಿ ಈಗ ಇರುವಂತ ನಿಬಂಧನೆಗಳು ಯಥಾಸ್ಥಿತಿ ಮುಂದುವರೆಯಲಿದೆ. ರಾಜ್ಯಾಧ್ಯಂತ ನೈಟ್ ಕರ್ಪ್ಯೂ, ವಾರಾಂತ್ಯ ಕರ್ಪ್ಯೂ ಹಾಗೆಯೇ ಮುಂದುವರೆಯಲಿದೆ. ಬಸ್ ಸಂಚಾರ ಶೇ.50ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ, ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇಡೀ ರಾಜ್ಯದಲ್ಲಿ ನಿರ್ಬಂಧಿಸಿರುವಂತ ಚಟುವಟಿಕೆಗಳು, ಈಜುಕೊಳ, ಸಭೆ ಸಮಾರಂಭ, ಪೂಜಾ ಸ್ಥಳ, ಶಾಫಿಂಗ್ ಮಾಲ್, ಅಮ್ಯೂಸ್ ಮೆಂಟ್ ಪಾರ್ಕ್, ಪಬ್ ಗಳಿಗೆ ನಿರ್ಬಂಧಿಸಲಾಗಿದೆ. ಈ ಆದೇಶವು ಜುಲೈ.5ರವರೆಗೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೆ ವಾರಾಂತ್ಯ ಹಾಗೂ ನೈಟ್ ಕರ್ಪ್ಯೂ ಮುಂದುವರೆಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
16 ಜಿಲ್ಲೆಗಳಲ್ಲಿ ಏನಿರುತ್ತೆ? ಏನಿರಲ್ಲ?
- ಸೋಮವಾರದಿಂದ ಕೆಎಸ್’ಆರ್’ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭ: ಆದರೆ, ಶೇ. 50ರಷ್ಟು ಪ್ರಯಾಣಿಕರು ಮಾತ್ರ ಸಂಚಾರ
- ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫೂ
- ಮೆಟ್ರೋ ರೈಲು ಸಂಚಾರ
- ಶೇ.40 ರಷ್ಟು ಲಾಕ್ ಡೌನ್ ಮುಂದುವರಿಕೆ.
- ಹೋಟೆಲ್?ಗಳಲ್ಲಿ ಶೇ. 50ರಷ್ಟು ಗ್ರಾಹಕರಿಗೆ ಅವಕಾಶ(ಎಸಿ ಬಳಸುವ ಹಾಗಿಲ್ಲ)
- ಬಾರ್ ಅಂಡ್ ರೆಸ್ಟೋರೆಂಟ್(ಬಾರ್’ಗಳಲ್ಲಿ ಮದ್ಯಪಾನಕ್ಕೆ ಅವಕಾಶವಿಲ್ಲ)
- ದಿನಸಿ ಅಂಗಡಿ-ಮುಂಗಟ್ಟುಗಳು ಸಂಜೆ 5 ಗಂಟೆಯವರೆಗೆ ತೆರೆಯಲು ಅವಕಾಶ
- ದೇವಸ್ಥಾನಗಳನ್ನು ತೆರೆಯುವಂತಿಲ್ಲ
- ಸಾರ್ವಜನಿಕವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ
- ಶಾಪಿಂಗ್ ಮಾಲ್ ಓಪನ್ ಆಗಲ್ಲ
- ಸರ್ಕಾರಿ, ಖಾಸಗಿ ಕಚೇರಿಗಳು ಶೇ.50ರಷ್ಟು ಅವಕಾಶ
- ಜಿಮ್ ಓಪನ್ ಮಾಡಬಹುದು(ಶೇ. 50ರಷ್ಟು)
- ಸ್ವಿಮ್ಮಿಂಗ್ ಪೂಲ್, ಚಿತ್ರಮಂದಿರ ಓಪನ್ ಆಗಲ್ಲ
- ಹೊರಾಂಗಣ ಕ್ರೀಡೆಗೆ ಅವಕಾಶ, ಆದರೆ ವೀಕ್ಷಕರ ಪ್ರವೇಶ ನಿರ್ಬಂಧ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post