ಲೂಧಿಯಾನಾ: ಸಾಮಾನ್ಯವಾಗಿ ವಯಸ್ಸಾಗಿರುವ ವ್ಯಕ್ತಿಗಳಿಗೆ ಮಹತ್ವದ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಹಿಂದೇಟು ಹಾಕುತ್ತಾರೆ. ಆದರೆ, ಪಂಜಾಬ್’ನಲ್ಲಿ 118 ವರ್ಷದ ವೃದ್ಧೆಗೆ ಪೇಸ್ ಮೇಕರ್ ಅಳವಡಿಕೆ ಮಾಡುವ ಮೂಲಕ ಅಲ್ಲಿನ ವೈದ್ಯರು ದಾಖಲೆ ಬರೆದಿದ್ದಾರೆ.
ಪಂಜಾಬ್’ನ ಲೂಧಿಯಾನಾದ ಆಸ್ಪತ್ರೆಯಲ್ಲಿ ಕಾರ್ತಾರ್ ಕೌರ್ ಸಂಘ ಎಂಬ 118 ವರ್ಷದ ವೃದ್ಧೆಗೆ ಫೇಸ್ ಮೇಕರ್’ನ್ನು ಯಶಸ್ವಿಯಾಗಿ ಅಳವಡಿಕೆ ಮಾಡುವ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ವೈದ್ಯ, ರವೀಂದ್ರ ಸಿಂಗ್, ನಾನು 1903ರಲ್ಲಿ ಜನಿಸಿದ್ದ ಕಾರ್ತಾರ್ ಅವರ ಸಹೋದರ ಅವರನ್ನು ನೋಡಿದ್ದೇನೆ. ಅಲ್ಲದೇ, ಆಕೆ ಪುತ್ರಿಗೆ 90 ವರ್ಷವಾಗಿದ್ದು, 23 ದಾಖಲೆಗಳನ್ನು ನಿರ್ಮಿಸಿದ್ದಾರೆ ಎಂದಿದ್ದಾರೆ.
118 ವರ್ಷದ ಕಾರ್ತಾರ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವುದು ನಮಗೆ ಸವಾಲಿನ ಕಾರ್ಯವಾಗಿತ್ತು. ಆದರೆ, ಅವರ ದೇಹ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಅವರ ಮಾನಸಿಕ ದೃಢತೆಯೂ ಸಹ ನಮಗೆ ಸಹಕಾರಿಯಾಗಿತ್ತು. ಹೀಗಾಗಿ, ಪೇಸ್ ಮೇಕರ್ ಅಳವಡಿಕೆ ಯಶಸ್ವಿಯಾಯಿತು. ಈ ದಾಖಲೆ ಕುರಿತಾಗಿ ನಾವು ಗಿನ್ನೀಸ್ ಬುಕ್ ರೆಕಾರ್ಡ್ ಹಾಗೂ ಲಿಮ್ಕಾ ರೆಕಾರ್ಡ್’ಗೂ ಸಹ ಸೇರಿಸಲು ಕೋರಿದ್ದೇವೆ ಎಂದಿದ್ದಾರೆ.
Discussion about this post