No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Friday, October 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕರುಣಾಮೂರ್ತಿ ಯಂತ್ರಯುಗದ ಮಂತ್ರಗುರುಗಳು ನಮ್ಮ ಶ್ರೀಗುರು ರಾಯರು

kalpa News by kalpa News
August 16, 2019
in Special Articles
0
ಕರುಣಾಮೂರ್ತಿ ಯಂತ್ರಯುಗದ ಮಂತ್ರಗುರುಗಳು ನಮ್ಮ ಶ್ರೀಗುರು ರಾಯರು
Share on FacebookShare on TwitterShare on WhatsApp

ಕಲಿಯುಗ ಕಲ್ಪತರು, ಕಲ್ಪವೃಕ್ಷ, ಕಾಮಧೇನು ಎಂದೇ ಪ್ರಖ್ಯಾತರಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಮನುಕುಲದ ಏಳಿಗೆಗೆ ಮತ್ತು ಧರ್ಮಪ್ರಚಾರಕ್ಕಾಗಿ ಅವತರಿಸಿದ ದೈವಾಂಶ ಸಂಭೂತರು ಇವರ 348ನೇ ವರ್ಷದ ಆರಾಧನೆಯು ಇಂದಿನಿಂದ ಮೂರು ದಿನಗಳ ದೇಶದೆಲ್ಲೆಡೆ ಮತ್ತು ವಿದೇಶಗಳಲ್ಲಿಯೂ ಬಹಳ ವಿಜ್ರಂಭಣೆಯಿಂದ ನೆರವೇರಿಸಲಾಗುತ್ತದೆ. ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಸಂದರ್ಭದಲ್ಲಿ ಅವರ ಸ್ಮರಣಾರ್ಥವಾಗಿ ಒಂದು ಭಕ್ತಿ ಪೂರ್ವಕ ಲೇಖನ.

ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆಯ ರಾಘಪ್ಪ ಎಂಬ ನಾಣ್ಣುಡಿ ಪ್ರಚಲಿತದಲ್ಲಿರುವಂತೆ ಕಷ್ಟ ಎಂತ ಮೊರೆ ಹೋದ ಭಕ್ತರಿಗೆ ಕಷ್ಟಗಳನ್ನು ನಿವಾರಿಸಿ ಅನುಗ್ರಹಿಸುವ ದೇವರು ತಿರುಪತಿ ತಿಮ್ಮಪ್ಪನಾದರೆ, ಭಕ್ತಿಯಿಂದ ಶರಣು ಬಂದವರಿಗೆ ಇಷ್ಟಾರ್ಥಗಳನ್ನು ನೆರವೇರಿಸುವ ಕರುಣಾಮಯಿ ಗುರುಗಳು ಶ್ರೀರಾಘವೇಂದ್ರ ಗುರುಸಾರ್ವಭೌಮರು.

ಯಂತ್ರಯುಗದ ಮಂತ್ರಗುರುಗಳು ಶ್ರೀ ರಾಘವೇಂದ್ರತೀರ್ಥರು. ಕಲಿಯುಗದ ಕಲ್ಪತರು, ಕಲ್ಪವೃಕ್ಷ, ಕಾಮಧೇನು ಸ್ವರೂಪರು ಶ್ರೀಗುರುರಾಯರು. ಶ್ರೀಹರಿಯನ್ನು ಅನನ್ಯ ನಂಬಿ ಬೆಳೆದ ಚೇತನ. ಬವಣೆಯ ಬದುಕಿಗೆ ಅವರೇ ಪರಿಹಾರ. ಎಲ್ಲರ ಬದುಕಿಗೆ ಆಧಾರ. ಪರೋಪಕಾರಕ್ಕೆ ನಿಂತ ಆಕಾರ ಶ್ರೀರಾಘವೇಂದ್ರತೀರ್ಥ ಗುರುಗಳು.

ಶ್ರೀರಾಘವೇಂದ್ರತೀರ್ಥರು ದೊಡ್ಡವರು. ದೊಡ್ಡವರೆನ್ನುವುದು ಬರಿಯ ದೈಹಿಕ ಎತ್ತರವಲ್ಲ. ವಯಸ್ಸಿನ ಮೇಲೂ ಲೆಕ್ಕ ಮಾಡುವುದಲ್ಲ. ದೇಹದ ಗಾತ್ರ, ಸಂಪತ್ತಿನ ಗಳಿಕೆಯಿಂದ ಅಳತೆ ಮಾಡುವುದಲ್ಲ. ಇದು ಅವರ ಕಾರ್ಯದಿಂದ ತಿಳಿಯುವ ತೂಕ. ಇದು ಅವರ ಮನಸ್ಸು, ಬುದ್ಧಿ, ಸಂಸ್ಕೃತಿ, ಸಿದ್ಧಿಗಳಿಂದ ತಿಳಿಯುವ ಹಿರಿಮೆ, ಮಹಾಮಹಿಮೆ, ಹರಿಯ ಒಲುಮೆ.

ಮಾನವರ ಬದುಕಿನಲ್ಲಿ ಪ್ರಗತಿಯೊಡನೆ ಪರಿವರ್ತನೆ ತರುತ್ತಿರುವದು ಅವರ ಕಾರ್ಯ. ಎಲ್ಲರ ವೃತ್ತಿ-ಪ್ರವೃತ್ತಿಗಳಿಗೆ ಧರ್ಮದ ದೀಕ್ಷೆ ನೀಡುತ್ತಿರುವರು. ಅವರು ಒಂದು ಮತೀಯ, ಜನಾಂಗದ ಉದ್ಧಾರಕ್ಕಾಗಿ ನಿಂತವರಲ್ಲ. ಜಗದೋದ್ಧಾರಕ್ಕಾಗಿ ಅವತರಿಸಿರುವ ಮಹಾನುಭಾವರು.

ಭೌತಿಕ ವೃದ್ಧಿ, ಅಧ್ಯಾತ್ಮಿಕ ಸಮೃದ್ಧಿಗಳಿಂದ ವ್ಯಕ್ತಿತ್ವದ ವಿಕಾಸ. ಇದು ಶ್ರೀರಾಯರಿಂದ ನಡೆಯುತ್ತಿರುವ ಕಾರ್ಯ. ನಾಗರಿಕತೆಯಲ್ಲಿ ಮೂರು ಅಂಶಗಳು, ಯಾವುವೆಂದರೆ ಜೈವಿಕ, ಭೌತಿಕ ಮಾನಸಿಕ. ಇವಕ್ಕೆಲ್ಲ ಅಧ್ಯಾತ್ಮಿಕ ಆಯಾಮ ನೀಡುತ್ತಿರುವವರು ಶ್ರೀರಾಯರು. ಧಾರ್ಮಿಕ, ಭೌತಿಕ ಬದುಕಿಗೆ ವೈದಿಕ ಸಂಸ್ಕೃತಿಯಿಂದ ಭದ್ರತೆ ಒದಗಿಸುತ್ತಿರುವವರು. ಸಮಗ್ರ ಸಮಸ್ಯೆಗಳಿಗೆ ಸ್ಪಂದಿಸುವ ಗುರುವರೇಣ್ಯರು. ಧೀಶಕ್ತಿ, ವಿದ್ವತ್ತು, ಅಧಿಕಾರ ಸಂಪತ್ತು, ಸಿದ್ಧಿ ತಪಸ್ಸುಗಳು ಅರ್ಥಹೀನ ಕ್ಷೇತ್ರದಲ್ಲಿ ವ್ಯಯವಾಗಬಾರದು. ಸಮಾಜದ ಹಿತಕ್ಕೆ ವಿನಿಯೋಗವಾಗಬೇಕು. ಇದೇ ವಸುಧೈವ ಕುಟುಂಬಕಮ್ ಎಂಬ ವೇದದ ಆದೇಶ. ಗೀತೆಯ ಸಂದೇಶ. ಇದು ಶ್ರೀರಾಯರ ಉಪದೇಶ. ದೇಹದ ಸುಖಸಾಧನಗಳನ್ನು ಹೆಚ್ಚಿಸುವುದಕ್ಕಿಂತ ಆಂತರಿಕ ಸಾತ್ವಿಕತೆ ಹೆಚ್ಚಿಸುತ್ತಿರುವರು.

ಇಂದು ಜನತೆಯ ಆಶೋತ್ತರಗಳನ್ನು ಈಡೇರಿಸಿ ಅವರಲ್ಲಿ ಧಾರ್ಮಿಕ-ವಿಶ್ವಾಸ ಬೆಳೆಸುವುದರಲ್ಲಿ ಶ್ರೀಪ್ರಹ್ಲಾದ- ಬಾಹ್ಲೀಕ-ವ್ಯಾಸರಾಜಾವತಾರಿಗಳಾದ ಶ್ರೀರಾಘವೇಂದ್ರಸ್ವಾಮಿಗಳವರು ಅದ್ವಿತೀಯರಾಗಿದ್ದಾರೆ. ಈ ಮಹಾಮಹಿಮರು ವೃಂದಾವನಸ್ಥರಾದ ಮೇಲೂ ಅವರ ದಿವ್ಯ ತೇಜಸ್ಸು ಇಂದಿಗೂ ಎಲ್ಲೆಡೆಯಲ್ಲಿಯೂ ಪಸರಿಸಿದೆ. ಮತ, ಕೋಮುಗಳ ಭೇದವೆಣಿಸದೆ ಎಲ್ಲ ಸಜ್ಜನರೂ ಇವರ ಸೇವೆಗೈದು ಪುನೀತರಾಗುತ್ತಾರೆ, ಪುನೀತರಾಗುತ್ತಿದ್ದಾರೆ.

ಹಿಂದೆ ಅಸುರೀಶಕ್ತಿ, ನಾಸ್ತಿಕತನ ಮತ್ತು ಸ್ವಾರ್ಥವೇ ಮೂರ್ತಿವೆತ್ತಂತಿದ್ದ ಹಿರಣ್ಯಕಶಿಪುವಿನ ಪುತ್ರರಾಗಿ, ಕುಪಥಗಾಮಿಯಾಗಿದ್ದ ತಂದೆಗೇ ವಿರುದ್ಧವಾಗಿ, ಶ್ರೀಹರಿಯ ಮಹಿಮೆಯನ್ನು ಅವನಿಗೆ ಬೋಧಿಸಿ, ಅದರ ಪರಿಣಾಮವಾಗಿ ತಂದೆಯಿಂದ ಚಿತ್ರಹಿಂಸೆಗೆ ಗುರಿಯಾಗಿ, ನಿರ್ಮಲ ಭಕ್ತಿಯ ಪ್ರಭಾವದಿಂದ ಶ್ರೀನರಸಿಂಹದೇವರನ್ನು ಕಂಬದಿಂದ ಹೊರತರಿಸಿದ ಶ್ರೀಪ್ರಹ್ಲಾದರಾಜರ ಅವತಾರವೇ ಆರಾಧ್ಯಗುರುಗಳಾದ ಶ್ರೀರಾಘವೇಂದ್ರ ಸ್ವಾಮಿಗಳವರು.

ಅಂತೆಯೇ ಶ್ರೀರಾಯರು ಇಂಥ ಕಲಿಯುಗದಲ್ಲೂ ಇಷ್ಟು ವಿರೋಧ ಶಕ್ತಿಗಳು ತಲೆಯೆತ್ತಿ ನಿಂತು ಭಗವದ್ಭಕ್ತರು, ಆಸ್ತಿಕರು, ಸಜ್ಜನರ ಹಾದಿಗೆ ಮುಳ್ಳಾಗಿದ್ದರೂ ಶ್ರೀಭಗವನ್ಮಹಿಮೆಯನ್ನು ತಮ್ಮ ಅಗಾಧ ಮಹಿಮೆಯ ಮೂಲಕ ಜನತೆಗೆ ತೋರಿಸಿ ಭಾಗವತ ಧರ್ಮ ಪ್ರಸಾರ ಮಾಡುತ್ತಾ ಕಲಿಯುಗ, ಕಲ್ಪತರುಗಳೆನಿಸಿ ಪ್ರಖ್ಯಾತರಾಗಿದ್ದಾರೆ.
ಕರ್ನಾಟಕದ ಹಿಂದೂ ಸಾಮ್ರಾಜ್ಯ ವಿಜಯನಗರ. ಅಲ್ಲಿ ಆಸ್ಥಾನ ವಿದ್ವಾಂಸರು ಕನಕಾಚಲ ಭಟ್ಟರು. ಪ್ರಸಿದ್ಧ ವೈಣಿಕರು. ರಾಜಕೀಯ ವಿಪ್ಲವದಲ್ಲಿ ತಮಿಳುನಾಡಿಗೆ ಬಂದವರು. ಕನಕಾಚಲ ಭಟ್ಟರ ಮಗ ತಿಮ್ಮಣ್ಣಭಟ್ಟ ಮತ್ತು ಅವರ ಪತ್ನಿಯೊಂದಿಗೆ ತಂಜಾವೂರಿನಲ್ಲಿ ನೆಲೆಸಿದರು.

ತಿಮ್ಮಣ್ಣ ಭಟ್ಟ ದಂಪತಿಗಳು ಸಂತಾನಾಪೇಕ್ಷಿಯಿಂದ ತಿರುಪತಿ ತಿಮ್ಮಪ್ಪನ ಸೇವೆ ಮಾಡಿದರು. ಸೇವೆಯ ಫಲವಾಗಿ ಮನ್ಮಥನಾಮ ಸಂವತ್ಸರದ ಫಾಲ್ಗುಣ ಮಾಸದ ಶುದ್ಧ ಸಪ್ತಮಿ ಗುರುವಾರ ಮೃಗಶಿರಾ ನಕ್ಷತ್ರದಲ್ಲಿ(1601)ದಂಪತಿಗಳಿಗೆ ಎರಡನೆಯ ಪುತ್ರ ಸಂತಾನ ಪ್ರಾಪ್ತವಾಯ್ತು. ಮೊದಲನೆಯ ಮಗ ಗುರುರಾಜನಾದರೆ ಎರಡನೆಯ ಮಗನಿಗೆ ವೆಂಕಟನಾಥನೆಂದು ಹೆಸರಿಡುತ್ತಾರೆ.

ತಂದೆ ತಿಮ್ಮಣ್ಣಭಟ್ಟರು ಶ್ರೀಹರಿಪಾದವನ್ನು ಸೇರಿದ ನಂತರ ವೆಂಕಟನಾಥ ಅಣ್ಣ ಗುರುರಾಜನ ಮಾರ್ಗದರ್ಶನದಲ್ಲಿ ಮಧುರೆಯಲ್ಲಿದ್ದ ಅವರ ಅಕ್ಕನ ಗಂಡ(ಭಾವ)ನವರಾದ ಶ್ರೀಲಕ್ಷ್ಮೀನರಸಿಂಹಾಚಾರ್ಯರ ಬಳಿಯಲ್ಲಿ ಹದಿನೆಂಟು ವರ್ಷಗಳ ಕಾಲ ವೇದಗಳು, ತರ್ಕವೇದಾಂತ ವ್ಯಾಕರಣ ಶಾಸ್ತ್ರಗಳನ್ನು ಕಲಿತು ಮಹಾಪಂಡಿತನೆನಿಸಿದನು.

ಸುಧಾವಾ ಪಠನೀಯಾ-ವಸುಧಾವಾ ಪಾಲನೀಯಾ ಎಂಬ ಗಾದೆಗೆ ಸರಿಯಾಗಿ ವೆಂಕಟನಾಥನಿಗೆ ಸುಧಾ ಪಾಠವಾಗುವುದೊಂದು ಬಾಕಿ ಉಳಿದಿತ್ತು. ಆ ನಂತರ ಭುವನಗಿರಿಗೆ ಬಂದು ಅಣ್ಣ ಗುರುರಾಜನಿಂದ ವೀಣೆನುಡಿಸುವುದನ್ನು ಕಲಿತರು. ದಿನದಿನಕ್ಕೆ ಸುಧಾ ಪಾಠ ವ್ಯಾಸಂಗ ಮಾಡುವ ಬಯಕೆ ಹೆಚ್ಚಾಯಿತು.
ಅಣ್ಣ ಗುರುರಾಜನ ಅನುಮತಿಯನ್ನು ಪಡೆದು ಶ್ರೀ ಸುಧೀಂದ್ರ ತೀರ್ಥಗುರುಗಳಲ್ಲಿ ಸುಧಾಪಾಠ ಮತ್ತು ವೇದಾಧ್ಯಯನಕ್ಕಾಗಿ ಕುಂಭಕೋಣಂಗೆ ಬರುತ್ತಾರೆ.

ಶ್ರೀ ಸುಧೀಂದ್ರತೀರ್ಥರು ವೆಂಕಟನಾಥನನ್ನು ಮೂರು ವರ್ಷದ ಬಾಲಕನಾಗಿದ್ದಾಗ ಅವನ ತಂದೆಯೊಡನೆ ಶ್ರೀಸುರೇಂದ್ರತೀರ್ಥರ ಮಹಾಸಮಾರಾಧನೆಗೆ ಬಂದಿದ್ದಾಗ ನೋಡಿದ್ದರು. ಆಗಲೇ ಗುರುಗಳಿಗೆ ವೆಂಕಟನಾಥನ ವಿಚಾರದಲ್ಲಿ ವಿಶೇಷ ಪ್ರೀತಿ ಮತ್ತು ಪರಮಾಧರವಿತ್ತು.

ಈಗ ಸ್ವತಃ ವೆಂಕಟನಾಥನೇ ತಮ್ಮಲ್ಲಿ ಸುಧಾ ವ್ಯಾಸಂಗಕ್ಕೆ ಬಂದಿದ್ದಾನೆಂದು ತಿಳಿದು ಬಹಳ ಸಂತೋಷ ಪಡುತ್ತಾರೆ. ದಿನವೂ ಶ್ರೀಸುಧೀಂದ್ರ ತೀರ್ಥಗುರುಗಳಿಂದ ಗುರುಕುಲದಲ್ಲಿದ್ದ ಇತರೆ ವಿದ್ಯಾರ್ಥಿಗಳ ಜೊತೆಯಲ್ಲಿ ವೆಂಕಟನಾಥನಿಗೆ ಸುಧಾ ಪಾಠವಾಗುತ್ತಿತ್ತು.

ವೆಂಕಟನಾಥನು ತಾನಾಯಿತು ತನ್ನ ಪಾಠ ಪ್ರವಚನ ಅಭ್ಯಾಸದಲ್ಲಿ ನಿರತನಾಗಿದ್ದ. ತಾನು ವ್ಯಾಸಂಗ ಮಾಡಿದ ಸುಧಾಗ್ರಂಥದ ಪ್ರಮೇಯದ ಅಂಶಗಳನ್ನು ಪುಷ್ಟೀಕರಿಸಿ ಪರಿಮಳ ಎಂಬ ಹೆಸರಿನಿಂದ ಗ್ರಂಥವಾಗಿ ಬರೆದಿಡುತ್ತಿದ್ದನು.

ಮುಂದೆ ನಡೆದ ಸುಧಾಪಾಠದ ಮಂಗಳ ಕಾಲದಲ್ಲಿ ಶ್ರೀಸುಧೀಂದ್ರತೀರ್ಥಶ್ರೀಪಾದಂಗಳವರು ವಿದ್ವತ್ಸಭೆ ನಡೆಸಿ- ಪರಿಮಳ ಗ್ರಂಥವನ್ನು ಸಭೆಯಲ್ಲಿ ತೋರಿಸಿ ಅದರ ಮಹತ್ವವನ್ನು ಪ್ರಶಂಸೆ ಮಾಡಿ ಸರ್ವಸಮ್ಮತಿಯಿಂದ ವೆಂಕಟನಾಥನಿಗೆ ಪರಿಮಳಾಚಾರ್ಯ ಎಂಬ ಬಿರುದನ್ನು ಅನುಗ್ರಹಿಸುತ್ತಾರೆ.

ಇದಾದ ಕೆಲವು ದಿನಗಳ ಮೇಲೆ ಶ್ರೀಸುಧೀಂದ್ರತೀರ್ಥರು ದಿಗ್ವಿಜಯಾರ್ಥವಾಗಿ ಮನ್ನಾರಗುಡಿಗೆ ಬಂದರು. ಅಲ್ಲಿನ ಅನೇಕ ಜನರು ಗುರು ಸೇವೆಯಿಂದ ಕೃತಾರ್ಥರಾಗಿ ಶಿಷ್ಯರಾದರು. ಆ ಊರಿನಲ್ಲಿ ಬಹು ಕಾಲದಿಂದ ವಾಸ ಮಾಡಿಕೊಂಡಿದ್ದ ಸನ್ಯಾಸಿಗಳೊಬ್ಬರು ಶ್ರೀಸುಧೀಂದ್ರತೀರ್ಥರೊಡನೆ ವ್ಯಾಕರಣ ಮಹಾಭಾಷ್ಯದಲ್ಲಿ ವಾಕ್ಯಾರ್ಥ ಮಾಡಬೇಕೆಂದು ಬಂದರು. ವಾಕ್ಯಾರ್ಥದಲ್ಲಿ ವೆಂಕಟನಾಥನೇ ಪ್ರವೇಶಿಸಿ- ಉತ್ತರ ಪಕ್ಷ ಸಿದ್ಧಾಂತ ಮಾಡಿದುದರಿಂದ ಶ್ರೀಸುಧೀಂದ್ರತೀರ್ಥ ಗುರುಗಳು ಸುಪ್ರೀತರಾಗಿ ವೆಂಕಟನಾಥನಿಗೆ ಮಹಾ ಭಾಷ್ಯಾಚಾರ್ಯ ಎಂಬ ಬಿರುದನ್ನು ದಯಪಾಲಿಸಿದರು.

ವಿವಾಹ ಯೋಗ್ಯ ವಯಸ್ಸಿಗೆ ಸರಿಯಾಗಿ ವೆಂಕಟನಾಥನಿಗೆ ಸರಸ್ವತಿ ಎಂಬ ಅನುರೂಪಳಾದ ಕನ್ಯೆಯೊಡನೆ ವಿವಾಹವಾಯ್ತು. ಕಾವೇರೀ ಪಟ್ಟಣದಲ್ಲಿ ಇವರ ಸಂಸಾರ ಆರಂಭವಾಯ್ತು. ಇವರ ಸುಖೀ ದಾಂಪತ್ಯದಲ್ಲಿ ಲಕ್ಷ್ಮೀನಾರಾಯಣ ಎಂಬ ಮಗ ಹುಟ್ಟಿದ. ಮುಂದೆ ಶ್ರೀಸುಧೀಂದ್ರತೀರ್ಥರ ಅಪ್ಪಣೆಯಂತೆ ಸಂಸ್ಕೃತ ವಿದ್ಯಾಪೀಠವನ್ನು ಪ್ರಾರಂಭಿಸಿದರು. ಊರಿನ ಅನೇಕ ಲೌಕಿಕ ವೈದಿಕರು ತಮ್ಮ ಮಕ್ಕಳನ್ನು ಇವರ ವಿದ್ಯಾಪೀಠಕ್ಕೆ ಸೇರಿಸಿದರು. ವಿದ್ಯಾರ್ಥಿಗಳು ಅಪಾರ ಪ್ರಗತಿ ಸಾಧಿಸಿ ಉತ್ಸಾಹದಿಂದ ವ್ಯಾಸಂಗ ಮಾಡುತ್ತಿದ್ದುದರಿಂದ ವಿದ್ಯಾಪೀಠದ ಕೀರ್ತಿ ಹರಡತೊಡಗಿತು.

ವೆಂಕಟನಾಥರ ಪಾಂಡಿತ್ಯ, ಪಾಠ ಪ್ರವಚನ ವೈಖರಿ, ವಿದ್ಯಾರ್ಥಿಗಳಲ್ಲಿ ಮಾಡುತ್ತಿದ್ದ ಪ್ರೇಮಾದರಗಳಿಂದ ಇವರ ಕೀರ್ತಿ ವಿಖ್ಯಾತವಾಯಿತು. ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇ ವಸತಿ-ಭೋಜನದ ವ್ಯವಸ್ಥೆಯನ್ನೂ ಮಾಡಿದರು. ಎಲ್ಲವೂ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿರುವಾಗ ವೆಂಕಟನಾಥರಿಗೆ ಅಲಕ್ಷ್ಮೀ(ದಾರಿದ್ರ್ಯದೇವತೆ)ಯು ಇವರ ಮೇಲೆ ತನ್ನ ದಟ್ಟಛಾಯೆಯನ್ನು ಹರಡಿ ಭೀಕರ ದಾರಿದ್ರ್ಯವನ್ನು, ಕಡುಬಡತನವನ್ನು ಅನುಭವಿಸಬೇಕಾದ ಸಂದರ್ಭ ಬರುತ್ತದೆ.

ವೆಂಕಟನಾಥರು ಕಡುಬಡತನವನ್ನ ಅಭವಿಸಿದ್ದಕ್ಕೆ ಕಾರಣವೆಂದರೆ ಅವರ ಹಿಂದಿನ ಜನ್ಮಗಳಲ್ಲಿ ಪ್ರಾರಬ್ಧಕರ್ಮವನ್ನು ಅನುಭವಿಸಲಾಗಿರುವುದಿಲ್ಲ. ಇದು ಅಲಕ್ಷ್ಮಿ ವೆಂಕಟನಾಥರಿಗೆ ಕನಸ್ಸಿನಲ್ಲಿ ತಿಳಿಸಿದ ಹಾಗೆ ನಿನ್ನ ಹಿಂದಿನ ಜನ್ಮಗಳಲ್ಲಿ ಪರಮಾತ್ಮನ ಕ್ರುಪೆಯಿಂದ ರಾಜ ವೈಭವದಿಂದ ಮೆರೆದೆ. ಆಗ ನಾನು ನಿನ್ನತ್ತ ಸುಳಿಯಲೂ ಸಮರ್ಥಳಾಗಿಲ್ಲ. ಇನ್ನು ಕೆಲಕಾಲವಾದರೆ, ಮತ್ತೆ ನೀನು ವೈಭವದಿಂದ ಜೀವಿಸುವೆ. ಆಗಲೂ ನಿನ್ನ ಬಳಿ ಬರಲು ಸಾಧ್ಯವಾಗುವುದಿಲ್ಲ. ಎಲ್ಲರೂ ಪ್ರಾರಬ್ಧ ಕರ್ಮವನ್ನು ಅನುಭವಿಸಲೇ ಬೇಕು. ಮತ್ತು ಯಾವಾಗ ತಮ್ಮನ್ನು ಬಿಟ್ಟು ಹೋಗುವೆ ಎಂದು ವೆಂಕಟನಾಥರು ಕೇಳಿದಾಗ ಅಲಕ್ಷ್ಮಿಯುಎಂದು ನಿನ್ನ ಪತ್ನಿಯು ನಿನ್ನನ್ನು ಗುರುಸನ್ನಿಧಿಗೆ ಹೊರಡಲು ಪ್ರೇರಿಸುವಳೋ, ಆ ಮರು ಕ್ಷಣವೇ ನಿನ್ನನ್ನು ಬಿಟ್ಟು ಹೋಗುವೆನು ಎಂದು ತಿಳಿಸುತ್ತಾಳೆ.

ಸರಸ್ವತಿ ದೇವಿಗೆ ಒಂದು ದಿನ ಕನಸಿನಲ್ಲಿ ಶ್ರೀವಿಜಯೀಂದ್ರತೀರ್ಥರು ಮಗಳೇ ನಿಮ್ಮ ಕಷ್ಟವೆಲ್ಲಾ ಪರಿಹಾರವಾಗುವ ಕಾಲ ಬಂದಿದೆ, ಯೋಚಿಸಬೇಡ. ನಿನ್ನ ಗಂಡನನ್ನು ನಮ್ಮ ಪ್ರಿಯ ಶಿಷ್ಯ ಶ್ರೀಸುಧೀಂದ್ರರ ಸನ್ನಿಧಿಗೆ ಸಂಪ್ರದಾಯ, ಪಾಠ-ಪ್ರವಚನಕ್ಕಾಗಿ ಕರೆದುಕೊಂಡು ಹೋಗಮ್ಮ! ನಿಮಗೆ ಮಂಗಳವಾಗಲಿ ಎಂದು ಹೇಳಿ ಅದೃಶ್ಯರಾದರು.

ಕನಸಿನಲ್ಲಿ ಕಂಡ ವಿಷಯವನ್ನು ಸರಸ್ವತಿ ತನ್ನ ಯಜಮಾನರಿಗೆ ತಿಳಿಸಿಸ್ವಾಮಿ, ಶ್ರೀವಿಜಯೀಂದ್ರತೀರ್ಥ ಗುರುಗಳ ಅಪ್ಪಣೆಯಂತೆ ಶ್ರೀಸುಧೀಂದ್ರಗುರುಗಳ ಬಳಿಗೆ ಹೋದರೆ ಎಲ್ಲವೂ ಶುಭವಾಗುವುದೆಂದು ನನ್ನ ನಂಬಿಕೆ, ಕುಂಭಕೋಣಕ್ಕೆ ಹೋಗಿಬರೋಣ ಎಂತ ವೆಂಕಟನಾಥರಿಗೆ ತಿಳಿಸುತ್ತಾಳೆ.

ವೆಂಕಟನಾಥರಿಗೆ ಅಲಕ್ಷ್ಮಿಯು ತಿಳಿಸಿದ ಹಾಗೆ ತಮ್ಮನ್ನು ಅಲಕ್ಷ್ಮಿಯು ಬಿಟ್ಟುಹೋಗುವ ಅಮೃತಗಳಿಗೆ ಬಂದಿದೆ. ಸರಸ್ವತಿ ಸರಿಯಾದ ಸಲಹೆಯನ್ನೇ ನೀಡಿದ್ದೀಯೆ! ಇಂದಿಗೆ ನಮ್ಮ ಕಷ್ಟ ಪರಿಹಾರವಾಯಿತೆಂದು ತಿಳಿ, ಬೇಗನೇ ಕುಂಭಕೋಣಕ್ಕೆ ಹೊರಡೋಣ. ಶ್ರೀಸುಧೀಂದ್ರಗುರುಗಳ ದರ್ಶನ ಮಾಡೋಣ ಎಂತ ಸರಸ್ವತಿಗೆ ತಿಳಿಸುತ್ತಾರೆ.
ಸರಸ್ವತಿಯ ಶ್ರೀಗುರುಗಳ ದರ್ಶನಕ್ಕೆ ಹೋಗಿಬರೋಣ ಎಂತ ಮನದಾಳದಿಂದ ಮಾತು ಬಂದಕೂಡಲೇ ಅಲಕ್ಷ್ಮಿಯು ಇವರ ಮನೆಯನ್ನು ಬಿಟ್ಟು ಹೋದ ಶುಭ ಸೂಚನೆಗಳ ಅನುಭವ ದಂಪತಿಗಳಿಗಾಯ್ತು.

ವೆಂಕಟನಾಥ ದಂಪತಿಗಳ ಆಗಮನದಿಂದ ಶ್ರೀಸುಧೀಂದ್ರ ತೀರ್ಥಗುರುಗಳಿಗೆ ಮಹದಾನಂದವಾಯಿತು. ಶ್ರೀಗುರುಗಳು ವೆಂಕಟನಾಥರ ಸಂಸಾರ ನಿರ್ವಹಣೆಗೆ ಬೇಕಾದ ಸಕಲ ಸೌಲಭ್ಯಗಳನ್ನೂ ಏರ್ಪಡಿಸಿಕೊಟ್ಟರು. ವೆಂಕಟನಾಥರು ಕುಂಭಕೋಣಂನಲ್ಲಿ ಶ್ರೀಸುಧೀಂದ್ರ ಗುರುಗಳ ಆಶ್ರಯದಲ್ಲಿರುತ್ತಾ ವಿವಿಧ ಶಾಸ್ತ್ರಗಳ ಉದ್ಗ್ರಂಥಗಳನ್ನು ಅಧ್ಯಯನ ಮಾಡುತ್ತಾ ಶ್ರೀಗಳವರ ಮೆಚ್ಚುಗೆಗೆ ಪಾತ್ರರಾದರು.

ಶ್ರೀಸುಧೀಂದ್ರತೀರ್ಥಗುರುಗಳು ಇವರನ್ನೇ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡರು. ದುರ್ಮತಿ ನಾಮ ಸಂವತ್ಸರದ ಫಾಲ್ಗುಣ ಶುದ್ಧ ದ್ವಿತೀಯಾದಂದು ಸನ್ಯಾಸ ದೀಕ್ಷೆ ನೀಡಿ ಶ್ರೀರಾಘವೇಂದ್ರತೀರ್ಥರೆಂದು ನಾಮಕರಣ ಮಾಡಿ ತಮ್ಮ ಉತ್ತರಾಧಿಕಾರಿಗಳಾಗಿ ಪಟ್ಟಾಭಿಷೇಕ ಮಾಡಿದರು.

ತಂಜಾವೂರು ಪ್ರಾಂತದಲ್ಲಿ ಭೀಕರ ಬರಗಾಲ ಬಂದಿತ್ತು. ಧಾನ್ಯದಲ್ಲಿ ಬೀಜಾಕ್ಷರ ಬರೆದು, ಅಕ್ಷಯ ಮಾಡಿ ಎಲ್ಲರಿಗೂ ಅನ್ನದಾನ ಮಾಡಿದರು. ಆದವಾನಿಯ ನವಾಬ ಸಿದ್ಧಿ ಮಸೂದಖಾನನ ಗೌರವಕ್ಕೆ ಪಾತ್ರರಾಗಿ ಮಂತ್ರಾಲಯ ಗ್ರಾಮವನ್ನು ಕಾಣಿಕೆಯಾಗಿ ಪಡೆದರು.

ಗದುಗಿನ ಬಳಿ ಕಿರೀಟಗಿರಿಯ ದೇಸಾಯಿಗಳ ಮನೆಯಲ್ಲಿ ಪೂಜೆಯ ವೇಳೆಗೆ ಸೀಕರಣೆಯ ಡಬರಿಯಲ್ಲಿ ಬಿದ್ದು ಮೃತವಾದ ಮಗುವನ್ನು ಬದುಕಿಸಿದರು. ಕಂದನಾತಿಯ ಬಡ ವೆಂಕಣ್ಣನಿಗೆ ಅನುಗ್ರಹ ಮಾಡಿ ಆದವಾನಿಯ ದಿವಾನನ್ನಾಗಿಸಿದರು. ಶಿರಸಂಗಿಯ ದೇಸಾಯಿಗಳು ವೇದಗಳನ್ನು ಅಪ್ರಮಾಣವೆಂದಾಗ ವೇದ ಪಠಿಸಿ, ಒನಕೆ ಚಿಗುರಿಸಿ ತೋರಿಸಿದರು.

ಸಮಗ್ರ ದೇಶವನ್ನು ಸುತ್ತಾಡಿ ಮೂಲೆ ಮೂಲೆಗೂ ಸಂಚರಿಸಿದರು. ಎಲ್ಲೆಡೆಗೂ ಧರ್ಮ-ಸಂಸ್ಕೃತಿ ಪ್ರಸಾರಗೈದರು. ಸಂಕಟಕ್ಕೆ ಸಿಲುಕಿದ ಸಾವಿರಾರು ಜನರನ್ನು ಆಪತ್ತಿನಿಂದ ಪಾರುಮಾಡಿದರು. ಲೋಕದ ಜನರಿಗೆ ಅನುಗ್ರಹ ಮಾಡಿದರು. ಹರಿಪಾದ ಕಂಜನಿಷೇವಣದಿಂದ ಅವರಿಗೆ ಎಲ್ಲ ಸಿದ್ಧಿ ಸಮ್ರುದ್ಧಿ. ಆದ್ದರಿಂದ ಜಗಕ್ಕೆ ಸಕಲಪ್ರದಾತ ಆದರು.

ಶ್ರೀರಾಘವೇಂದ್ರರು ಲೋಕೋಪಕಾರಕ್ಕೆ ಮೈತಳೆದ ಕರ್ಮಯೋಗಿಗಳು. ದೈವೀ ಸಂಪತ್ತು ಅನುಭವಿಸುವುದಕ್ಕಿಂತ ಹಂಚುವುದರಿಂದಲೇ ಅದು ಹೆಚ್ಚುವುದೆಂದರು. ಅವರು ರಾಷ್ಟ್ರಸಂತ ಪ್ರಚಂಡ ಧೀಮಂತ. ಭಕ್ತರಿಗೆ ಕೇಳಿದ್ದನ್ನು ಕೊಡುವ ಹೃದಯ ಶ್ರೀಮಂತ. ಅವರ ಜೀವನವೇ ವೇದಾಂತ. ಅವರ ಹ್ರುದಯ ಬಹಳ ವಿಶಾಲ. ತತ್ವಜ್ಞಾನ ಅವರ ಬದುಕು. ಔದಾರ್ಯ ಅವರ ಸ್ವಭಾವ. ಅವರು ಬರೆದ ಗ್ರಂಥಗಳು ವಿಶ್ವದ ಶಾಶ್ವತ ಸಂಪತ್ತು.ಎಲ್ಲರಿಗೂ ದೇವರ ಜೊತೆ ಸಂಬಂಧ ಬೆಸೆಯುವ ಸೇತುವೆ.

ಇತಿಹಾಸ-ಪುರಾಣ, ಪರಂಪರೆಗೆ ಎಲ್ಲರನ್ನೂ ಸೇರಿಸುವ ಕೊಂಡಿ. ಎಲ್ಲರ ಬದುಕಿನ ಬೆನ್ನೆಲುಬು. ಇಂದಿನ ಯುಗದಲ್ಲಿಯೂ ವೇದಗಳ ಸತ್ಯತೆಯನ್ನು, ಭಕ್ತಿಯ ಬಲವನ್ನು, ಶ್ರದ್ಧೆಯ ಸಿದ್ಧಿಯನ್ನು, ತಪಸ್ಸಿನ ಶಕ್ತಿಯನ್ನು, ಜಪದ ವೃದ್ಧಿಯನ್ನು, ತತ್ವಜ್ಞಾನದ ಸಾಮರ್ಥ್ಯವನ್ನು ಮನಗಾಣಿಸುತ್ತಿರುವ ಮಹಾನುಭಾವರು. ತಾವು ನಡೆದ ದಾರಿಯಲ್ಲಿ ಎಲ್ಲರ ಹೆಜ್ಜೆಗಳನ್ನು ಮೂಡಿಸುತ್ತಿರುವರು. ಅವರಿಂದಾಗಿ ಇಂದು ಸಾತ್ವಿಕರ ಜೀವನ ನಿತ್ಯ ಹಬ್ಬ. ಭವ್ಯ ಬದುಕು. ಎಲ್ಲರ ಬದುಕಿಗೆ ನಿಶ್ಚಿತ ದಾರಿ. ನಿರ್ಧಾರಿತ ಗುರಿ. ಸಂಸ್ಕೃತಿಯ ಸಂಸ್ಕಾರ ಧರ್ಮದ ಸಿಂಚನ ನೀಡುತ್ತಿರುವರು. ಆಧುನಿಕ ನಾಗರಿಕತೆಯ ಮೇಲೆ ಸನಾತನದ ಬೆಳಕು ಬೀರುತ್ತಲಿರುವರು.

ವೇದ, ಉಪನಿಷತ್ತು, ವೇದಾಂಗ, ಬ್ರಹ್ಮಸೂತ್ರ ಭಗವದ್ಗೀತೆ, ರಾಮಾಯಣ, ಮಹಾಭಾರತ ತಾತ್ಪರ್ಯ ನಿರ್ಣಯ, ತಂತ್ರ, ಮಂತ್ರಗಳ ಬಗ್ಗೆ 50ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿ ಸರಸ್ವತಿ ಪುತ್ರರೆಂದೂ ಸಾಬೀತು ಮಾಡಿದ್ದಾರೆ. ಅವರು ನೀಡಿದ ವಾಙ್ಮಯ ಅಪಾರ. ಜಗತ್ತಿಗೆ ನಾವು ಹೊಸದನ್ನೇನಾದರೂ ಕೊಡಬೇಕೆನ್ನುವುದಕ್ಕಿಂತ ಋಷಿ-ಮುನಿ-ಜ್ಞಾನಿಗಳು ಕೊಟ್ಟದ್ದನ್ನು ಅರಗಿಸಿಕೊಳ್ಳಲು ಅನುವು ಮಾಡುವುದು ಮುಖ್ಯವೆಂದರು. ಅದಕ್ಕಾಗಿ ಟಿಪ್ಪಣಿ ಬರೆದು ಟಿಪ್ಪಣಾಚಾರ್ಯರು ಎಂದು ಹೆಸರು ಪಡೆದರು. ಶ್ರೀರಾಯರು ತೋರಿದ ಧರ್ಮ ಕೇವಲ ಅಭಿಪ್ರಾಯಗಳ ಮೇಲೆ ಅವಲಂಬಿಸದೇ ಅನುಭವಗಳ ಮೇಲೆ ಅವಲಂಬಿತವಾಗಿರಬೇಕು ಎನ್ನುವರು.

ಕಲ್ಪನೆಗಿಂತ ಸತ್ಯದ ಮೇಲೆ ಆಧಾರಿತವಾಗಿರಲಿ. ಧರ್ಮದ ನೆಲೆಯಿಂದ ದೇವರ ಬಲದಿಂದ ಶ್ರದ್ಧೆ ಸದಾಚಾರಗಳಿಂದ ಜೀವನದ ಎಲ್ಲ ಸಮಸ್ಯೆಗಳಿಗೆ ಉತ್ತರಿಸಲು ಸಾಧ್ಯವಿದೆ ಎಂದು ತಿಳಿಸಿದ, ತೋರಿಸಿದ ಮಹಾನುಭಾವರು. ಇವರಿಗೆ ಪರಲೋಕ ಸಾಧನವು ಪರಿಪರಿಪೂರ್ಣವಾಗಲು ಮೋಕ್ಷಕ್ಕೆ ನಡೆ ಎಂದ ಶ್ರೀಹರಿ. ಇಲ್ಲಿ ಧರೆಯ ಮೇಲಿದ್ದ ಜನರ ಪೊರೆಯಬೇಕೆಂದರು ರಾಯರು.

ನೈತಾನ್ ವಿಹಾಯ ಕೃಪಣಾನ್ ಇವರೆಲ್ಲರನ್ನು ಬಿಟ್ಟು ನಾನು ಬರಲಾರೆ, ಇವರನ್ನೂ ಕರೆತರುವೆನೆಂದು ಸಾವಿರಾರು ವೃಂದಾವನಗಳಲ್ಲಿ ಶ್ರೀರಾಘವೇಂದ್ರರು ನೆಲೆ ನಿಂತರೆಂದು ಗೋಪಾಲದಾಸರು ಹೇಳಿದ್ದಾರೆ. ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರಿಂದಾರಂಭಿಸಿ ನೂರಾರು ಹರಿದಾಸರು ಶ್ರೀರಾಯರನ್ನು ವರ್ಣಿಸಿದ್ದಾರೆ.

ಶ್ರೀರಾಯರು ತಮ್ಮ ಆತ್ಮ ಸಾಧನ, ಆತ್ಮಸಿದ್ಧಿಗಳಿಂದ ಆತ್ಮತ್ರುಪ್ತರಾಗಿ ಏಕಾಂಗಿಯಾಗಿ ಉಳಿಯಲಿಲ್ಲ. ತಮ್ಮ ಸಿದ್ಧಿಯನ್ನು ಲೋಕಮುಖವಾಗಿ ಹರಿಸಿದರು ಎಲ್ಲರಿಗೂ ಹರಸಿದರು. ಇಂತಹ ಭುವನ ಪಾವನ ಶುದ್ಧ ಜೀವನದ ಶ್ರೀರಾಘವೇಂದ್ರ ತೀರ್ಥರು ಎಲ್ಲೆಡೆಗೂ ನೆಲೆಸಿ ತಮ್ಮ ಕಾರ್ಯ ಮುಂದುವರೆಸಲು ಬಯಸಿದರು.

ಈ ಜಗತ್ತಿನ ನಿಯಮಗಳಿಗೆ ಕಟ್ಟುಬಿದ್ದು ಇರುವಷ್ಟು ಕಾಲ ಇದನ್ನು ಬಿಟ್ಟು ಹೋಗಲಾರದೆ, ಇಲ್ಲಿ ತನ್ನ ಅಲ್ಪತೆಯನ್ನು ತಿಳಿದು, ದೈವಕ್ಕೆ ಶರಣು ಹೋಗಿ ಸಾಧನ ಮಾಡಿಕೊಳ್ಳಬಯಸುವ ಸಜ್ಜನರಿಗೆ ಶ್ರೀರಾಘವೇಂದ್ರಸ್ವಾಮಿಗಳು ಶ್ರೇಷ್ಠ ಮಾರ್ಗದರ್ಶಿ ಗುರುಗಳೆನಿಸಿದ್ದಾರೆ! ಆ ಮಹನೀಯರು ತಮ್ಮಲ್ಲಿ ಅನನ್ಯಗತಿಕನಾಗಿ ಶರಣು ಬರುವ ಭಕ್ತನ ಪ್ರಾಪಂಚಿಕ ದುಃಖಗಳನ್ನು ನಿವಾರಿಸಿ, ಅವರ ಇಷ್ಟಾರ್ಥಗಳನ್ನು ಕಲ್ಪತರುವಿನಂತೆ ಪೂರ್ಣಮಾಡಿ, ಕ್ರಮೇಣ ಈ ಜಗತ್ತಿನ ಅಲ್ಪತೆ-ಅಪೂರ್ಣತೆ ಹಾಗೂ ಅಸ್ಥಿರತೆಗಳನ್ನು ಮನದಟ್ಟು ಮಾಡಿಕೊಟ್ಟು, ದೈವದ ಕಡೆಗೆ ಅವನ ಮನಸ್ಸಿನ ಪ್ರಾವಣ್ಯವನ್ನು ಸ್ಥಿರಗೊಳಿಸಿ ಅವನಿಂದ ತಕ್ಕ ಸಾಧನ ಮಾಡಿಸಿ ಅವನ ಗುರಿ ಮುಟ್ಟಿಸುವರು. ಇವರು ಲೋಕಗುರುಗಳಾಗಿವಂದ್ಯರಾಗಿದ್ದಾರೆ.

ಈ ಮಹಾಮಹಿಮರಿಂದ ಕಲಿಯುಗದಲ್ಲಿ ನಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯಾಗಬೇಕೆಂಬುದು ಭಗವಂತನ ಇಚ್ಛೆ! ಆದ್ದರಿಂದಲೇ ಅನೇಕ ಸ್ಥಳಗಳಲ್ಲಿ ಈ ಗುರುಗಳ ಬೃಂದಾವನಗಳು ಸ್ಥಾಪಿತವಾಗಿ ಭಕ್ತರು ಸೇವೆ ಸಲ್ಲಿಸಿ, ಕೃತಾರ್ಥರಾಗಿ ಜೀವನ ಸಾಫಲ್ಯವನ್ನು ಪಡೆಯುತ್ತಿರುವರು. ಇದು ಭಾರತದಾದ್ಯಂತ, ಅಷ್ಟೇ ಏಕೆ, ಪರದೇಶಗಳಲ್ಲೆಲ್ಲಾ ವ್ಯಾಪಿಸುತ್ತಿದೆ! ವ್ಯಾಪಿಸುವುದು ಅನಿವಾರ್ಯವೂ ಕೂಡ! ಇಂಥ ಸಮಯದಲ್ಲಿ ಪ್ರತಿಯೊಬ್ಬ ಸಜ್ಜನನೂ ಎಲ್ಲಾ ತೊಡಕುಗಳನ್ನು ಹಿಂತೆಗೆದು ಅಜೀವ ಪರ್ಯಂತ ಈ ಮಹಾಗುರುಗಳ ಪಾದಾಶ್ರಯ ಮಾಡಿ ಉದ್ಧಾರವಾಗಬೇಕು.

ತಾವೇ ಹೇಳಿ ನಿರ್ಮಾಣಗೊಳಿಸಿಕೊಂಡ ವೃಂದಾವನದಲ್ಲಿ(1671) ಶ್ರಾವಣ ಕೃಷ್ಣ ದ್ವಿತೀಯದಂದು ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದರು. ಅವರು ನಿಂತ ನೆಲ ಮಂತ್ರಾಲಯವಾಯ್ತು. ಅನುಗ್ರಹಿಸಿ ಕೊಟ್ಟ ಮಂತ್ರಾಕ್ಷತೆ ಸಿರಿ ಸಂಪತ್ತಾಯಿತು.

ಮಂತ್ರಾಲಯ ಕ್ಷೇತ್ರಕ್ಕೆ ಸರ್ವಸಮುದಾಯ ಜನಾಂಗದವರು ಬಂದು ಶ್ರೀರಾಯರ ವ್ರಂದಾವನ ದರ್ಶನ ಪಡೆಯುತ್ತಾರೆ. ಶ್ರೀರಾಘವೇಂದ್ರತೀರ್ಥರು ಸರ್ವಜನಾಂಗದವರನ್ನು ಕರುಣಿಸಿ ಅನುಗ್ರಹಿಸಿದ್ದು, ಅವರ ಜೀವನದ ವಿವಿಧ ಹಂತಗಳಲ್ಲಿ ನಡೆದ ಮಹಿಮೆಯಿಂದ ತಿಳಿದುಬರುತ್ತದೆ.

ಮಂತ್ರಾಲಯದಲ್ಲಿ ಜಾಗ ನೀಡಲು ನಿರಾಕರಿಸಿದ ಆಗಿನ ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೋಗೆ ಬೃಂದಾವನಸ್ಥರಾದ ನಂತರ ದರ್ಶನ ನೀಡಿ ಚಕಿತಗೊಳಿಸಿದ್ದು ರಾಯರ ಮಹಿಮೆಯನ್ನು ಸಾರುತ್ತದೆ. ರಾಯರು ಪವಾಡ ಪುರುಷರೆನ್ನುವುದಕ್ಕಿಂತ ಅವರ ಬೃಂದಾವನ ದರ್ಶನ ಮಾಡಿದ ಮಾತ್ರದಿಂದಲೇ ಭಕ್ತ ಜನರು ಅನುಗ್ರಹ ಪಡೆದು ಪುನೀತರಾಗುತ್ತಿದ್ದಾರೆ. ಬೃಂದಾವನದಲ್ಲಿದ್ದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿರುವ ಮಂತ್ರಾಲಯದ ರಾಘಪ್ಪ ಭಕ್ತರ ಆರಾಧ್ಯ ದೈವ.

ಕಲಿಯುಗದ ಕಾಮಧೇನು ಗುರುರಾಯರು ಬೃಂದಾವನದಲ್ಲಿಯೇ ಇದ್ದು ಸಮಸ್ತರನ್ನೂ ಸಲಹುತ್ತಾರೆ ಎಂಬ ದೃಢ ನಂಬಿಕೆ ಎಲ್ಲ ಭಕ್ತರದು. ರಾಯರ ಮಹಿಮೆಗಳು ಭರವಸೆಯನ್ನು ನಿಜವಾಗಿಸಿವೆ. ಇಂತಹ ಮಹಾನ್ ದೈವೀ ಶಕ್ತಿ ಹೊಂದಿದ ಯೋಗಿ, ಅಗಮ್ಯಮಹಿಮ ಮಂತ್ರಾಲಯದ ಶ್ರೀರಾಘವೇಂದ್ರ ಗುರುಸಾರ್ವಭೌಮರ 348 ನೆಯ ಆರಾಧನಾ ಮಹೋತ್ಸವ ಈ ವರ್ಷ ಜರುಗುತ್ತಿದೆ.

ಈ ಆರಾಧನಾ ಪರ್ವಕಾಲದಲ್ಲಿ ಭಕ್ತಿಯಿಂದ ಶ್ರೀಗುರುಸಾರ್ವಭೌಮರಿಗೆ ನಮಸ್ಕಾರಗಳನ್ನು ಅರ್ಪಿಸಿ ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಿ ಎಂತ ರಾಯರಲ್ಲಿ ಪ್ರಾರ್ಥಿಸೋಣ.

ಲೇಖನ: ಎನ್. ಜಯಭೀಮ್ ಜೋಯ್ಸ್‌

Tags: Kannada ArticleMantralayamSri Raghavendra Swamyಮಂತ್ರಾಲಯಶ್ರೀ ರಾಘವೇಂದ್ರ ಗುರುಸಾರ್ವಭೌಮರುಶ್ರೀಗುರು ರಾಯರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್’ನಲ್ಲಿ ಅದ್ದೂರಿ ಸ್ವಾತಂತ್ರೋತ್ಸವ

Next Post

ಅರುಣ್ ಜೇಟ್ಲಿ ಸ್ಥಿತಿ ಗಂಭೀರ, ಕೃತಕ ಉಸಿರಾಟದ ವ್ಯವಸ್ಥೆ: ಆಸ್ಪತ್ರೆಗೆ ರಾಷ್ಟ್ರಪತಿ ಭೇಟಿ

kalpa News

kalpa News

Next Post
Demonetisation turned India into tax-compliant society: Jaitley

ಅರುಣ್ ಜೇಟ್ಲಿ ಸ್ಥಿತಿ ಗಂಭೀರ, ಕೃತಕ ಉಸಿರಾಟದ ವ್ಯವಸ್ಥೆ: ಆಸ್ಪತ್ರೆಗೆ ರಾಷ್ಟ್ರಪತಿ ಭೇಟಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL