ಕಲ್ಪ ಮೀಡಿಯಾ ಹೌಸ್ | ಕಾರವಾರ |
ಕ್ಯಾನ್ಸರ್ ಆಪರೇಷನ್ ಯಶಸ್ಸಿನ ಬಳಿಕ ರಿಲಾಕ್ಸ್ ಮೂಡಿನಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ #Shivarajkumar ಮತ್ತೆ ಸುದ್ದಿಯಲ್ಲಿದ್ದಾರೆ.
ಸುಮಾರು 29 ವರ್ಷಗಳ ನಂತರ ಶಿವಣ್ಣ ಪತ್ನಿ ಸಹಿತ ಕುಮಟಾ #Kumta ಬಳಿಯ ಪ್ರಸಿದ್ಧ ಪ್ರವಾಸಿ ತಾಣ ಯಾಣ ಬೆಟ್ಟಕ್ಕೆ ರವಿವಾರ ಭೇಟಿ ನೀಡಿದ್ದಾರೆ.Also read: ಶಿಳ್ಳೇಕ್ಯಾತ ಸಮುದಾಯದ ವಿಕಾಸಕ್ಕೆ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿ
ಪತ್ನಿ ಗೀತಾ ಶಿವರಾಜಕುಮಾರ್ ಜೊತೆ ಅವರು ಯಾಣಕ್ಕೆ ಭೇಟಿ ನೀಡಿ, ನಮ್ಮೂರ ಮಂದಾರ ಹೂವೆ ಸಿನಿಮಾದ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ವೈದ್ಯಕೀಯ ಕಾರಣಗಳಿಗಾಗಿ ಅಮೆರಿಕಾದಲ್ಲಿದ್ದ ಶಿವರಾಜ್ ಕುಮಾರ್ ಅಲ್ಲಿಂದ ಮರಳಿದ ನಂತರ, ಉತ್ತರ ಕನ್ನಡ ಜಿಲ್ಲೆಯ ತಮ್ಮ ಇಷ್ಟದ ಜಾಗಗಳಿಗೆ ಭೇಟಿ ನೀಡುತ್ತಿದ್ದು, ಯಾಣದ ತಾಣಕ್ಕೆ ನಿನ್ನೆ ಭೇಟಿ ನೀಡಿದ್ದರು.
ಶಾಸಕ ಭೀಮಣ್ಣ ನಾಯಕ್ ಅವರ ಹತ್ತಿರದ ಸಂಬಂಧಿಯಾಗಿದ್ದು, ಶಿರಸಿಗೆ ಆಗಾಗ ಶಿವರಾಜ್ ಕುಮಾರ್ ಬರುವುದು ಸಾಮಾನ್ಯ.
ಈ ಕುರಿತಂತೆ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ, ‘ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..’ ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ ಎಂದು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post