ಕಲ್ಪ ಮೀಡಿಯಾ ಹೌಸ್ | ಕೇದಾರನಾಥ |
ಉತ್ತರಾಖಂಡದ ಕೇದಾರನಾಥ #Kedarnath ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದ್ದು, ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿದೆ. ಚಾರ್’ಧಾಮಗಳಲ್ಲಿ #Chaardham Yathra ಒಂದಾಗಿರುವ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಪರಿಣಾಮ ನೂಕುನುಗ್ಗಾಟ ಸಂಭವಿಸುತ್ತಿದೆ.
ಕೇದಾರನಾಥ ದೇಗುಲದಿಂದ 40 ಕಿಮೀ ದೂರದ ಸೀತಾಪುರದಲ್ಲಿ ಕಾಲ್ನಡಿಗೆಯಲ್ಲಿ ಬಂದ ಸಾವಿರಾರು ಭಕ್ತರು ಮಾರ್ಗಮಧ್ಯೆ ಸಿಲುಕಿದ್ದಾರೆ. ಈ ಜನದಟ್ಟಣೆಯಲ್ಲಿ ವಾಹನಗಳೂ ಸಿಲುಕಿಕೊಂಡಿವೆ.

Also read: ಐಪಿಎಲ್ 2024 | ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್
ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವುದು ಸರಿಯಾದ ಸಮಯವಲ್ಲ ಎಂದು ವರದಿಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post