ಕೊಪ್ಪಳ: ನಮಗೆ ಅವಶ್ಯಕತೆ ಇಲ್ಲದ ವಸ್ತುಗಳನ್ನು ಅವಶ್ಯವಿರುವವರಿಗೆ ನೀಡುವ ಕರುಣೆಯ ಗೋಡೆ ಆರಂಭವಾಗಿದೆ.
ನಗರದ ಸಿಂಪಿ ಲಿಂಗಣ್ಣ (ಹಸನ್) ರಸ್ತೆಯಲ್ಲಿರುವ ಯುರೋಪ್ ಟೇಲರ್ ಮತ್ತು ದಿ. ಹನುಮಂತಪ್ಪ ಅಂಗಡಿ ಅವರ ಮನೆಯ ಮಧ್ಯೆ ಇದು ಆರಂಭವಾಗಿದೆ.
ಈ ಸಾಮಾಜಿಕ ಸದುದ್ದೇಶದ ಯೋಜನೆಯಲ್ಲಿ ಪರಿಸರಕ್ಕೆ ಅನುಕೂಲವೂ ಅನುಗುಣವಾಗಿ ತಾವು ಬಳಸುವ ಸಾಮಗ್ರಿಗಳು ಬಟ್ಟೆಗಳು ಅಥವಾ ಇನ್ನಿತರ ಯಾವುದೇ ತರವಾದ ಅಂತಹ ಮತ್ತೊಬ್ಬರಿಗೆ ಅನುಕೂಲವಾಗುವಂತಹ ವಸ್ತುಗಳನ್ನು ಇಡಬಹುದು. ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.
ಈ ಅನುಕೂಲವನ್ನು ಪ್ರಪ್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ ಆಯೋಜಿಸಿದ್ದು, ಇದರಿಂದ ಬಡವರಿಗೆ ಅನುಕೂಲದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕುರಿತಂತೆ ಮಾತನಾಡಿದ ವಕೀಲ ವೆಂಕಾರೆಡ್ಡಿ, ಕೊಪ್ಪಳದ ಜನರು ತಾವು ಬಳಸುವ ಸಾಮಗ್ರಿಗಳು ಅಥವಾ ಚೆನ್ನಾಗಿ ಇರುವಂತಹ ಬಟ್ಟೆಗಳನ್ನು ಇಲ್ಲಿಗೆ ತಂದಿಡಬಹುದು ಹಾಗೂ ಕರುಣೆಯ ಗೋಡೆಯಲ್ಲಿ ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು ಎಂದರು.
ಈಗಾಗಲೇ ಬೆಂಗಳೂರು ಹಾಗೂ ಇನ್ನಿತರ ನಗರಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ. ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುವಂತಹ ಪ್ರದೇಶದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಒಂದು ಬಯಕೆಯಿಂದ ಈ ರಸ್ತೆಯಲ್ಲಿ ಇಡಲಾಗಿದೆ. ಉತ್ತಮ ಪ್ರತಿಕ್ರಿಯೆ ಬಂದಿದೆ. ಅದರಂತೆ ಸಾರ್ವಜನಿಕರಲ್ಲಿ ಮತ್ತು ಸಂಘ-ಸಂಸ್ಥೆಗಳ ಸಹಕಾರದಿಂದ ಕೊಪ್ಪಳದ ಅನೇಕ ರಸ್ತೆಗಳಲ್ಲಿ ನೀಡುವ ಬಯಕೆ ನಮ್ಮದಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಮನವಿ ಮಾಡಿದರು.
ಈ ಕುರಿತಂತೆ ಹೆಚ್ಚಿನ ಸಂಪರ್ಕಕ್ಕಾಗಿ ವಕೀಲ ವೆಂಕಾರೆಡ್ಡಿ(9448024056) ಅವರನ್ನು ಸಂಪರ್ಕಿಸಬಹುದು.
(ವರದಿ: ಮುರಳಿಧರ್ ನಾಡಿಗೇರ್)
Get In Touch With Us info@kalpa.news Whatsapp: 9481252093, 94487 22200
Discussion about this post