ಕಲ್ಪ ಮೀಡಿಯಾ ಹೌಸ್ | ಕೆಂಗೇರಿ |
ಬಂಡೇಮಠ ಕೆ.ಎಚ್.ಬಿ. ಬಡಾವಣೆಯಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಬಂದಿದ್ದ ಜೆಸಿಬಿ ಸಂಖ್ಯೆ ಕೆ.ಎ.41 ಎಂಇ 3405 ರಸ್ತೆ ಬದಿಯಲ್ಲಿ, ಸರ್ಕಾರಿ ಜಾಗದಲ್ಲಿ 10 ವರ್ಷದಿಂದ ಬೆಳೆದಿದ್ದ ಹೊಂಗೆ ಮರವನ್ನು ಮುರಿದ ಬಗ್ಗೆ ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ ಬಿಬಿಎಂಪಿ ಅರಣ್ಯವಿಭಾಗ, ಜೆಸಿಬಿ ವಶಕ್ಕೆ ಪಡೆದು, ಮಾಲೀಕರ ವಿರುದ್ಧ ಕೇಸು ದಾಖಲಿಸಿದೆ.
ಸಾರ್ವಜನಿಕರು ನೀಡಿದ ದೂರಿಗೆ ತತ್ ಕ್ಷಣವೇ ಸ್ಪಂದಿಸಿದ ಬಿಬಿಎಂಪಿ ಅರಣ್ಯವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ಅವರು, ಆರ್.ಎಫ್.ಓ. ಕೃಷ್ಣ ಅವರನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲನೆಯ ಬಳಿಕ ಜೆಸಿಬಿ ಮಾಲೀಕ ಹಾಸನ ಜಿಲ್ಲೆ, ಮಳಲಿ ಆಲೂರಿನ ಮಂಜೇಗೌಡ ವಿರುದ್ಧ ಎಫ್.ಐ.ಆರ್. ದಾಖಲಿಸಿ, ಜೆಸಿಬಿ ವಾಹನ ವಶಕ್ಕೆ ಪಡೆದಿದ್ದಾರೆ.
Also read: ಪಕ್ಷ ಎಲ್ಲ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿದೆ: ಬಸವರಾಜ ಬೊಮ್ಮಾಯಿ
ಅನುಮತಿ ಇಲ್ಲದೆ ರಸ್ತೆ ಬದಿಯ ಮರಗಳನ್ನು ಕಡಿಯುವವರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post