ಕಲ್ಪ ಮೀಡಿಯಾ ಹೌಸ್ | ತಿರುವಂತಪುರಂ |
ಕಳೆದ 10 ವರ್ಷಗಳಲ್ಲಿ ಕೇರಳದಾದ್ಯಂತ ಬೀದಿ ನಾಯಿ ಕಡಿತದಿಂದ ಒಟ್ಟು 118 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಆರ್’ಟಿಐ ಮಾಹಿತಿ ಆಧರಿಸಿದ ವರದಿಯೊಂದರ ಪ್ರಕಾರ, ಕೊಲ್ಲಂ ಜಿಲ್ಲೆಯಲ್ಲಿ ಅತಿ ಹೆಚ್ಚು 21 ಸಾವುಗಳು ಸಂಭವಿಸಿವೆ, ತಿರುವನಂತಪುರA (16) ಮತ್ತು ಪಾಲಕ್ಕಾಡ್ (13) ನಂತರದ ಸ್ಥಾನದಲ್ಲಿವೆ.
2016 ರಿಂದ ಇತರ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಇಂತಿದೆ: ಆಲಪ್ಪುಳ 12, ತ್ರಿಶೂರ್ 11, ಎರ್ನಾಕುಲಂ ಮತ್ತು ಕೋಯಿಕ್ಕೋಡ್ – ತಲಾ ಒಂಬತ್ತು, ಪತ್ತನಂತಿಟ್ಟ ಮತ್ತು ಕಣ್ಣೂರು ತಲಾ ಏಳು, ಮಲಪ್ಪುರಂ – ನಾಲ್ಕು, ಇಡುಕ್ಕಿ ಮತ್ತು ವಯನಾಡ್ – ತಲಾ ಮೂರು, ಕೊಟ್ಟಾಯಂ – ಎರಡು, ಮತ್ತು ಕಾಸರಗೋಡು ಒಂದು.
ಬಲಿಯಾದವರಲ್ಲಿ 15 ತಿಂಗಳ ಶಿಶುವಿನಿಂದ 90 ವರ್ಷದ ಮಹಿಳೆಯವರೆಗೆ ಇದ್ದಾರೆ. ಮೃತರಲ್ಲಿ 12 ಮಂದಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಒಂಬತ್ತು ಮಂದಿ 10 ರಿಂದ 20 ವರ್ಷದವರು, ಆರು ಮಂದಿ 20 ರಿಂದ 30 ವರ್ಷದವರು, 17 ಮಂದಿ 30 ರಿಂದ 40 ವರ್ಷದವರು, 24 ಮಂದಿ 40 ರಿಂದ 50 ವರ್ಷದವರು, 27 ಮಂದಿ 50 ರಿಂದ 60 ವರ್ಷದವರು, 15 ಮಂದಿ 60 ರಿಂದ 70 ವರ್ಷದವರು, ನಾಲ್ವರು 70 ರಿಂದ 80 ವರ್ಷದವರು ಮತ್ತು ಮೂವರು 80 ವರ್ಷಕ್ಕಿಂತ ಮೇಲ್ಪಟ್ಟವರು.
ಇಡುಕ್ಕಿಯ ಒಬ್ಬ ಬಲಿಪಶುವಿನ ವಯಸ್ಸನ್ನು ಅಧಿಕಾರಿಗಳು ದೃಢೀಕರಿಸಲು ಸಾಧ್ಯವಾಗಲಿಲ್ಲ.
ರೈತರ ಜಾಗೃತಿ ಪುನರುಜ್ಜೀವನ ಆಂದೋಲನದ ಪ್ರಧಾನ ಕಾರ್ಯದರ್ಶಿ ಸಿಜುಮನ್ ಫ್ರಾನ್ಸಿಸ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಪ್ರಶ್ನೆಯ ಮೂಲಕ ಈ ವಿವರಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















