ತಿರುವನಂತಪುರಂ: ಶಬರಿಮಲೆಗೆ ಸ್ತ್ರೀಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಇಂದು ದೇವಾಲಯದ ಬಾಗಿಲನ್ನು ತೆರೆಯಲಾಗಿದ್ದು, ಇದರ ಬೆನ್ನಲ್ಲೇ ವ್ಯಾಪಕ ಹಿಂಸಾಚಾರ ನಡೆದಿದ್ದು, ಪೊಲೀಸರೇ ಗಲಭೆ ಸೃಷ್ಠಿಗೆ ಕಾರಣರಾಗಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಇಂದು ಸಂಜೆ ದೇವಾಲಯದ ಬಾಗಿಲು ತೆರೆಯಲಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯದ ಸುತ್ತಲೂ ನೆರೆದು ಮಹಿಳೆಯರ ಪ್ರವೇಶಕ್ಕೆ ತಡೆಯೊಡ್ಡಿದ್ದು, ಯಾವುದೇ ವಯಸ್ಕ ಮಹಿಳೆ ದೇವಾಲಯದ ಪ್ರವೇಶಿಸಲು ಸಾಧ್ಯವಾಗಿಲ್ಲ.
Kerala: A bus, carrying journalists among other passengers, was vandalised at Laka near Nilakkal base camp by protesters this evening. Stones were pelted on the bus. #SabarimalaTemple pic.twitter.com/5JVJtRLLmQ
— ANI (@ANI) October 17, 2018
ಇದರ ಬೆನ್ನಲ್ಲೇ, ಸರ್ಕಾರಿ ಬಸ್ ಹಾಗೂ ಇತರೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಲಾಠಿ ಪ್ರಹಾರ ನಡೆಸಲಾಗಿದೆ.
#WATCH #Kerala: Police personnel vandalise vehicles parked in Pampa. Incidents of violence had broken out today in parts of the state over the entry of women of all age groups in #SabarimalaTemple. pic.twitter.com/xi3H4f5UUU
— ANI (@ANI) October 17, 2018
ಶಬರಿಮಲೆ ಸಮೀಪದ ನೀಲಕ್ಕಲ್, ಪಂಪ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಅತ್ಯಂತ ಮಹತ್ವವಾಗಿ ಗಮನಿಸಬೇಕಾದ ಅಂಶವೆಂದರೆ, ಲಾಠಿ ಪ್ರಹಾರದ ನಂತರ ಈ ಭಾಗದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳಲ್ಲಿ ಲಾಕ್ ಮಾಡಲಾಗಿದ್ದ ಹೆಲ್ಮೆಟ್‌ಗಳನ್ನು ಲಾಕ್ ಕಿತ್ತುಹಾಕಿ, ಪೊಲೀಸರು ತಾವು ಧರಿಸಿದ್ದಾರೆ. ಅದಕ್ಕೂ ಮೀರಿ, ದ್ವಿಚಕ್ರ ವಾಹನಗಳಿಗೆ ಕಾಲಿನಿಂದ ಹಾಗೂ ಲಾಠಿಯಿಂದ ಹೊಡೆದ ಧ್ವಂಸ ಮಾಡಿದ್ದಾರೆ.
ಅಲ್ಲದೇ, ಅಲ್ಲಿದ್ದ ಜನರ ಮೇಲೂ ಸಹ ಲಾಠಿ ಪ್ರಹಾರ ನಡೆಸಿದ್ದಾರೆ.
ಕೇರಳ ಪೊಲೀಸರು ದ್ವಿಚಕ್ರ ವಾಹನಗಳನ್ನು ಧ್ವಂಸ ಮಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಹಾಗೂ ಕೇರಳ ಸಿಪಿಐಎಂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಗಲಭೆ ಸೃಷ್ಠಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Discussion about this post