ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಂಗನ ಕಾಯಿಲೆ(ಕೆಎಫ್’ಡಿ)ಗೆ #KFD ತುತ್ತಾಗಿದ್ದ ಸಿದ್ದಾಪುರದ #Siddhapura ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಸಿದ್ದಾಪುರ ತಾಲೂಕಿನ ಕೊರ್ಲಕೈ ಉಪಕೇಂದ್ರದ ನಾಗಮ್ಮ(57) ಎಂದು ಗುರುತಿಸಲಾಗಿದೆ.

Also read: ಫೆ.27: ಕುವೆಂಪು ವಿವಿಯಲ್ಲಿ ಕಾನೂನು ಅರಿವು ಕಾರ್ಯಾಗಾರ: ನಿವೃತ್ತ ನ್ಯಾ. ಸಂತೋಷ್ ಹೆಗ್ಗಡೆ ಭಾಗಿ
ಜ.28ರಂದು ನಾಗಮ್ಮ ಅವರ ಮನೆಗೆ ಆಶಾ ಕಾರ್ಯಕರ್ತೆ ಭೇಟಿ ನೀಡಿದ ವೇಳೆ ಜ್ವರ ಹಾಗೂ ಕೆಮ್ಮು ಇರುವುದು ಪತ್ತೆಯಾಗಿತ್ತು. ಆಕೆಗೆ ಕಫ ಪರೀಕ್ಷೆ ನಡೆಸಿದ್ದರು. ಆನಂತರ ಸಮುದಾಯ ಆರೋಗ್ಯಾಧಿಕಾರಿಯವರು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಫೆ.1ರಂದು ಅವರಿಗೆ ಕೆಎಫ್’ಡಿ ಪಾಸಿಟಿವ್ #KFDPositive ವರದಿ ಬಂದಿತ್ತು.

ಅವರ ಆರೋಗ್ಯ ಮತ್ತಷ್ಟು ತೊಂದರೆಗೀಡಾದ ಹಿನ್ನೆಲೆಯಲ್ಲಿ ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು.
ಆನಂತರ ಮತ್ತೆ ಆಕೆಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಕೆಯ ಮನವೊಲಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಇಹಲೋಕ ತ್ಯಜಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post