ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ತೋಟದ ಮನೆಯ ಆವರಣದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್), ಬಿಎಲ್ಎ – 2 ಕಾರ್ಯಾಗಾರ’ ವನ್ನು ಜೆಡಿಎಸ್ ಪಕ್ಷ ಹಮ್ಮಿಕೊಂಡಿತ್ತು.
ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ರಾಜ್ಯ ವಕ್ತಾರರು ಹಾಗೂ ಬಿಎಲ್ಎ – 2 ಕಾರ್ಯಾಗಾರದ ಉಸ್ತುವಾರಿ ಜಿ ಪಿ ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್ ರವರ ಮುಖಂಡತ್ವದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಜೆಡಿಎಸ್ ನಾಯಕರು ಜಾಗೃತಿ ಮೂಡಿಸಿದರು.
ಇದೇ ವೇಳೆ ಪಕ್ಷದಿಂದ ಬಿಎಲ್ಎ ಗಳಾಗಿ ನೇಮಕಗೊಂಡ ಕಾರ್ಯಕರ್ತರಿಗೆ ಬ್ಯಾಡ್ಜ್ ಹಾಗೂ ಗುರುತಿನ ಚೀಟಿಯನ್ನು ವಿತರಿಸಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಸ್ಕ್ರೀನ್ ಮೂಲಕ ಮಾಹಿತಿ ಹಂಚಿಕೊಂಡರು.
ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರರು ಹಾಗೂ ಬಿಎಲ್ಎ – 2 ಕಾರ್ಯಾಗಾರದ ಉಸ್ತುವಾರಿ ಜಿ ಪಿ ಅಶ್ವಿನ್ ಕುಮಾರ್ ರವರು, ಬಂಡೆಪ್ಪ ಖಾಶೆಂಪುರ್ ರವರು ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಎಸ್ಐಆರ್ ಕಾರ್ಯಾಗಾರವನ್ನು ಅವರು ಹಮ್ಮಿಕೊಂಡಿದ್ದಾರೆ. ಇದನ್ನು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸದುಪಯೋಗ ಪಡೆದುಕೊಳ್ಳಬೇಕು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಕ್ಷರಣೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ ಎಂದರು.
ಎಸ್ಐಆರ್ ಬಗ್ಗೆ ಅಶ್ವಿನ್ ಕುಮಾರ್ ರವರು ಬಹಳಷ್ಟು ಸವಿಸ್ತಾರವಾಗಿ ಹೇಳಿದ್ದಾರೆ. ನಮ್ಮ ಪಕ್ಷದಿಂದ ಬಿಎಲ್ಎ ಅಂತ ನೇಮಕ ಆಗಿರುವವರು ಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಪ್ರಮುಖರಾದ ಮಾರುತಿ ಖಾಶೆಂಪುರ್, ಮಾರುತಿ ಬೌದ್ಧೆ, ಸಜ್ಜದ್ ಸಾಹೇಬ್, ಶಾಂತಕುಮಾರ್ ಸಾವಳಗಿ, ದೇವೇಂದ್ರ ಸೋನಿ, ಸಂಜುರೆಡ್ಡಿ ನಿರ್ಣಾ, ರಾಜು ಕಡ್ಯಾಳ, ತರುಣ್ ನಾಗಮಾರಪಳ್ಳಿ, ಸಂತೋಷ್ ರಾಸೂರೆ, ಜಾಪೆಡ್ ಕಡ್ಯಾಳ, ಅಭಿ ಕಾಳೆ, ಬೊಮಗೊಂಡ ಚಿಟ್ಟಾವಾಡಿ, ರೇವಣಸಿದ್ದಪ್ಪ ಸಿರಕಟ್ಟನಳ್ಳಿ, ಇಸ್ಲಾಹಿಲ್ ಸಾಬ್, ಲಲಿತಾ ಕರಂಜೆ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








