ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲೂ ಸಹ ಕೊರೋನಾ ವೈರಸ್ ಹಾವಳಿ ಆರಂಭಿಸಿದ್ದು, 32 ವರ್ಷದ ಮಹಿಳೆಗೆ ವೈರಸ್ ಪಾಸಿಟಿವ್ ಬಂದಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿಕೆ ನೀಡಿದ್ದು, ಭೀಮಸಮುದ್ರದ ಮನೆಯಲ್ಲಿದ್ದ ಒಟ್ಟು ಆರು ಮಂದಿ ಗಯಾನಾದಿಂದ ಭಾರತಕ್ಕೆ ಬಂದಿದ್ದರು. ಅದರಲ್ಲಿ 1 ಮಹಿಳೆಗೆ ಮಾತ್ರ ವೈರಸ್ ಪಾಸಿಟಿವ್ ಆಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ಮನೆಯ ಸುತ್ತ 5 ಕಿಮೀ ಪ್ರದೇಶವನ್ನು ರೆಡ್ ಝೋನ್ ಎಂದು ಘೋಷಣೆ ಮಡಿದ್ದು, ಇಲ್ಲಿ ಯಾರೂ ತೆರಳುವಂತಿಲ್ಲ ಎಂದಿದ್ದಾರೆ.
6 ಜನರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. 4 ಜನರ ವರದಿ ಬಂದಿದ್ದು, 4 ಜನರದ್ದು ನೆಗೆಟಿವ್ ಬಂದಿದೆ. ಇನ್ನೂ ಇಬ್ಬರ ವರದಿ ಬರುವುದು ಬಾಕಿ ಇದೆ. ಸೋಂಕಿತ ಮಹಿಳೆ ಜೊತೆ ಮಕ್ಕಳು ಇದ್ದರು. ಅದೃಷ್ಠವಷಾತ್ ಮಕ್ಕಳಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದು ವರದಿಯಾಗಿದೆ.
(ವರದಿ: ಪ್ರಕಾಶ್ ಮಂದಾರ)
Get in Touch With Us info@kalpa.news Whatsapp: 9481252093
Discussion about this post