ಕಲ್ಪ ಮೀಡಿಯಾ ಹೌಸ್ | ಕೊಚ್ಚಿ |
ಕುವೈತ್‌ನಲ್ಲಿ ಮೃತಪಟ್ಟ ಭಾರತೀಯರ ಮೃತದೇಹವನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಮತ್ತು ಕುವೈತ್‌ನ ಮಧ್ಯಸ್ಥಿಕೆ ಸಹಾಯ ಮಾಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ #CM Pinarai Vijayan ಹೇಳಿದ್ದಾರೆ.
ಕುಟುಂಬಸ್ಥರಿಗೆ ಪಾರ್ಥಿವ ಶರೀರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಅವರು, ಮೃತಪಟ್ಟವರ ಕುಟುಂಬಗಳಿಗೆ ಇದು ತುಂಬಲಾರದ ನಷ್ಟವಾಗಿದೆ. ಕುವೈತ್ ಸರ್ಕಾರವು ಪರಿಣಾಮಕಾರಿ ಮತ್ತು ನಿಷ್ಪಕ್ಷಪಾತ ಕ್ರಮಗಳನ್ನು ತೆಗೆದುಕೊಂಡಿದೆ. ದುರಂತದ ಬಗ್ಗೆ ತಿಳಿದಾಗ, ಭಾರತ ಸರ್ಕಾರವೂ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಂಡಿದೆ ಎಂದರು.

Also read: ತಾವಾಗೇ ಹಾಜರಾದರೆ ಒಳ್ಳೆಯದು: ಗೃಹಸಚಿವ ಪರಮೇಶ್ವರ್ ಹೀಗೆ ಹೇಳಿದ್ದೇಕೆ?
ಗುರುವಾರ ಕುವೈತ್‌ಗೆ ಧಾವಿಸಿದ ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಗ್ ಮೃತದೇಹಗಳನ್ನು ಹೊತ್ತ ವಿಮಾನದಲ್ಲಿ ಆಗಮಿಸಿದರು. ಕೇಂದ್ರ ಸಚಿವ ಸುರೇಶ್ ಗೋಪಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ವಿಮಾನ ನಿಲ್ದಾಣದಲ್ಲಿ ಭಾವಪೂರ್ಣವಾಗಿ ಬರಮಾಡಿಕೊಂಡರು. ಸಚಿವರಾದ ವೀಣಾ ಜಾರ್ಜ್, ಪಿ ರಾಜೀವ್, ಕೆ ರಾಜನ್ ಮತ್ತು ರೋಶಿ ಆಗಸ್ಟಿನ್ ಕೂಡ ಪಾರ್ಥಿವ ಶರೀರವನ್ನು ಸ್ವೀಕರಿಸಲು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post