ಬೆಂಗಳೂರು: ರಾಜ್ಯದ ಇತಿಹಾಸ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತತ್ತರಿಸಿರುವ ಕೊಡಗಿನ ಪರಿಸ್ಥಿತಿ ಕುರಿತಾಗಿ ಸ್ಯಾಂಡಲ್ ವುಡ್ ತಾರೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್, ಕೊಡಗು ಪ್ರವಾಹ ಸಂತ್ರಸ್ತರಿಗೆ ಜನರು ಎಲ್ಲವನ್ನೂ ಮಾಡಿದ್ದಾರೆ.. ಮಳೆ ನಿಂತ ಮೇಲೆ ಅಲ್ಲಿ ಬೇಕಾದ ಅಗತ್ಯ ಪರಿಹಾರವನ್ನು ಮಾಡಬೇಕಿದೆ.. ಸರ್ಕಾರ ಮಾಡುತ್ತೆ ಅಂತ ಕಾಯುತ್ತ ಕೂರುವುದು ಬೇಡ.. ನಾವೇ ಸರ್ಕಾರ..
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ರಿಯಲ್ ಸ್ಟಾರ್ ಉಪೇಂದ್ರ, ಅಲ್ಲಿನ ಜನರಿಗೆ ಅಗತ್ಯ ವಸ್ತುಗಳು ಈ ಎಆಗ ಅಗತ್ಯಕ್ಕಿಂತ ಜಾಸ್ತಿ ಹೋಗಿದೆ.. ಜನರೆಲ್ಲಾ ಸೇರಿ ಅವರಿಗೆ ಅಗತ್ಯಗಳನ್ನ ಪೂರೈಸಿದ್ದಾರೆ.. ಈಗ ಅಲ್ಲಿನ ಜನರಿಗೆ ಅದೆಲ್ಲವನ್ನೂ ಮೀರಿದ ಬೇರೆ ಸಮಸ್ಯಗಳಿವೆ ಎಂದಿದ್ದಾರೆ.
ಜನರಿಗಿಂತ ಹೆಚ್ಚಾಗಿ ಈಗ ಸರ್ಕಾರ ಜವಾಬ್ದಾರಿ ನಿಭಾಯಿಸಬೇಕಿದೆ. ಸರ್ಕಾರದಿಂದಲೇ ಒಂದು ರೆಸ್ಕ್ಯೂ ಟೀಮ್ ಯಾವಾಗಲೂ ರೆಡಿ ಇರಬೇಕು, ಇಂತಹ ಪ್ರಕೃತಿ ವಿಕೋಪಗಳು ಆದಾಗ ತತಕ್ಷಣವೇ ಕಾರ್ಯಾಚರಣೆ ಶುರು ಮಾಡುವಂತಿರಬೇಕು ಎಂದಿದ್ದಾರೆ.
Discussion about this post