ಕಲ್ಪ ಮೀಡಿಯಾ ಹೌಸ್ | ಕೋಲಾರ |
ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ಇಂದು ಕೋಲಾರ ಜಿಲ್ಲೆಯಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಲಿಮ್ಕಾ ಪುಸ್ತಕದಲ್ಲಿ ದಾಖಲೆ Limca record ನಿರ್ಮಿಸಲಾಯಿತು.
75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿದಲಾಗಿದ್ದ ಸಮಾರಂಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ ಹರ್ ಘರ್ ತಿರಂಗಾ ಅಭಿಯಾನದ ಕರೆಗೆ ಓಗೊಟ್ಟು ಕೋಲಾರ ಸಂಸದರಾದ ಎಸ್. ಮುನಿಸ್ವಾಮಿ ಅವರ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು ಕ್ರೀಡಾಂಗಣದ ಉದ್ದಗಲಕ್ಕೂ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ರಕ್ಷಣಾ ಇಲಾಖೆಯ ಸೇನಾ ವಿಮಾನದಿಂದ ಪುಷ್ಟವೃಷ್ಠಿ ಸಲ್ಲಿಸಲಾಯಿತು.
ಆ ಕ್ಷಣದಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ಥೋಮದ ಹರ್ಷೊದ್ಗಾರ ಎಲ್ಲೆಮೀರಿತ್ತು. ನಮ್ಮ ಧ್ವಜ ನಮ್ಮ ಹೆಮ್ಮೆ, ಭಾರತ ಮಾತೆಗೆ ಜೈಕಾರ ಸೇರಿದಂತೆ ದೇಶಪ್ರೇಮದ ಘೋಷಣೆಗಳನ್ನು ಕೂಗಿದರು. ಸಹಸ್ರಾರು ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಶಾಲಾ ಮಕ್ಕಳು ಸಂತಸದಿಂದ ಕುಣಿದಾಡಿದರು.
ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ, ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಸಹ ಧ್ವಜಾರೋಹಣ ವೇದಿಕೆಯ ಮೇಲೆ ಸೇರಿಕೊಂಡು ಬೃಹತ್ ಬಾವುಟವನ್ಮು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
205×630 ಅಡಿ ವಿಸ್ತಿರ್ಣವನ್ನು ಹೊಂದಿದ ರಾಷ್ಟ್ರಧ್ವಜವು ಒಟ್ಟು 1.29 ಲಕ್ಷ ಚದರ ಅಡಿ ಇದ್ದು, ಅದರಲ್ಲಿ 3,600 ಚದರಡಿಯ ಅಶೋಕ ಚಕ್ರವನ್ನು ರೂಪಿಸಲಾಗಿದೆ. ಈ ಬಾವುಟ ತಯಾರಿಸಲು ಸುಮಾರು 12,800 ಮೀಟರ್ ಬಟ್ಟೆ ಬಳಸಲಾಗಿದ್ದು, 3,200 ಕೆ.ಜಿ ತೂಕ ಹೊಂದಿದೆ.
Also read: ಹಕ್ಕಿನಷ್ಟೇ ಕರ್ತವ್ಯದ ಬಗ್ಗೆಯೂ ಆಸ್ಥೆ ಮೂಡಿಸಿಕೊಳ್ಳಬೇಕು: ಶ್ರೀಪಾದ ಬಿಚ್ಚುಗತ್ತಿ ಕರೆ
ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ, ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ನಸೀರ್ ಅಹಮದ್, ಎಂ.ಎಲ್ ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷರಾದ ಶ್ವೇತಾಶಬರೀಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ ಸೇರಿದಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post