ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ಕೋಲ್ಕತ್ತಾ: 7 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಕೋಲ್ಕತ್ತಾ #Kolkata ವಿಶೇಷ ನ್ಯಾಯಾಲಯವು #Special Court ಗಲ್ಲು ಶಿಕ್ಷೆ ವಿಧಿಸಿ ತೀರ್ಪು
ರಜೀಬ್ ಘೋಷ್ ಎಂಬಾತ ನಗರದ ಬರ್ತೊಲ್ಲಾ ಪ್ರದೇಶದಿಂದ 7 ತಿಂಗಳ ಮಗುವನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿ ಮತ್ತು ಕೊಲೆಗೆ ಯತ್ನಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ಬ್ಯಾಂಕ್‌ಶಾಲ್ ನ್ಯಾಯಾಲಯದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ನ್ಯಾಯಾಲಯವು ಆರೋಪಿಗೆ ಗಲ್ಲು ಶಿಕ್ಷೆ #Sentence to Death ವಿಧಿಸಿ ತೀರ್ಪು ಪ್ರಕಟಿಸಿದೆ.
`ಅಪರೂಪದಲ್ಲಿ ಅಪರೂಪದ’ ವರ್ಗಕ್ಕೆ ಈ ಪ್ರಕರಣ ಸೇರಿರುವುದರಿಂದ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ವಕೀಲರು ವಾದಿಸಿದ್ದರು ಬಳಿಕ ಅಂತಿಮ ಸುತ್ತಿನ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 65(2), 140(4), 137(2) ಮತ್ತು 118 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ರಜೀಬ್ ಘೋಷ್‌ಗೆ ನ್ಯಾಯಮೂರ್ತಿ ಇಂದ್ರಿಲಾ ಮುಖರ್ಜಿ ಶಿಕ್ಷೆ ವಿಧಿಸಿದ್ದಾರೆ.
ಕಳೆದ ವರ್ಷ ನವಂಬರ್ 30ರಂದು ರಜೀಬ್ ಘೋಷ್, ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ. ಡಿ.5ರಂದು ಜಹರ್‌ಗ್ರಾಮ್ ಜಿಲ್ಲೆಯ ಗೋಪಿಬಲ್ಲವಪುರದ ನಿವಾಸದಲ್ಲಿ ರಜೀಬ್‌ನನ್ನು ಪೊಲೀಸರು ಬಂಧಿಸಿದ್ದರು.
ಸಂತ್ರಸ್ತ ಮಗುವಿನ ಕುಟಂಬ ರಸ್ತೆ ಬದಿಯ ಗುಡಿಸಲು ನಿವಾಸಿಯಾಗಿದ್ದು, ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿಭಾಸ್ ಚಟರ್ಜಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post