ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವಿನ ಕರಾವಳಿ ಪ್ರದೇಶಕ್ಕೆ ರೆಮಲ್ ಚಂಡಮಾರುತ #Remel Cyclone ನಿನ್ನೆ ರಾತ್ರಿ ಅಪ್ಪಳಿಸಿದ್ದು, 7 ಮಂದಿ ಬಲಿಯಾಗಿದ್ದಾರೆ.
#WATCH | Waterlogging witnessed in parts of West Bengal’s Kolkata following heavy rain.
Visuals from Race Course Area pic.twitter.com/sfoDPVczPj
— ANI (@ANI) May 27, 2024
ಗಂಟೆಗೆ ಸುಮಾರು 110-135 ಕಿಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಇದು ಸೃಷ್ಠಿಸಿರುವ ಅವಾಂತರಕ್ಕೆ ಏಳು ಮಂದಿ ಬಲಿಯಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಮಾರು 1 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

Also read: ಪೋಷಕರೇ ಎಚ್ಚರ | ಆಟವಾಡುತ್ತಿದ್ದಾಲೇ ಸಂಪ್’ನಲ್ಲಿ ಬಿದ್ದು 2 ವರ್ಷದ ಮಗು ಸಾವು
ನಿನ್ನೆ ಮತ್ತು ಇಂದು ರಾಜ್ಯದ ಪಶ್ಚಿಮ ಮೇದಿನಿಪುರ್, ಪುಬಾರ್ ಬರ್ಧಮಾನ್ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮೀನುಗಾರರಿಗೆ ನಾಳೆಯವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣವು ನಿನ್ನೆ ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರು ನಿನ್ನೆ ಭಾನುವಾರ ಸಂಜೆಯಿAದ 12 ಗಂಟೆಗಳ ಕಾಲ ಎಲ್ಲಾ ಸರಕು ಮತ್ತು ಕಂಟೈನರ್ ನಿರ್ವಹಣೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post